Proverbs · chapter 19 · verse 10
Proverbs 19:10 in Kannada
ಬುದ್ಧಿಹೀನನಿಗೆ ಆನಂದವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವದು ಸೇವಕ ನಿಗೆ ಯುಕ್ತವೇ ಅಲ್ಲ.
Buddhiheenanige aanandavu yuktavalla; adhipatigala mele doretana maaduvadu sevaka nige yuktave alla.
Proverbs 19:10 in English
- King James Version (KJV)
- Delight is not seemly for a fool; much less for a servant to have rule over princes.
- World English Bible (WEB)
- Delicate living is not appropriate for a fool, much less for a servant to have rule over princes.
- American Standard Version (ASV)
- Delicate living is not seemly for a fool; Much less for a servant to have rule over princes.
- Bible in Basic English (BBE)
- Material comfort is not good for the foolish; much less for a servant to be put over rulers.
- Darby Translation (DBY)
- Good living beseemeth not a fool; how much less for a servant to have rule over princes.
- Webster's Bible (WBS)
- Delight is not seemly for a fool; much less for a servant to have rule over princes.
- Young's Literal Translation (YLT)
- Luxury is not comely for a fool, Much less for a servant to rule among princes.
Read in context
- 8ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣ ವನ್ನು ಪ್ರೀತಿಸುತ್ತಾನೆ; ವಿವೇಕವನ್ನು ಕೈಕೊಳ್ಳುವವನು ಒಳ್ಳೇದನ್ನು ಕಂಡುಕೊಳ್ಳುವನು.
- 9ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು.
- 10ಬುದ್ಧಿಹೀನನಿಗೆ ಆನಂದವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವದು ಸೇವಕ ನಿಗೆ ಯುಕ್ತವೇ ಅಲ್ಲ.
- 11ಮನುಷ್ಯನ ವಿವೇಕವು ಅವನ ಕೋಪವನ್ನು ಅಡ್ಡಿಮಾಡುತ್ತದೆ. ದೋಷವನ್ನು ಲಕ್ಷಿ ಸದೆ ಇರುವದು ಅವನಿಗೆ ಘನತೆಯಾಗಿದೆ.
- 12ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
Cross references
- Proverbs 30:21–22 ಜ್ಞಾನೋಕ್ತಿಗಳು 30:21–22ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು ಆಳುವ ದಾಸನು, ಹೊಟ್ಟೆತುಂಬಿದ ನೀಚನು,
- Proverbs 26:1 ಜ್ಞಾನೋಕ್ತಿಗಳು 26:1ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ.
- Luke 16:19 ಲೂಕನು 16:19ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.
- Luke 16:23 ಲೂಕನು 16:23ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.
- Esther 3:15 ಎಸ್ತೇರಳು 3:15ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Amos 6:3–6 ಆಮೋಸ 6:3–6ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ. ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ. ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ. ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.
- Hosea 7:3–5 ಹೋಶೇಯ 7:3–5ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ ಸುಳ್ಳುಗ ಳಿಂದ ಪ್ರಧಾನರನ್ನೂ ಸಂತೋಷಪಡಿಸುತ್ತಾರೆ. ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ. ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
- 1 Samuel 25:36 1 ಸಮುವೇಲನು 25:36ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.
- 2 Samuel 3:24–25 2 ಸಮುವೇಲನು 3:24–25ಆಗ ಯೋವಾಬನು ಅರಸನ ಬಳಿಗೆ ಬಂದು--ಏನು ಮಾಡಿದಿ? ಇಗೋ, ಅಬ್ನೇರನು ನಿನ್ನ ಬಳಿಗೆ ಬಂದನು; ಅವನು ಹೋಗಿಬಿಡುವ ಹಾಗೆ ನೀನು ಅವನನ್ನು ಕಳುಹಿಸಿಬಿಟ್ಟದ್ದು ಯಾಕೆ? ನೇರನ ಮಗನಾದ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಹೊರಡು ವಿಕೆಯನ್ನೂ ಬರುವಿಕೆಯನ್ನೂ ತಿಳಿಯುವಂತೆಯೂ ನೀನು ಮಾಡುವದನ್ನೆಲ್ಲಾ ತಿಳಿಯುವದಕ್ಕೂ ಬಂದಿದ್ದನು ಅಂದನು.
- Isaiah 3:5 ಯೆಶಾಯ 3:5ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.
- James 4:9 ಯಾಕೋಬನು 4:9ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.
- 2 Samuel 3:39 2 ಸಮುವೇಲನು 3:39ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.