Psalms · chapter 128 · verse 2
Psalm 128:2 in Kannada
ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.
Heegaadare ninna kaigala kashtaarjitavannu neenu ootamaadi santosha vullavanaagiruvi, ninage olleyadaaguvadu.
Psalm 128:2 in English
- King James Version (KJV)
- For thou shalt eat the labour of thine hands: happy [shalt] thou [be], and [it shall be] well with thee.
- World English Bible (WEB)
- For you will eat the labor of your hands. You will be happy, and it will be well with you.
- American Standard Version (ASV)
- For thou shalt eat the labor of thy hands: Happy shalt thou be, and it shall be well with thee.
- Bible in Basic English (BBE)
- You will have the fruit of the work of your hands: happy will you be, and all will be well for you.
- Darby Translation (DBY)
- For thou shalt eat the labour of thy hands; happy shalt thou be, and it shall be well with thee.
- Webster's Bible (WBS)
- For thou shalt eat the labor of thy hands: happy [shalt] thou be, and [it shall be] well with thee.
- Young's Literal Translation (YLT)
- The labour of thy hands thou surely eatest, Happy [art] thou, and good [is] to thee.
Read in context
- 1ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.
- 2ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.
- 3ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು.
- 4ಇಗೋ, ಕರ್ತನಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವದಿಸಲ್ಪಡುವನು.
Cross references
- Isaiah 3:10 ಯೆಶಾಯ 3:10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
- Isaiah 62:8 ಯೆಶಾಯ 62:8ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ;
- Isaiah 65:21–23 ಯೆಶಾಯ 65:21–23ಇದಲ್ಲದೆ, ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷೇ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು. ಅವರು ಕಟ್ಟಿದ್ದ ರಲ್ಲಿ ಇನ್ನೊಬ್ಬರು ವಾಸಮಾಡುವದಿಲ್ಲ. ಅವರು ನೆಟ್ಟ ದ್ದನ್ನು ಇನ್ನೊಬ್ಬರು ತಿನ್ನುವದಿಲ್ಲ; ಮರದ ದಿನಗಳ ಹಾಗೆ ನನ್ನ ಜನರ ದಿನಗಳು ಇರುವವು; ನಾನು ಆದುಕೊಂಡವರು ತಮ್ಮ ಕೈಕೆಲಸವನ್ನು ಅನು ಭವಿಸುವರು. ಅವರು ವ್ಯರ್ಥವಾಗಿ ದುಡಿಯರು ಕಷ್ಟವನ್ನು ಎದುರುಗೊಳ್ಳುವದಿಲ್ಲ; ಯಾಕಂದರೆ ಅವರು ಕರ್ತನು ಆಶೀರ್ವದಿಸಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವದಿಸ ಲ್ಪಡುವದು.
- Ecclesiastes 5:18–19 ಪ್ರಸಂಗಿ 5:18–19ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು. ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ.ತನ್ನ ಜೀವಿತದ ದಿನಗಳನ್ನು ಅವನು ಹೆಚ್ಚಾಗಿ ಗಣನೆಗೆ ತಾರನು; ತನ್ನ ಹೃದಯದ ಸಂತೋಷ ದಲ್ಲಿ ದೇವರು ಅವನಿಗೆ ಉತ್ತರಕೊಡುತ್ತಾನೆ.
- Deuteronomy 28:4 ಧರ್ಮೋಪದೇಶಕಾಂಡ 28:4ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
- Deuteronomy 28:11 ಧರ್ಮೋಪದೇಶಕಾಂಡ 28:11ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು.
- Ecclesiastes 8:12 ಪ್ರಸಂಗಿ 8:12ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ ದಿವಸಗಳನ್ನು ಹೆಚ್ಚಿಸಿದರೂ ದೇವರಿಗೆ ಭಯ ಪಟ್ಟು ಆತನಲ್ಲಿ ಭಯಪಡುವವರಿಗೆ ಒಳ್ಳೇದಾಗುವ ದೆಂದು ನಾನು ನಿಶ್ಚಯವಾಗಿಯೂ ಬಲ್ಲೆನು.
- 1 Corinthians 15:58 1 ಕೊರಿಂಥದವರಿಗೆ 15:58ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
- Ephesians 6:3 ಎಫೆಸದವರಿಗೆ 6:3ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹು ಕಾಲ ಬದುಕುವಿ.
- Isaiah 65:13 ಯೆಶಾಯ 65:13ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;
- Jeremiah 22:15 ಯೆರೆಮೀಯ 22:15ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ?
- Deuteronomy 28:51 ಧರ್ಮೋಪದೇಶಕಾಂಡ 28:51ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು.