Proverbs · chapter 4 · verse 7
Proverbs 4:7 in Kannada
ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.
Jnyaanave mukhyavaadaddu; aadadarinda jnyaanavannu sampaa disu, ninna ellaa sampattininda vivekavannu pade duko.
Proverbs 4:7 in English
- King James Version (KJV)
- Wisdom [is] the principal thing; [therefore] get wisdom: and with all thy getting get understanding.
- World English Bible (WEB)
- Wisdom is supreme. Get wisdom. Yes, though it costs all your possessions, get understanding.
- American Standard Version (ASV)
- Wisdom [is] the principal thing; [therefore] get wisdom; Yea, with all thy getting get understanding.
- Bible in Basic English (BBE)
- The first sign of wisdom is to get wisdom; go, give all you have to get true knowledge.
- Darby Translation (DBY)
- The beginning of wisdom [is], Get wisdom; and with all thy getting get intelligence.
- Webster's Bible (WBS)
- Wisdom [is] the principal thing; [therefore] get wisdom: and with all thy getting get understanding.
- Young's Literal Translation (YLT)
- The first thing [is] wisdom — get wisdom, And with all thy getting get understanding.
Read in context
- 5ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.
- 6ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು.
- 7ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.
- 8ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು.
- 9ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು.
Cross references
- Ecclesiastes 7:12 ಪ್ರಸಂಗಿ 7:12ಜ್ಞಾನವು ಆಶ್ರಯ, ಧನವು ಆಶ್ರಯ; ಆದರೆ ತಿಳುವಳಿಕೆಯ ಶ್ರೇಷ್ಠತೆ ಏನಂದರೆ, ಅದನ್ನು ಹೊಂದಿದವರಿಗೆ ಜ್ಞಾನವು ಜೀವವನ್ನು ಕೊಡುತ್ತದೆ.
- Ecclesiastes 9:16–18 ಪ್ರಸಂಗಿ 9:16–18ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು. ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ.ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ. ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
- Proverbs 23:23 ಜ್ಞಾನೋಕ್ತಿಗಳು 23:23ಸತ್ಯವನ್ನೂ ಜ್ಞಾನ ವನ್ನೂ ಶಿಕ್ಷೆಯನ್ನೂ ವಿವೇಕವನ್ನೂ ಕೊಂಡು ಅವುಗ ಳನ್ನು ಮಾರಬೇಡ.
- Proverbs 16:16 ಜ್ಞಾನೋಕ್ತಿಗಳು 16:16ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.
- Philippians 3:8 ಫಿಲಿಪ್ಪಿಯವರಿಗೆ 3:8ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- Mark 8:36–37 ಮಾರ್ಕನು 8:36–37ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- Matthew 13:44–46 ಮತ್ತಾಯನು 13:44–46ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ. ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.
- Psalm 119:104 ಕೀರ್ತನೆಗಳು 119:104ನಾನು ನಿನ್ನ ಕಟ್ಟಳೆಗಳಿಂದ ವಿವೇಕಿ ಯಾಗಿದ್ದೇನೆ. ಆದದರಿಂದ ಮೋಸದ ಮಾರ್ಗಗ ಳನ್ನೆಲ್ಲಾ ಹಗೆಮಾಡಿದ್ದೇನೆ.
- Luke 12:20 ಲೂಕನು 12:20ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Proverbs 21:6 ಜ್ಞಾನೋಕ್ತಿಗಳು 21:6ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ.
- Psalm 49:16–20 ಕೀರ್ತನೆಗಳು 49:16–20ಒಬ್ಬನು ಐಶ್ವರ್ಯವಂತ ನಾದರೆ ಮತ್ತು ಅವನ ಮನೆಯ ಘನವು ದೊಡ್ಡದಾ ದರೆ ಭಯಪಡಬೇಡ. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗನು; ಅವನ ಘನವು ಅವನ ಹಿಂದೆ ಇಳಿದು ಹೋಗದು. ಅವನು ಬದುಕಿದ್ದಾಗ ತನ್ನ ಪ್ರಾಣವನ್ನು ಸ್ತುತಿಸಿಕೊಂಡಾಗ್ಯೂ ನೀನು ನಿನಗೆ ಒಳ್ಳೇದನ್ನು ಮಾಡಿಕೊಂಡರೆ ಜನರು ನಿನ್ನನ್ನು ಕೊಂಡಾ ಡುವರು. ಅವನು ತನ್ನ ತಂದೆಗಳ ವಂಶದ ಬಳಿಗೆ ಹೋಗುವನು; ಅವರು ಬೆಳಕನ್ನು ಎಂದಿಗೂ ನೋಡು ವದಿಲ್ಲ.ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ. ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ.