Matthew · chapter 5 · verse 6
Matthew 5:6 in Kannada
ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
Neetigoskara hasidu baayaaridavaru dhanyaru; yaakandare avaru trupti honduvaru.
Matthew 5:6 in English
- King James Version (KJV)
- Blessed [are] they which do hunger and thirst after righteousness: for they shall be filled.
- World English Bible (WEB)
- Blessed are those who hunger and thirst for righteousness, for they shall be filled.
- American Standard Version (ASV)
- Blessed are they that hunger and thirst after righteousness: for they shall be filled.
- Bible in Basic English (BBE)
- Happy are those whose heart's desire is for righteousness: for they will have their desire.
- Darby Translation (DBY)
- Blessed they who hunger and thirst after righteousness, for they shall be filled.
- Webster's Bible (WBS)
- Blessed [are] they who hunger and thirst for righteousness: for they shall be filled.
- Young's Literal Translation (YLT)
- 'Happy those hungering and thirsting for righteousness — because they shall be filled.
Read in context
- 4ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
- 5ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.
- 6ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
- 7ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು.
- 8ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
Cross references
- Psalm 107:9 ಕೀರ್ತನೆಗಳು 107:9ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ.
- John 4:14 ಯೋಹಾನನು 4:14ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.
- John 6:27 ಯೋಹಾನನು 6:27ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.
- John 6:48–58 ಯೋಹಾನನು 6:48–58ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.
- Psalm 145:19 ಕೀರ್ತನೆಗಳು 145:19ತನಗೆ ಭಯಪಡುವವರ ಇಷ್ಟವನ್ನು ತೀರಿಸುತ್ತಾನೆ. ಅವರ ಮೊರೆಯನ್ನು ಕೇಳಿ ಅವರನ್ನು ರಕ್ಷಿಸುತ್ತಾನೆ.
- Isaiah 55:1–3 ಯೆಶಾಯ 55:1–3ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ. ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ! ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
- John 7:37 ಯೋಹಾನನು 7:37ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
- Luke 6:21 ಲೂಕನು 6:21ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ.
- Revelation 7:16 ಪ್ರಕಟನೆ 7:16ಇನ್ನು ಮೇಲೆ ಅವರಿಗೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಆಗುವದೇ ಇಲ್ಲ; ಇದಲ್ಲದೆ ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ.ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Psalm 42:1–2 ಕೀರ್ತನೆಗಳು 42:1–2ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ. ದೇವರಿ ಗೋಸ್ಕರ ಹೌದು, ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ; ಯಾವಾಗ ಬಂದು ದೇವರ ಮುಂದೆ ಕಾಣಿಸಿಕೊಳ್ಳಲಿ?
- Isaiah 44:3 ಯೆಶಾಯ 44:3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- Psalm 63:1–2 ಕೀರ್ತನೆಗಳು 63:1–2ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ. ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.