Ruth · chapter 4 · verse 11
Ruth 4:11 in Kannada
ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು.
Idakke ee hottu neevu saakshigalaagiddeeri andanu. Aaga baagalalliruva samasta janaroo hiriyaroo heliddenandare--naavu saakshigale; ninna maneyalli banda streeyannu kartanu israayel maneyannu kattida ibbaraada raahelala haageyoo leyala haageyoo maaduva vanaagali; ephraatadalli yogya kaarya maadu, betleheminalli hesarugondavanaagiru.
Ruth 4:11 in English
- King James Version (KJV)
- And all the people that [were] in the gate, and the elders, said, [We are] witnesses. The LORD make the woman that is come into thine house like Rachel and like Leah, which two did build the house of Israel: and do thou worthily in Ephratah, and be famous in Beth-lehem:
- World English Bible (WEB)
- All the people who were in the gate, and the elders, said, “We are witnesses. May the LORD make the woman who has come into your house like Rachel and like Leah, which both built the house of Israel; and treat you worthily in Ephrathah, and be famous in Bethlehem.
- American Standard Version (ASV)
- And all the people that were in the gate, and the elders, said, We are witnesses. Jehovah make the woman that is come into thy house like Rachel and like Leah, which two did build the house of Israel: and do thou worthily in Ephrathah, and be famous in Beth-lehem:
- Bible in Basic English (BBE)
- And all the people who were in the public place, and the responsible men, said, We are witnesses. May the Lord make this woman, who is about to come into your house, like Rachel and Leah, which two were the builders of the house of Israel: and may you have wealth in Ephrathah, and be great in Beth-lehem;
- Darby Translation (DBY)
- And all the people that were in the gate and the elders said, [We are] witnesses. Jehovah make the woman that cometh into thy house like Rachel and like Leah, which two did build the house of Israel; and acquire power in Ephratah, and make thyself a name in Bethlehem;
- Webster's Bible (WBS)
- And all the people that [were] in the gate, and the elders said, [We are] witnesses. The LORD make the woman that hath come into thy house like Rachel and like Leah, which two did build the house of Israel: and do thou worthily in Ephratah, and be famous in Beth-lehem:
- Young's Literal Translation (YLT)
- And all the people who [are] in the gate say — also the elders — 'Witnesses! Jehovah make the woman who is coming in unto thy house as Rachel and as Leah, both of whom built the house of Israel; and do thou virtuously in Ephrathah, and proclaim the Name in Beth-Lehem;
Read in context
- 9ಆಗ ಬೋವಜನು ಹಿರಿಯರಿಗೂ ಸಮಸ್ತ ಜನ ರಿಗೂ ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬ ದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು.
- 10ಇದಲ್ಲದೆ ಸತ್ತವನ ಸಹೋದರರಿಂದಲೂ ಅವನ ಸ್ಥಳದ ಬಾಗಲದಿಂದಲೂ ಅವನ ಹೆಸರು ಕಡಿದು ಹಾಕಲ್ಪಡದ ಹಾಗೆ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಕೊಂಡುಕೊಂಡೆನು.
- 11ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು.
- 12ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು.
- 13ಬೋವಜನು ರೂತಳನ್ನು ತೆಗೆದುಕೊಂಡನು; ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳನ್ನು ಕೂಡಿದಾಗ ಕರ್ತನು ಅವಳಿಗೆ ಗರ್ಭ ತೆರೆದದ್ದರಿಂದ ಅವಳು ಮಗನನ್ನು ಹೆತ್ತಳು.
Cross references
- Matthew 2:6 ಮತ್ತಾಯನು 2:6ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು.
- Micah 5:2 ಮೀಕ 5:2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.
