Matthew · chapter 18 · verse 23
Matthew 18:23 in Kannada
ಆದದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತಕ್ಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
Aadadarinda paraloka raajyavu tanna sevakarinda lekkavannu takkollabekendidda obba arasanige holikeyaagide.
Matthew 18:23 in English
- King James Version (KJV)
- Therefore is the kingdom of heaven likened unto a certain king, which would take account of his servants.
- World English Bible (WEB)
- Therefore the Kingdom of Heaven is like a certain king who wanted to settle accounts with his servants.
- American Standard Version (ASV)
- Therefore is the kingdom of heaven likened unto a certain king, who would make a reckoning with his servants.
- Bible in Basic English (BBE)
- For this reason the kingdom of heaven is like a king, who went over his accounts with his servants.
- Darby Translation (DBY)
- For this cause the kingdom of the heavens has become like a king who would reckon with his bondmen.
- Webster's Bible (WBS)
- Therefore is the kingdom of heaven likened to a certain king who would take account of his servants.
- Young's Literal Translation (YLT)
- 'Because of this was the reign of the heavens likened to a man, a king, who did will to take reckoning with his servants,
Read in context
- 21ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು.
- 22ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ;
- 23ಆದದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತಕ್ಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
- 24ಅವನು ಲೆಕ್ಕವನ್ನು ತಕ್ಕೊಳ್ಳಲು ಪ್ರಾರಂಭಿಸಿದಾಗ ಹತ್ತು ಸಾವಿರ ತಲಾಂತುಗಳನ್ನು ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.
- 25ಆದರೆ ಕೊಡುವದಕ್ಕೆ ಅವನಿಗೆ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅವನ ಯಜಮಾನನು ಅಪ್ಪಣೆ ಕೊಟ್ಟನು.
Cross references
- Romans 14:12 ರೋಮಾಪುರದವರಿಗೆ 14:12ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕು.
- Matthew 13:24 ಮತ್ತಾಯನು 13:24ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ--ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.
- Matthew 3:2 ಮತ್ತಾಯನು 3:2ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.
- Matthew 13:44–45 ಮತ್ತಾಯನು 13:44–45ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ. ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
- Luke 16:1–2 ಲೂಕನು 16:1–2ತರುವಾಯ ಆತನು ತನ್ನ ಶಿಷ್ಯರಿಗೂ ಆಗ ಅವನು ಆ ಮನೆವಾರ್ತೆ ಯವನನ್ನು ಕರೆದು ಅವನಿಗೆ--ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವದು? ಮನೆವಾರ್ತೆಯ ನಿನ್ನ ಲೆಕ್ಕವನ್ನು ಒಪ್ಪಿಸು; ಯಾಕಂದರೆ ನೀನು ಇನ್ನು ಮೇಲೆ ಮನೆವಾರ್ತೆಯವನಾಗಿರುವದಕ್ಕಾಗುವದಿಲ್ಲ ಅಂದನು.
