Proverbs · chapter 22 · verse 12
Proverbs 22:12 in Kannada
ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ.
Kartana kannugalu tiluvalikeyannu kaapaaduttave; aatanu doshiya maatugalannu kedavihaakuttaane.
Proverbs 22:12 in English
- King James Version (KJV)
- The eyes of the LORD preserve knowledge, and he overthroweth the words of the transgressor.
- World English Bible (WEB)
- The LORD’s eyes watch over knowledge, but he frustrates the words of the unfaithful.
- American Standard Version (ASV)
- The eyes of Jehovah preserve [him that hath] knowledge; But he overthroweth the words of the treacherous man.
- Bible in Basic English (BBE)
- The eyes of the Lord keep knowledge, but by him the acts of the false man will be overturned.
- Darby Translation (DBY)
- The eyes of Jehovah preserve knowledge; but he overthroweth the words of the unfaithful.
- Webster's Bible (WBS)
- The eyes of the LORD preserve knowledge, and he overthroweth the words of the transgressor.
- Young's Literal Translation (YLT)
- The eyes of Jehovah have kept knowledge, And He overthroweth the words of the treacherous.
Read in context
- 10ಪರಿಹಾಸ್ಯ ಮಾಡುವವ ನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವದು; ಹೌದು, ವಿವಾದವೂ ನಿಂದೆಯೂ ನಿಂತುಹೋಗು ವವು.
- 11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- 12ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ.
- 13ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ.
- 14ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು.
Cross references
- 2 Timothy 3:8–9 2 ತಿಮೊಥೆಯನಿಗೆ 3:8–9ಯನ್ನಯಂಬ್ರ ಎಂಬ ವರು ಮೋಶೆಯನ್ನು ವಿರೋಧಿಸಿದಂತೆಯೇ ಇವರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಇದಲ್ಲದೆ ಇವರು ಬುದ್ಧಿಗೆಟ್ಟವರೂ ಭ್ರಷ್ಟರೂ ಆಗಿದ್ದಾರೆ. ಆದರೆ ಇವರು ಇನ್ನು ಮುಂದುವರಿಯಲಾರರು; ಈ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದು ಬಂದ ಪ್ರಕಾರ ಇವರದೂ ತಿಳಿದುಬರುವದು.
- 2 Chronicles 16:9 2 ಪೂರ್ವಕಾಲವೃತ್ತಾಂತ 16:9ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು.
- Acts 13:8–12 ಅಪೊಸ್ತಲರ ಕೃತ್ಯಗಳು 13:8–12ಆದರೆ ಆ ಮಂತ್ರವಾದಿಯಾದ ಎಲುಮನು ಅವರಿಗೆ ಎದುರು ನಿಂತು ಅಧಿಪತಿಯನ್ನು ನಂಬಿಕೆಯಿಂದ ತಿರುಗಿಸು ವದಕ್ಕೆ ಪ್ರಯತ್ನಿಸಿದನು. (ಎಲುಮನೆಂಬ ಹೆಸರಿಗೆ ಮಂತ್ರವಾದಿ ಎಂಬದು ಅರ್ಥ). ಆಗ ಸೌಲನು (ಇವನು ಪೌಲನೆಂಬದಾಗಿಯೂ ಕರೆಯಲ್ಪಟ್ಟವನು) ಪವಿತ್ರಾತ್ಮಭರಿತನಾಗಿ ಅವನನ್ನು ದೃಷ್ಟಿಸಿ ನೋಡಿ-- ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನ ದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕು ಮಾಡುವದನ್ನು ಬಿಡುವದಿಲ್ಲವೋ? ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈ ಹಿಡಿದು ನಡಿಸುವವರನ್ನು ಹುಡುಕುತ್ತಾ ತಿರುಗಾಡಿದನು. ಆಗ ಅಧಿಪತಿಯು ನಡೆದದ್ದನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬಿದನು.
- Acts 12:23–24 ಅಪೊಸ್ತಲರ ಕೃತ್ಯಗಳು 12:23–24ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು. ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.ಬಾರ್ನಬ ಸೌಲರು ತಮ್ಮ ಸೇವೆ ತೀರಿಸಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನ ನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
- 2 Thessalonians 2:8 2 ಥೆಸಲೊನೀಕದವರಿಗೆ 2:8ಆಗ ಆ ದುಷ್ಟನು ಪ್ರತ್ಯಕ್ಷನಾಗುವನು; ಕರ್ತನು ತನ್ನ ಬಾಯಿಯ ಉಸುರಿನಿಂದ ಅವನನ್ನು ದಹಿಸಿ ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ನಾಶಮಾಡುವನು.
- Job 5:12–13 ಯೋಬನು 5:12–13ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ. ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು.
