Matthew · chapter 5 · verse 8
Matthew 5:8 in Kannada
ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
Shuddha hrudayavullavaru dhanyaru; yaakandare avaru devarannu noduvaru.
Matthew 5:8 in English
- King James Version (KJV)
- Blessed [are] the pure in heart: for they shall see God.
- World English Bible (WEB)
- Blessed are the pure in heart, for they shall see God.
- American Standard Version (ASV)
- Blessed are the pure in heart: for they shall see God.
- Bible in Basic English (BBE)
- Happy are the clean in heart: for they will see God.
- Darby Translation (DBY)
- Blessed the pure in heart, for they shall see God.
- Webster's Bible (WBS)
- Blessed [are] the pure in heart: for they shall see God.
- Young's Literal Translation (YLT)
- 'Happy the clean in heart — because they shall see God.
Read in context
- 6ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
- 7ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು.
- 8ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
- 9ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು.
- 10ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.
Cross references
- Psalm 24:4 ಕೀರ್ತನೆಗಳು 24:4ಶುದ್ಧ ಹಸ್ತಗಳೂ ನಿರ್ಮಲವಾದ ಹೃದ ಯವೂ ಉಳ್ಳವನಾಗಿದ್ದು ತನ್ನ ಪ್ರಾಣವನ್ನು ವ್ಯರ್ಥ ತ್ವಕ್ಕೆ ಎತ್ತದೆಯೂ ಇಲ್ಲವೆ ಮೋಸದಿಂದ ಆಣೆ ಇಡ ದೆಯೂ ಇರುವವನೇ.
- Psalm 51:10 ಕೀರ್ತನೆಗಳು 51:10ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.
- Hebrews 10:22 ಇಬ್ರಿಯರಿಗೆ 10:22ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
- Hebrews 12:14 ಇಬ್ರಿಯರಿಗೆ 12:14ಎಲ್ಲರ ಸಂಗಡ ಸಮಾಧಾನದಿಂದಿರುವದನ್ನೂ ಪರಿಶುದ್ಧತೆಯನ್ನೂ ಅನುಸರಿಸಿರಿ; ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ.
- Ezekiel 36:25–27 ಯೆಹೆಜ್ಕೇಲನು 36:25–27ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.
- Proverbs 22:11 ಜ್ಞಾನೋಕ್ತಿಗಳು 22:11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- James 4:8 ಯಾಕೋಬನು 4:8ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.
- 1 Peter 1:22 1 ಪೇತ್ರನು 1:22ನೀವು ಆತ್ಮನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟ ವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರ ಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.
- James 3:17 ಯಾಕೋಬನು 3:17ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- Psalm 15:2 ಕೀರ್ತನೆಗಳು 15:2ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.
- Titus 1:15 ತೀತನಿಗೆ 1:15ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲ ದವರಿಗೂ ಯಾವದೂ ಶುದ್ಧವಲ್ಲ; ಆದರೆ ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಕೂಡ ಮಲಿನವಾಗಿವೆ.ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
- Psalm 73:1 ಕೀರ್ತನೆಗಳು 73:1ನಿಜವಾಗಿ ದೇವರು ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವನು.