Luke · chapter 17 · verse 28
Luke 17:28 in Kannada
ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
Ade prakaara lotana divasagalalliyoo ittu. Avaru tinnu ttiddaru, kudiyuttiddaru; avaru kondukollu ttiddaru, maaruttiddaru; avaru neduttiddaru mattu kattuttiddaru.
Luke 17:28 in English
- King James Version (KJV)
- Likewise also as it was in the days of Lot; they did eat, they drank, they bought, they sold, they planted, they builded;
- World English Bible (WEB)
- Likewise, even as it was in the days of Lot: they ate, they drank, they bought, they sold, they planted, they built;
- American Standard Version (ASV)
- Likewise even as it came to pass in the days of Lot; they ate, they drank, they bought, they sold, they planted, they builded;
- Bible in Basic English (BBE)
- In the same way, in the days of Lot; they were feasting and trading, they were planting and building;
- Darby Translation (DBY)
- and in like manner as took place in the days of Lot: they ate, they drank, they bought, they sold, they planted, they builded;
- Webster's Bible (WBS)
- Likewise also as it was in the days of Lot: they ate, they drank, they bought, they sold, they planted, they built;
- Young's Literal Translation (YLT)
- in like manner also, as it came to pass in the days of Lot; they were eating, they were drinking, they were buying, they were selling, they were planting, they were building;
Read in context
- 26ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.
- 27ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು.
- 28ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
- 29ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.
- 30ಮನುಷ್ಯಕುಮಾರನು ಪ್ರತ್ಯಕ್ಷನಾಗುವ ದಿನದಲ್ಲಿ ಹೀಗೆಯೇ ಇರುವದು.
Cross references
- Ezekiel 16:49–50 ಯೆಹೆಜ್ಕೇಲನು 16:49–50ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು.
- Genesis 18:20–21 ಆದಿಕಾಂಡ 18:20–21ಕರ್ತನು--ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಅದರ ಕೂಗಿನ ಪ್ರಕಾರವೇ ಅವರು ಮಾಡಿದ್ದಾರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುವೆನು ಅಂದನು.