- Psalm 127:3–5 ಕೀರ್ತನೆಗಳು 127:3–5ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ. ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ.ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು. ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
- Genesis 35:16–20 ಆದಿಕಾಂಡ 35:16–20ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು. ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು. (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು. ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್. ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
- Numbers 26:1–65 ಅರಣ್ಯಕಾಂಡ 26:1–65ಆದರೆ ವ್ಯಾಧಿಯ ತರುವಾಯ ಕರ್ತನು ಮೋಶೆಯ ಸಂಗಡಲೂ ಆರೋನನ ಮಗನೂ ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡಲೂ ಮಾತನಾಡಿ-- ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗುವದಕ್ಕೆ ಶಕ್ತರಾದವರೆಲ್ಲರ ಲೆಕ್ಕವನ್ನು ಅವರ ತಂದೆಯ ಮನೆಗಳ ಪ್ರಕಾರ ತಕ್ಕೊಳ್ಳಿರಿ ಅಂದನು. ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬಿನ ಬೈಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು. ಇಸ್ರಾಯೇಲ್ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ. ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ. ಪಲ್ಲೂವಿನ ಕುಮಾರರು; ಎಲೀಯಾಬ್. ಎಲೀಯಾ ಬನ ಕುಮಾರರು: ನೆಮೂವೇಲ್, ದಾತಾನ್, ಅಬೀ ರಾಮ್; ಈ ದಾತಾನನೂ ಅಬೀರಾಮನೂ ಸಭೆಯಲ್ಲಿ ಪ್ರಸಿದ್ಧರಾಗಿದ್ದು, ಕೋರಹನ ಗುಂಪಿನಲ್ಲಿದ್ದು ಕರ್ತ ನಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು. ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು. ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ. ಕುಟುಂಬಗಳ ಪ್ರಕಾರ ಸಿಮೆಯೋನನ ಕುಮಾ ರರು: ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ; ಯಾವಿಾನನಿಂದ ಯಾವಿಾನ್ಯರ ಕುಟುಂಬ; ಯಾಕೀನ ನಿಂದ ಯಾಕೀನ್ಯರ ಕುಟುಂಬ; ಜೆರಹನಿಂದ ಜೆರಹಿ ಯರ ಕುಟುಂಬ; ಸೌಲನಿಂದ ಸೌಲ್ಯರ ಕುಟುಂಬ. ಸಿಮೆಯೋನನ ಕುಟುಂಬಗಳು ಇವೇ; ಇಪ್ಪತ್ತೆರಡು ಸಾವಿರದ ಇನ್ನೂರು ಮಂದಿ. ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನಿಂದ ಚೆಫೋನ್ಯರ ಕುಟುಂಬ; ಹಗ್ಗೀಯಿಂದ ಹಗ್ಗೀಯರ ಕುಟುಂಬ; ಶೂನೀಯಿಂದ ಶೂನೀಯರ ಕುಟುಂಬ. ಒಜ್ನೀಯಿಂದ ಒಜ್ನೀಯರ ಕುಟುಂಬ; ಏರೀಯಿಂದ ಏರೀಯರ ಕುಟುಂಬ; ಅರೋದನಿಂದ ಅರೋದ್ಯರ ಕುಟುಂಬ. ಅರೇಲೀಯಿಂದ ಅರೇಲೀ ಯರ ಕುಟುಂಬ. ಗಾದನ ಮಕ್ಕಳ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಸಾವಿರದ ಐನೂರು ಮಂದಿ. ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹೀಯರ ಕುಟುಂಬ. ಪೆರೆಚನ ಕುಮಾರರು; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಹಾಮೂ ಲನಿಂದ ಹಾಮೂಲ್ಯರ ಕುಟುಂಬ. ಯೆಹೂದನ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಎಪ್ಪತ್ತಾರು ಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಇಸ್ಸಾಕಾರನ ಕುಮಾರರು: ತೋಲನಿಂದ ತೋಲಾಯರ ಕುಟುಂಬ; ಪುವ್ವನಿಂದ ಪೂನ್ಯರ ಕುಟುಂಬ; ಯಾಶೂಬನಿಂದ ಯಾಶೂ ಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ. ಇಸ್ಸಾಕಾರನ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುನಾಲ್ಕು ಸಾವಿರದ ಮುನ್ನೂರು ಮಂದಿ. ಜೆಬುಲೂನನ ಕುಮಾ ರರು--ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನಿಂದ ಏಲೋನ್ಯರ ಕುಟುಂಬ; ಯಹಲೇಲನಿಂದ ಯಹಲೇಲ್ಯರ ಕುಟುಂಬ. ಜೆಬುಲೂನಿಯರ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ. ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ; ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ; ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ; ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ. ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ. ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ. ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ; ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ. ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ. ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ; ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ; ಬೆಲಗನ ಕುಮಾರರು; ಅರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ಬೆನ್ಯಾವಿಾನನ ಕುಮಾರರು ಇವರೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದು ಸಾವಿರದ ಆರು ನೂರು ಮಂದಿ. ಕುಟುಂಬಗಳ ಪ್ರಕಾರ ದಾನನ ಕುಮಾರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ದಾನನ ಕುಟುಂಬಗಳು ಇವೇ. ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಎಣಿಸಲ್ಪ ಟ್ಟವರು ಅರವತ್ತುನಾಲ್ಕು ಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನಿಂದ ಇಮ್ನಾಹ್ಯರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ. ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ. ಆಶೇರನ ಮಗಳ ಹೆಸರು ಸಾರಳು. ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ; ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದುಸಾವಿರದ ನಾನೂರು ಮಂದಿ. ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವರು ಇವರು; ಆರುಲಕ್ಷ ಒಂದುಸಾವಿರದ ಏಳುನೂರ ಮೂವತ್ತು ಮಂದಿ. ಕರ್ತನು ಮೋಶೆಯ ಸಂಗಡ ಮಾತನಾಡಿ ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು. ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ; ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು. ಆರೋನನಿಗೆ ನಾದಾಬ್ ಅಬೀಹೂ ಎಲ್ಲಾಜರನೂ ಈತಾಮಾರ್ ಹುಟ್ಟಿದರು. ಆದರೆ ನಾದಾಬನೂ ಅಬೀಹೂ ಕರ್ತನ ಮುಂದೆ ಅನ್ಯಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು. ಇವರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಇಪ್ಪತ್ತುಮೂರು ಸಾವಿರ ಮಂದಿಯಾಗಿದ್ದರು. ಇವ ರಿಗೆ ಇಸ್ರಾಯೇಲ್ ಮಕ್ಕಳಲ್ಲಿ ಸ್ವಾಸ್ತ್ಯವು ದೊರೆ ಯದ ಕಾರಣ ಅವರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ. ಎಣಿಸಲ್ಪಟ್ಟವರಾದ ಇವರನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲ್ ಮಕ್ಕ ಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು. ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ. ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Ruth 1:2 ರೂತಳು 1:2ಆ ಮನುಷ್ಯನ ಹೆಸರು ಎಲೀಮೆಲೆ ಕನು; ಅವನ ಹೆಂಡತಿಯ ಹೆಸರು ನೊವೊಮಿ; ಅವನ ಕುಮಾರ ರಲ್ಲಿ ಒಬ್ಬನ ಹೆಸರು ಮಹ್ಲೋ ನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಇವರು ಎಫ್ರಾತ್ಯರಾದ ಯೆಹೂದದ ಬೇತ್ಲೆಹೇಮಿನವ ರಾಗಿದ್ದರು. ಇವರು ಮೋವಾಬ್ ದೇಶಕ್ಕೆ ಬಂದು, ಅಲ್ಲಿ ವಾಸವಾಗಿದ್ದರು.
- Genesis 46:8–27 ಆದಿಕಾಂಡ 46:8–27ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು. ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು. ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು. ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು. ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು. ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು. ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು. ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ. ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು. ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು. ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು. ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು. ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು. ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ. ದಾನನ ಮಗನು ಹುಶೀಮನು. ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು. ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ. ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು. ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
- Proverbs 14:1 ಜ್ಞಾನೋಕ್ತಿಗಳು 14:1ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
- Psalm 132:6 ಕೀರ್ತನೆಗಳು 132:6ಇಗೋ, ಎಫ್ರಾತದಲ್ಲಿ ಅದನ್ನು ಕೇಳಿದೆವು; ಅಡವಿಯ ಬೈಲುಗಳಲ್ಲಿ ಅದನ್ನು ಕಂಡುಕೊಂಡೆವು.
- Psalm 128:3–6 ಕೀರ್ತನೆಗಳು 128:3–6ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು. ಇಗೋ, ಕರ್ತನಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವದಿಸಲ್ಪಡುವನು. ಕರ್ತನು ನಿನ್ನನ್ನು ಚೀಯೋನಿನೊಳಗಿಂದ ಆಶೀರ್ವದಿಸುವನು; ನಿನ್ನ ಜೀವನದ ದಿವಸಗಳೆಲ್ಲಾ ನೀನು ಯೆರೂಸಲೇಮಿನ ಒಳ್ಳೆಯದನ್ನು ನೋಡುವಿ.ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ. ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.
- Deuteronomy 25:9 ಧರ್ಮೋಪದೇಶಕಾಂಡ 25:9ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು ಕೆರವನ್ನು ಅವನ ಪಾದದಿಂದ ಬಿಡಿಸಿ ಅವನ ಮುಖದಲ್ಲಿ ಉಗುಳಿ ಉತ್ತರ ಕೊಟ್ಟು--ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು.
Original words (Hebrew)
- people · H5971עַם ʻam
- gate · H8179שַׁעַר shaʻar
- elders · H2205זָקֵן zâqên
- said · H559אָמַר ʼâmar
- witnesses · H5707עֵד ʻêd
- make · H5414נָתַן nâthan
- woman · H802אִשָּׁה ʼishshâh
- come · H935בּוֹא bôwʼ
- house · H1004בַּיִת bayith
- Rachel · H7354רָחֵל Râchêl
- Leah · H3812לֵאָה Lêʼâh
- two · H8147שְׁנַיִם shᵉnayim
- build · H1129בָּנָה bânâh
- house · H1004בַּיִת bayith
- Israel · H3478יִשְׂרָאֵל Yisrâʼêl
- do · H6213עָשָׂה ʻâsâh
- worthily · H2428חַיִל chayil
- Ephratah · H672אֶפְרָת ʼEphrâth
- famous · H7121קָרָא qârâʼ
- Beth-lehem · H1035בֵּית לֶחֶם Bêyth Lechem