- Matthew 13:47 ಮತ್ತಾಯನು 13:47ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
- Luke 19:12–27 ಲೂಕನು 19:12–27ಅದೇ ನಂದರೆ--ಕೀರ್ತಿವಂತನಾದ ಒಬ್ಬಾನೊಬ್ಬ ಮನುಷ್ಯನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರಿಗಿ ಬರುವದಕ್ಕಾಗಿ ದೂರ ದೇಶಕ್ಕೆ ಹೊರಟುಹೋದನು. ಅವನು ತನ್ನ ಹತ್ತು ಆಳುಗಳನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಒಪ್ಪಿಸಿ--ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರ್ರಿ ಎಂದು ಹೇಳಿದನು. ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು. ಇದಾದ ಮೇಲೆ ಅವನು ರಾಜ್ಯವನ್ನು ಪಡೆದು ಹಿಂದಿರುಗಿದಾಗ ವ್ಯಾಪಾ ರದಿಂದ ಪ್ರತಿಯೊಬ್ಬ ಮನುಷ್ಯನು ಎಷ್ಟು ಲಾಭವನ್ನು ಪಡೆದನೆಂದು ತಿಳುಕೊಳ್ಳುವಂತೆ ತಾನು ಹಣಕೊಟ್ಟ ಆ ಆಳುಗಳನ್ನು ತನ್ನ ಬಳಿಗೆ ಕರೆಯಬೇಕೆಂದು ಆಜ್ಞಾಪಿ ಸಿದನು. ಆಗ ಮೊದಲನೆಯವನು ಬಂದು--ಒಡೆಯನೇ, ನಿನ್ನ ಮೊಹರಿನಿಂದ ಹತ್ತು ಮೊಹರಿಗಳನ್ನು ಸಂಪಾದಿಸಿದ್ದೇನೆ ಅಂದನು. ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು. ಎರಡನೆಯವನು ಬಂದು--ಒಡೆಯನೇ, ನಿನ್ನ ಮೊಹರಿಯಿಂದ ಐದು ಮೊಹರಿಗಳನ್ನು ಸಂಪಾ ದಿಸಿದ್ದೇನೆ ಅಂದನು. ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು. ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ. ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು. ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ. ಹಾಗಿದ್ದರೆ ನನ್ನ ಹಣವನ್ನು ಧನ ವ್ಯವಹಾರದ ಸಂಸ್ಥೆಯಲ್ಲಿ ಯಾಕೆ ಹಾಕಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಅವನಿಗೆ ಹೇಳಿದನು. ಅವನು ಹತ್ತಿರ ನಿಂತಿದ್ದವರಿಗೆ--ಇವನ ಕಡೆಯಿಂದ ಆ ಮೊಹರಿಯನ್ನು ತಕ್ಕೊಂಡು ಹತ್ತು ಮೊಹರಿಗಳಿ ದ್ದವನಿಗೆ ಕೊಡಿರಿ ಅಂದನು. (ಆಗ ಅವರು ಅವ ನಿಗೆ--ಒಡೆಯನೇ, ಅವನಿಗೆ ಹತ್ತು ಮೊಹರಿಗಳಿವೆ ಯಲ್ಲಾ ಅಂದರು.) ಆದರೆ ನಾನು ನಿಮಗೆ ಹೇಳು ವದೇನಂದರೆ--ಇದ್ದ ಪ್ರತಿಯೊಬ್ಬನಿಗೆ ಕೊಡಲ್ಪಡು ವದು ಮತ್ತು ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು. ಆದರೆ ತಮ್ಮ ಮೇಲೆ ನಾನು ಆಡಳಿತ ಮಾಡುವದಕ್ಕೆ ಮನಸ್ಸಿಲ್ಲದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ ಅಂದನು.
- Matthew 25:14 ಮತ್ತಾಯನು 25:14ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
- 2 Corinthians 5:10–11 2 ಕೊರಿಂಥದವರಿಗೆ 5:10–11ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೆಯದಕ್ಕಾಗಲಿ ಕೆಟ್ಟದ್ದಕ್ಕಾಗಲಿ ಸರಿಯಾದದ್ದನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿ ಕೊಳ್ಳಲೇಬೇಕು. ನಾವು ಕರ್ತನ ಭಯವನ್ನು ಅರಿತವರಾದ ಕಾರಣ ಮನುಷ್ಯರನ್ನು ಒಡಂಬಡಿಸುತ್ತೇವೆ; ಆದರೆ ನಾವು ದೇವರಿಗೂ ನಿಮ್ಮ ಮನಸ್ಸಾಕ್ಷಿಗಳಿಗೂ ತೋರಿ ಬಂದಿದ್ದೇವೆಂದು ನಾನು ಭರವಸವುಳ್ಳವನಾಗಿದ್ದೇನೆ.
- 1 Corinthians 4:5 1 ಕೊರಿಂಥದವರಿಗೆ 4:5ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- Matthew 13:52 ಮತ್ತಾಯನು 13:52ಆತನು ಅವರಿಗೆ--ಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು.
- Matthew 13:31 ಮತ್ತಾಯನು 13:31ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.