Matthew · chapter 7 · verse 6
Matthew 7:6 in Kannada
ನಾಯಿಗಳಿಗೆ ಪವಿತ್ರವಾದದ್ದನ್ನು ಕೊಡಬೇಡಿರಿ ಇಲ್ಲವೆ ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ. ಹಾಕಿದರೆ ಅವುಗಳನ್ನು ತುಳಿದು ಬಿಟ್ಟು ಮತ್ತೆ ತಿರುಗಿಕೊಂಡು ನಿಮ್ಮನ್ನು ಹರಿದು ಬಿಟ್ಟಾವು.
Naayigalige pavitravaadaddannu kodabediri illave nimma muttugalannu handigala munde haakabediri. Haakidare avugalannu tulidu bittu matte tirugikondu nimmannu haridu bittaavu.
Matthew 7:6 in English
- King James Version (KJV)
- Give not that which is holy unto the dogs, neither cast ye your pearls before swine, lest they trample them under their feet, and turn again and rend you.
- World English Bible (WEB)
- “Don’t give that which is holy to the dogs, neither throw your pearls before the pigs, lest perhaps they trample them under their feet, and turn and tear you to pieces.
- American Standard Version (ASV)
- Give not that which is holy unto the dogs, neither cast your pearls before the swine, lest haply they trample them under their feet, and turn and rend you.
- Bible in Basic English (BBE)
- Do not give that which is holy to the dogs, or put your jewels before pigs, for fear that they will be crushed under foot by the pigs whose attack will then be made against you.
- Darby Translation (DBY)
- Give not that which is holy to the dogs, nor cast your pearls before the swine, lest they trample them with their feet, and turning round rend you.
- Webster's Bible (WBS)
- Give not that which [is] holy to dogs, neither cast ye your pearls before swine, lest they trample them under their feet, and turn again and rend you.
- Young's Literal Translation (YLT)
- 'Ye may not give that which is [holy] to the dogs, nor cast your pearls before the swine, that they may not trample them among their feet, and having turned — may rend you.
Read in context
- 4ಇಲ್ಲವೆ ನೀನು ನಿನ್ನ ಸಹೋದರನಿಗೆ--ನಿನ್ನ ಕಣ್ಣಿ ನೊಳಗಿಂದ ರವೆಯನ್ನು ತೆಗೆಯುತ್ತೇನೆ ಎಂದು ಹೇಗೆ ಹೇಳುತ್ತೀ? ಆದರೆ ಇಗೋ, ನಿನ್ನ ಸ್ವಂತ ಕಣ್ಣಿನಲ್ಲಿ ತೊಲೆ ಇದೆಯಲ್ಲಾ?
- 5ಕಪಟಿ ನೀನು, ಮೊದಲು ನಿನ್ನ ಸ್ವಂತ ಕಣ್ಣಿನೊಳಗಿರುವ ತೊಲೆ ಯನ್ನು ತೆಗೆದು ಹಾಕು; ಆಗ ನಿನ್ನ ಸಹೋದರನ ಕಣ್ಣಿನೊಳಗಿರುವ ರವೆಯನ್ನು ತೆಗೆದು ಹಾಕುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು.
- 6ನಾಯಿಗಳಿಗೆ ಪವಿತ್ರವಾದದ್ದನ್ನು ಕೊಡಬೇಡಿರಿ ಇಲ್ಲವೆ ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ. ಹಾಕಿದರೆ ಅವುಗಳನ್ನು ತುಳಿದು ಬಿಟ್ಟು ಮತ್ತೆ ತಿರುಗಿಕೊಂಡು ನಿಮ್ಮನ್ನು ಹರಿದು ಬಿಟ್ಟಾವು.
- 7ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು.
- 8ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.
Cross references
- Proverbs 9:7–8 ಜ್ಞಾನೋಕ್ತಿಗಳು 9:7–8ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು. ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
- Proverbs 23:9 ಜ್ಞಾನೋಕ್ತಿಗಳು 23:9ಬುದ್ಧಿ ಹೀನನ ಸಂಗಡ ಮಾತಾಡಬೇಡ; ನಿನ್ನ ಮಾತುಗಳ ಜ್ಞಾನವನ್ನು ಅವನು ತಿರಸ್ಕರಿಸುವನು.
- Matthew 10:14–15 ಮತ್ತಾಯನು 10:14–15ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲೀ ಪಟ್ಟಣದಿಂದಾಗಲೀ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ್ಟಣಕ್ಕಿಂತ ಸೊದೋಮ್ ಗೊಮೋರ ಪಟ್ಟಣಗಳ ಗತಿಯು ತಾಳಬಹುದಾಗಿರುವದು.
- Proverbs 26:11 ಜ್ಞಾನೋಕ್ತಿಗಳು 26:11ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
- Matthew 15:26 ಮತ್ತಾಯನು 15:26ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು.
- Acts 13:45–47 ಅಪೊಸ್ತಲರ ಕೃತ್ಯಗಳು 13:45–47ಆದರೆ ಯೆಹೂದ್ಯರು ಜನ ಸಮೂಹಗಳನ್ನು ನೋಡಿ ಹೊಟ್ಟೇಕಿಚ್ಚಿನಿಂದ ತುಂಬಿ ದವರಾಗಿ ಪೌಲನು ಹೇಳಿದವುಗಳನ್ನು ವಿರೋಧಿಸಿ ದೇವದೂಷಣೆ ಮಾಡುತ್ತಾ ಎದುರು ಮಾತನಾಡಿದರು. ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ. ಯಾಕಂ ದರೆ--ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಣೆಗೆ ಕಾರಣವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ಹೇಳಿದ ಹಾಗೆ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ.
- Philippians 3:2 ಫಿಲಿಪ್ಪಿಯವರಿಗೆ 3:2ನಾಯಿಗಳಿಗೆ ಎಚ್ಚರಿಕೆಯಾಗಿರ್ರಿ; ದುಷ್ಟ ಕೆಲಸದವರಿಗೆ ಎಚ್ಚರಿಕೆ ಯಾಗಿರ್ರಿ. ಅಂಗಚ್ಛೇದನೆಯ ವಿಷಯದಲ್ಲಿ ಎಚ್ಚರಿಕೆ ಯಾಗಿರ್ರಿ.
- Hebrews 10:29 ಇಬ್ರಿಯರಿಗೆ 10:29ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- 2 Peter 2:22 2 ಪೇತ್ರನು 2:22ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು.
- 2 Timothy 4:14–15 2 ತಿಮೊಥೆಯನಿಗೆ 4:14–15ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು. ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು; ಯಾಕಂದರೆ ಅವನು ನಮ್ಮ ಮಾತುಗಳನ್ನು ಬಹಳ ವಾಗಿ ಎದುರಿಸಿದನು.
- Proverbs 11:22 ಜ್ಞಾನೋಕ್ತಿಗಳು 11:22ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.
- Matthew 24:10 ಮತ್ತಾಯನು 24:10ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.