- James 5:1–5 ಯಾಕೋಬನು 5:1–5ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ ನಿಮ್ಮ ಐಶ್ವರ್ಯವು ನಾಶವಾಗಿದೆ, ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದವೆ; ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದು ಬಿಡುವದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿ ದ್ದೀರಿ. ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ. ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.
- Genesis 13:13 ಆದಿಕಾಂಡ 13:13ಆದರೆ ಸೊದೋಮಿನ ಮನುಷ್ಯರು ದುಷ್ಟರೂ ಕರ್ತನ ದೃಷ್ಟಿಯಲ್ಲಿ ಬಹು ಪಾಪಿಷ್ಠರೂ ಆಗಿದ್ದರು.
- Genesis 19:1–28 ಆದಿಕಾಂಡ 19:1–28ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮ್ಗೆ ಬಂದಾಗ ಲೋಟನು ಸೊದೋ ಮ್ನ ಬಾಗಲಲ್ಲಿ ಕೂತಿದ್ದನು. ಲೋಟನು ಅವರನ್ನು ಎದುರುಗೊಳ್ಳುವದಕ್ಕೆ ಎದ್ದು ನೆಲದ ಮಟ್ಟಿಗೆ ಬೊಗ್ಗಿ ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು. ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ ಅವರು ತಿರುಗಿಕೊಂಡು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟನು. ಅವರು ಊಟಮಾಡಿದರು. ಆದರೆ ಅವರು ಮಲಗುವದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರ ವರೆಗೆ ಜನರೆಲ್ಲಾ ಪ್ರತಿಯೊಂದು ಮೂಲೆಯಿಂದ ಕೂಡಿ ಮನೆಯನ್ನು ಸುತ್ತಿಕೊಂಡರು. ಅವರು ಲೋಟನನ್ನು ಕರೆದು ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಹೊರಗೆ ತೆಗೆದುಕೊಂಡು ಬಾ; ನಾವು ಅವರನ್ನು ಅರಿಯಬೇಕು ಎಂದು ಅವನಿಗೆ ಹೇಳಿದರು. ಆಗ ಲೋಟನು ಅವರ ಬಳಿಗೆ ಹೊರಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು-- ನನ್ನ ಸಹೋದರರೇ, ಈ ಅತಿದುಷ್ಟ ತನವನ್ನು ಮಾಡಬೇಡಿರಿ. ಇಗೋ, ಗಂಡಸರನ್ನು ಅರಿಯದ ಇಬ್ಬರು ಕುಮಾರ್ತೆಯರು ನನಗೆ ಇದ್ದಾರೆ; ಅವರನ್ನು ನಿಮ್ಮ ಬಳಿಗೆ ಹೊರ ತರುವೆನು; ನಿಮ್ಮ ದೃಷ್ಟಿಗೆ ಒಳ್ಳೇದೆಂದು ಕಾಣುವಹಾಗೆ ನೀವು ಅವರಿಗೆ ಮಾಡಿರಿ; ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ; ಅವರು ನನ್ನ ಮನೆಗೆ ಆಶ್ರಯಕ್ಕಾಗಿ ಬಂದಿದ್ದಾರೆ ಎಂದು ಬೇಡಿಕೊಂಡನು. ಆದರೆ ಅವರು--ಹಿಂದಕ್ಕೆ ಸರಿ ಎಂದು ಹೇಳಿ --ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿ ಆಗಬೇಕೆಂದಿದ್ದಾನೆ; ಈಗ ನಿನಗೆ ಅವರಿಗಿಂತ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ ಅಂದರು. ಅವರು ಲೋಟನನ್ನು ಬಹಳವಾಗಿ ಇರುಕಿಸಿ ಬಾಗಲನ್ನು ಮುರಿಯಲು ಸವಿಾಪಕ್ಕೆ ಬಂದರು. ಆಗ ಆ ಮನುಷ್ಯರು (ಲೋಟನ ಬಳಿಗೆ ಬಂದಿದ್ದವರು) ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಮನೆಯೊಳಗೆ ಎಳಕೊಂಡು ಬಾಗಲನ್ನು ಮುಚ್ಚಿದರು. ಬಾಗಲಲ್ಲಿದ್ದ ಮನುಷ್ಯರನ್ನು ಕಿರಿಯರಿಂದ ಹಿರಿಯರ ವರೆಗೆ ಕುರುಡರನ್ನಾಗಿ ಮಾಡಿದರು. ಆಗ ಅವರು ಬಾಗಲನ್ನು ಕಂಡುಕೊಳ್ಳಲಾರದೆ ಬೇಸರಗೊಂಡರು. ಆ ಮನುಷ್ಯರು ಲೋಟನಿಗೆ--ಇಲ್ಲಿ ನಿನಗೆ ಇನ್ನು ಯಾರಾದರೂ ಇದ್ದಾರೋ? ಅಳಿಯಂದಿರನ್ನೂ ಕುಮಾರರನ್ನೂ ನಿನ್ನ ಕುಮಾರ್ತೆಯರನ್ನೂ ಮತ್ತು ಪಟ್ಟಣದಲ್ಲಿ ನಿನಗಿರುವ ಎಲ್ಲವನ್ನೂ ಈ ಸ್ಥಳದಿಂದ ಹೊರಗೆ ತೆಗೆದುಕೊಂಡು ಬಾ. ಈ ಸ್ಥಳದವರ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿರುವದರಿಂದ ನಾವು ಇದನ್ನು ನಾಶಮಾಡುತ್ತೇವೆ; ಕರ್ತನು ಅದನ್ನು ನಾಶಮಾಡುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆ ಅಂದರು. ಆಗ ಲೋಟನು ಹೊರಟುಹೋಗಿ ತನ್ನ ಕುಮಾರ್ತೆಯರು ಮದುವೆಯಾದ ಅಳಿಯಂದಿರ ಸಂಗಡ ಮಾತನಾಡಿ--ಎದ್ದು ಈ ಸ್ಥಳದಿಂದ ಹೊರಡಿರಿ; ಯಾಕಂದರೆ ಕರ್ತನು ಈ ಪಟ್ಟಣವನ್ನು ನಾಶ ಮಾಡುವದಕ್ಕಿದ್ದಾನೆ ಅಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಅಪಹಾಸ್ಯ ಮಾಡುವಂತೆ ಕಾಣಿಸಿಕೊಂಡನು. ಸೂರ್ಯೋದಯವಾದಾಗ ದೂತರು ಲೋಟನನ್ನು ತ್ವರೆಪಡಿಸಿ--ನೀನು ಈ ಪಟ್ಟಣದ ದುಷ್ಟತನದಿಂದ ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಇಬ್ಬರು ಕುಮಾರ್ತೆಯರನ್ನೂ ಕರಕೊಂಡು ನಡೆ ಅಂದರು. ಅವರು ತಡಮಾಡಿದಾಗ ಕರ್ತನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಅವನ ಇಬ್ಬರು ಕುಮಾರ್ತೆಯರ ಕೈಯನ್ನೂ ಹಿಡಿದು, ಅವನನ್ನು ಪಟ್ಟಣದ ಹೊರಗೆ ತಂದುಬಿಟ್ಟರು; ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು. ಲೋಟನು ಅವರಿಗೆ--ಹಾಗಲ್ಲ, ನನ್ನ ಕರ್ತನೇ, ಇಗೋ, ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ಕೃಪೆಯನ್ನು ಘನಪಡಿಸಿದ್ದೀ. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗಲಾರೆನು; ನನಗೆ ಕೇಡು ಉಂಟಾಗಿ ನಾನು ಸತ್ತೇನು; ಇಗೋ, ಈ ಪಟ್ಟಣವನ್ನು ನೋಡು. ನಾನು ಅಲ್ಲಿಗೆ ಓಡಿಹೋಗುವ ಹಾಗೆ ಸವಿಾಪವಾಗಿದೆ ಮತ್ತು ಅದು ಸಣ್ಣದು; ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುವೆನು; (ಅದು ಸಣ್ಣದಲ್ಲವೋ?) ಹೀಗೆ ನನ್ನ ಪ್ರಾಣವು ಉಳಿಯುವದು ಅಂದನು. ಆತನು ಅವನಿಗೆ--ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ, ನೋಡು; ನೀನು ಹೇಳಿದ ಆ ಪಟ್ಟಣವನ್ನು ಕೆಡವಿಹಾಕುವದಿಲ್ಲ. ತ್ವರೆಯಾಗಿ ತಪ್ಪಿಸಿಕೊಂಡು ಅಲ್ಲಿಗೆ ಹೋಗು; ಯಾಕಂದರೆ ನೀನು ಅಲ್ಲಿಗೆ ಹೋಗುವ ವರೆಗೆ ನಾನೇನೂ ಮಾಡಲಾರೆನು ಅಂದನು. ಆದದರಿಂದ ಆ ಪಟ್ಟಣಕ್ಕೆ ಚೋಗರ್ ಎಂದು ಹೆಸರಾಯಿತು. ಲೋಟನು ಚೋಗರಿಗೆ ಬಂದಾಗ ಭೂಮಿಯ ಮೇಲೆ ಸೂರ್ಯನು ಉದಯಿ ಸಿದನು. ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು. ಹೀಗೆ ಆತನು ಆ ಪಟ್ಟಣಗಳನ್ನೂ ಎಲ್ಲಾ ಮೈದಾನವನ್ನೂ ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಹಾಳುಮಾಡಿದನು. ಆದರೆ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು. ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಕರ್ತನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಬಂದು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶ ಗಳ ಕಡೆಗೂ ನೋಡಿದನು. ಆಗ ಇಗೋ, ಆ ದೇಶದ ಹೊಗೆಯು ಆವಿಗೆಯ ಹೊಗೆಯ ಹಾಗೆ ಏರಿತು.