- Isaiah 59:19–21 ಯೆಶಾಯ 59:19–21ಆಗ ಪಶ್ಚಿ ಮದ ಕಡೆಯವರು ಕರ್ತನ ಹೆಸರಿಗೂ ಸೂರ್ಯೋ ದಯದ ಕಡೆಯವರು ಆತನ ಘನಕ್ಕೂ ಭಯಪಡು ವರು. ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು. ವಿಮೋಚಕನು ಚೀಯೋನಿಗೂ ಯಾಕೋಬ್ಯರಲ್ಲಿ ತಮ್ಮ ದ್ರೋಹದಿಂದ ತಿರುಗುವವರಿಗೂ ಬರುವೆ ನೆಂದು ಕರ್ತನು ಅನ್ನುತ್ತಾನೆ.ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ. ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
- Acts 8:9–12 ಅಪೊಸ್ತಲರ ಕೃತ್ಯಗಳು 8:9–12ಆದರೆ ಇದಕ್ಕಿಂತ ಮುಂಚೆ ಸೀಮೋನ ನೆಂಬವನೊಬ್ಬನು ಆ ಪಟ್ಟಣದಲ್ಲಿ ತಾನು ಏನೋ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಕೊಂಡು ಮಂತ್ರ ತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರ ಗನ್ನು ಹುಟ್ಟಿಸುತ್ತಿದ್ದನು. ಚಿಕ್ಕವರು ಮೊದಲು ಗೊಂಡು ದೊಡ್ಡವರ ಪರ್ಯಂತರ ಎಲ್ಲರೂ--ಇವನು ದೇವರ ಮಹಾಶಕ್ತಿ ಎಂದು ಹೇಳುತ್ತಾ ಅವ ನಿಗೆ ಲಕ್ಷ್ಯಕೊಡುತ್ತಿದ್ದರು. ಬಹುಕಾಲದಿಂದಲೂ ಅವನು ಮಂತ್ರತಂತ್ರಗಳನ್ನು ನಡಿಸಿ ಜನರಲ್ಲಿ ಬೆರ ಗನ್ನು ಹುಟ್ಟಿಸಿದ್ದರಿಂದ ಅವನಿಗೆ ಅವರು ಲಕ್ಷ್ಯ ಕೊಡುತ್ತಿದ್ದರು. ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯ ದಲ್ಲಿಯೂ ಸಾರುತ್ತಾ ಇರಲು ಗಂಡಸರೂ ಹೆಂಗಸರೂ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡರು.
- Matthew 16:16–18 ಮತ್ತಾಯನು 16:16–18ಅದಕ್ಕೆ ಸೀಮೋನ ಪೇತ್ರನು ಪ್ರತ್ಯುತ್ತರ ವಾಗಿ--ನೀನು ಕ್ರಿಸ್ತನು, ಜೀವವುಳ್ಳ ದೇವರಕುಮಾರನು ಎಂದು ಹೇಳಿದನು. ಆಗ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಯಾಕಂದರೆ ರಕ್ತಮಾಂಸವಲ್ಲ (ಮನುಷ್ಯರಲ್ಲ), ಪರಲೋಕದಲ್ಲಿರುವ ನನ್ನ ತಂದೆಯೇ ಅದನ್ನು ನಿನಗೆ ಪ್ರಕಟಿಸಿದನು ಎಂದು ಹೇಳಿದನು. ನಾನು ಸಹ ನಿನಗೆ ಹೇಳುವದೇ ನಂದರೆ--ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
- Revelation 11:3–11 ಪ್ರಕಟನೆ 11:3–11ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು. ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವ ನಾದರೂ ಕೇಡನ್ನು ಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ನುಂಗಿ ಬಿಡುವದು; ಇವರಿಗೆ ಯಾವನಾದರೂ ಕೇಡನ್ನು ಉಂಟು ಮಾಡಬೇಕೆಂದಿದ್ದರೆ ಅವನು ಈ ರೀತಿಯಾಗಿ ಕೊಲೆಯಾಗಬೇಕು. ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು. ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ ತಳವಿಲ್ಲದ ತಗ್ಗಿನಿಂದ ಏರಿ ಬರುವ ಮೃಗವು ಇವರಿಗೆ ವಿರೋಧವಾಗಿ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು. ಇವರ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಆತ್ಮಿಕವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಕರೆಯುವರು; ನಮ್ಮ ಕರ್ತನು ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು. ಆಗ ಪ್ರಜೆ ಕುಲ ಭಾಷೆ ಜನಾಂಗಗಳವರು ಸತ್ತುಹೋದ ಅವರ ಶವಗಳನ್ನು ಮೂರುವರೆ ದಿನಗಳು ನೋಡುವರು, ಸತ್ತುಹೋದ ಅವರ ಶವಗಳನ್ನು ಸಮಾಧಿಯಲ್ಲಿ ಇಡ ಗೊಡಿಸುವದಿಲ್ಲ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮ ಬಂದು ಆ ಶವಗಳಲ್ಲಿ ಸೇರಲು ಅವು ಕಾಲೂರಿ ನಿಂತವು. ಅವರನ್ನು ನೋಡಿದವರಿಗೆ ಮಹಾ ಭಯವು ಹಿಡಿಯಿತು.
- Revelation 12:14–17 ಪ್ರಕಟನೆ 12:14–17ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು; ಅಲ್ಲಿ ಒಂದು ಕಾಲ, ಕಾಲಗಳು, ಅರ್ಧ ಕಾಲ ಸರ್ಪನ ಮುಖಕ್ಕೆ ಮರೆಯಾಗಿ ಪೋಷಣೆ ಹೊಂದುತ್ತಾಳೆ. ಆ ಸ್ತ್ರೀಯನ್ನು ಪ್ರವಾಹವು ಬಡಕೊಂಡು ಹೋಗ ಬೇಕೆಂದು ಆಕೆಯ ಹಿಂದೆ ಸರ್ಪವು ತನ್ನ ಬಾಯೊಳಗಿಂದ ನೀರನ್ನು ಪ್ರವಾಹದಂತೆ ಬಿಟ್ಟಿತು. ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ಪ್ರವಾಹವನ್ನು ಕುಡಿದುಬಿಟ್ಟಿತು.ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟನು. ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟನು.
- Acts 5:39 ಅಪೊಸ್ತಲರ ಕೃತ್ಯಗಳು 5:39ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.