Psalms · chapter 109 · verse 27
Psalm 109:27 in Kannada
ಕರ್ತನೇ, ಇದು ನಿನ್ನ ಕೈ ಎಂದೂ ಇದನ್ನು ನೀನು ಮಾಡಿದ್ದೀ ಎಂದೂ ಅವರು ತಿಳುಕೊಳ್ಳಲಿ.
Kartane, idu ninna kai endoo idannu neenu maadiddee endoo avaru tilukollali.
Psalm 109:27 in English
- King James Version (KJV)
- That they may know that this [is] thy hand; [that] thou, LORD, hast done it.
- World English Bible (WEB)
- that they may know that this is your hand; that you, LORD, have done it.
- American Standard Version (ASV)
- That they may know that this is thy hand; [That] thou, Jehovah, hast done it.
- Bible in Basic English (BBE)
- So that they may see that it is the work of your hand; that you, Lord, have done it.
- Darby Translation (DBY)
- That they may know that this is thy hand; that thou, Jehovah, hast done it.
- Webster's Bible (WBS)
- That they may know that this [is] thy hand; [that] thou, LORD, hast done it.
- Young's Literal Translation (YLT)
- And they know that this [is] Thy hand, Thou, O Jehovah, Thou hast done it.
Read in context
- 25ನಾನು ಅವರಿಗೆ ನಿಂದೆಯಾಗಿದ್ದೇನೆ; ನನ್ನನ್ನು ನೋಡಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
- 26ನನ್ನ ದೇವರಾದ ಓ ಕರ್ತನೇ, ನನಗೆ ಸಹಾಯ ಮಾಡು; ನಿನ್ನ ಕೃಪೆಯ ಪ್ರಕಾರ ನನ್ನನ್ನು ರಕ್ಷಿಸು.
- 27ಕರ್ತನೇ, ಇದು ನಿನ್ನ ಕೈ ಎಂದೂ ಇದನ್ನು ನೀನು ಮಾಡಿದ್ದೀ ಎಂದೂ ಅವರು ತಿಳುಕೊಳ್ಳಲಿ.
- 28ಅವರು ಶಪಿಸಲಿ; ಆದರೆ ನೀನು ಆಶೀರ್ವದಿಸು; ಅವರು ಎದ್ದು ನಾಚಿಕೆಪಡಲಿ; ಆದರೆ ನಿನ್ನ ಸೇವಕನು ಸಂತೋ ಷಿಸಲಿ.
- 29ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಂಡು ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
Cross references
- Job 37:7 ಯೋಬನು 37:7ಆತನ ಕೃತ್ಯವನ್ನು ಜನರೆಲ್ಲರು ತಿಳುಕೊಳ್ಳುವ ಹಾಗೆ ಎಲ್ಲಾ ಮನುಷ್ಯರ ಕೈಯನ್ನು ಮುದ್ರಿಸುತ್ತಾನೆ
- 1 Kings 18:36–37 1 ಅರಸುಗಳು 18:36–37ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ. ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು.
- Exodus 8:19 ವಿಮೋಚನಕಾಂಡ 8:19ಆಗ ಮಂತ್ರಗಾರರು ಫರೋಹ ನಿಗೆ--ಇದು ದೇವರ ಕೈಯಾಗಿದೆ ಅಂದರು. ಆದರೆ ಕರ್ತನು ಹೇಳಿದಂತೆ ಫರೋಹನ ಹೃದಯವು ಕಠಿಣ ವಾಯಿತು; ಆದದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.
- 1 Samuel 17:46–47 1 ಸಮುವೇಲನು 17:46–47ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
- Psalm 126:2 ಕೀರ್ತನೆಗಳು 126:2ಆಗ ನಮ್ಮ ಬಾಯಿ ನಗೆಯಿಂದಲೂ ನಾಲಿಗೆ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಅನ್ಯಜನರು--ಕರ್ತನು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿದರು.
- Psalm 64:8–9 ಕೀರ್ತನೆಗಳು 64:8–9ಹೀಗೆ ತಮ್ಮ ನಾಲಿಗೆಯು ತಮ್ಮ ಮೇಲೆ ಬೀಳುವಂತೆ ಮಾಡಿ ಕೊಳ್ಳುತ್ತಾರೆ. ಅವರನ್ನು ನೋಡುವವರೆಲ್ಲರೂ ಓಡಿ ಹೋಗುವರು. ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕಾರ್ಯವನ್ನು ತಿಳಿಸುವರು; ಆತನ ಕೆಲಸ ವನ್ನು ಬುದ್ಧಿಯಿಂದ ಗ್ರಹಿಸುವರು;ನೀತಿವಂತನು ಕರ್ತನಲ್ಲಿ ಸಂತೋಷಪಟ್ಟು ಆತನಲ್ಲಿ ಭರವಸವಿ ಡುವನು. ಯಥಾರ್ಥ ಹೃದಯವುಳ್ಳವರೆಲ್ಲರು ಹೆಚ್ಚಳ ಪಡುವರು.
- Acts 4:16 ಅಪೊಸ್ತಲರ ಕೃತ್ಯಗಳು 4:16ಈ ಮನುಷ್ಯರಿಗೆ ನಾವೇನು ಮಾಡೋಣ? ನಿಜ ವಾಗಿಯೂ ಅವರ ಮೂಲಕ ನಡೆದ ಪ್ರಸಿದ್ಧವಾದ ಒಂದು ಅದ್ಭುತಕಾರ್ಯವು ಯೆರೂಸಲೇಮಿನಲ್ಲಿ ವಾಸಮಾಡುವವರಿಗೆಲ್ಲಾ ಗೊತ್ತಾಗಿರುವದರಿಂದ ನಾವು ಅದನ್ನು ಅಲ್ಲಗಳೆಯಲಾರೆವು.
- Psalm 17:13–14 ಕೀರ್ತನೆಗಳು 17:13–14ಓ ಕರ್ತನೇ, ಎದ್ದು ಅವನನ್ನು ನಿರಾಶೆಗೊಳಿಸಿ ಕೆಡವಿಬಿಡು. ದುಷ್ಟರ ಕೈಯೊಳಗಿಂದ ನಿನ್ನ ಕತ್ತಿಯ ಮೂಲಕ ನನ್ನನ್ನು ರಕ್ಷಿಸು. ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- Acts 2:32–36 ಅಪೊಸ್ತಲರ ಕೃತ್ಯಗಳು 2:32–36ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ. ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ. ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ. ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- Numbers 16:28–30 ಅರಣ್ಯಕಾಂಡ 16:28–30ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ. ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ ಇಲ್ಲವೆ ಎಲ್ಲಾ ಮನುಷ್ಯರ ಹಾಗೆ ಶಿಕ್ಷೆ ಇವರಿಗೆ ಪ್ರಾಪ್ತವಾದರೆ ಕರ್ತನು ನನ್ನನ್ನು ಕಳುಹಿಸಲಿಲ್ಲ. ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು.