Psalms · chapter 147 · verse 13
Psalm 147:13 in Kannada
ನಿನ್ನ ಬಾಗಲುಗಳ ಅಗುಳಿ ಗಳನ್ನು ಬಲಮಾಡಿ ಆತನು ನಿನ್ನ ಮಕ್ಕಳನ್ನು ನಿನ್ನ ಮಧ್ಯದಲ್ಲಿ ಆಶೀರ್ವದಿಸುತ್ತಾನೆ.
Ninna baagalugala aguli galannu balamaadi aatanu ninna makkalannu ninna madhyadalli aasheervadisuttaane.
Psalm 147:13 in English
- King James Version (KJV)
- For he hath strengthened the bars of thy gates; he hath blessed thy children within thee.
- World English Bible (WEB)
- For he has strengthened the bars of your gates. He has blessed your children within you.
- American Standard Version (ASV)
- For he hath strengthened the bars of thy gates; He hath blessed thy children within thee.
- Bible in Basic English (BBE)
- He has made strong the iron bands of your doors; he has sent blessings on your children inside your walls.
- Darby Translation (DBY)
- For he hath strengthened the bars of thy gates; he hath blessed thy children within thee;
- Webster's Bible (WBS)
- For he hath strengthened the bars of thy gates; he hath blessed thy children within thee.
- Young's Literal Translation (YLT)
- For He did strengthen the bars of thy gates, He hath blessed thy sons in thy midst.
Read in context
- 11ಕರ್ತನು ತನಗೆ ಭಯಪಡುವವರಲ್ಲಿಯೂ ತನ್ನ ಕರುಣೆಗೆ ಎದುರು ನೋಡುವವರಲ್ಲಿಯೂ ಇಷ್ಟಪಡುತ್ತಾನೆ.
- 12ಓ ಯೆರೂ ಸಲೇಮೇ, ಕರ್ತನನ್ನು ಸ್ತುತಿಸು; ಓ ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
- 13ನಿನ್ನ ಬಾಗಲುಗಳ ಅಗುಳಿ ಗಳನ್ನು ಬಲಮಾಡಿ ಆತನು ನಿನ್ನ ಮಕ್ಕಳನ್ನು ನಿನ್ನ ಮಧ್ಯದಲ್ಲಿ ಆಶೀರ್ವದಿಸುತ್ತಾನೆ.
- 14ಆತನು ನಿನ್ನ ಮೇರೆಗಳನ್ನು ಸಮಾಧಾನಪಡಿಸುತ್ತಾನೆ. ಶ್ರೇಷ್ಠವಾದ ಗೋಧಿಯಿಂದ ನಿನ್ನನ್ನು ತೃಪ್ತಿಪಡಿಸುತ್ತಾನೆ.
- 15ಆತನು ತನ್ನ ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾನೆ; ಅತಿ ತೀವ್ರವಾಗಿ ಆತನ ವಾಕ್ಯವು ಓಡುತ್ತದೆ;
Cross references
- Psalm 128:3–6 ಕೀರ್ತನೆಗಳು 128:3–6ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು. ಇಗೋ, ಕರ್ತನಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವದಿಸಲ್ಪಡುವನು. ಕರ್ತನು ನಿನ್ನನ್ನು ಚೀಯೋನಿನೊಳಗಿಂದ ಆಶೀರ್ವದಿಸುವನು; ನಿನ್ನ ಜೀವನದ ದಿವಸಗಳೆಲ್ಲಾ ನೀನು ಯೆರೂಸಲೇಮಿನ ಒಳ್ಳೆಯದನ್ನು ನೋಡುವಿ.ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ. ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.
- Isaiah 44:3–5 ಯೆಶಾಯ 44:3–5ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು. ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು. ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
- Psalm 115:14–15 ಕೀರ್ತನೆಗಳು 115:14–15ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು. ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನಿಂದ ನೀವು ಆಶೀರ್ವದಿಸಲ್ಪಟ್ಟವರು.
- Jeremiah 30:19–20 ಯೆರೆಮೀಯ 30:19–20ಅವುಗಳೊಳಗಿಂದ ಕೃತಜ್ಞತಾ ಸ್ತೋತ್ರವೂ ಸಂತೋ ಷಪಡುವವರ ಸ್ವರವೂ ಹೊರಡುವದು; ಅವರನ್ನು ಅಭಿವೃದ್ಧಿಮಾಡುವೆನು; ಅವರು ಕೊಂಚವಾಗಿರರು, ಅವರು ಅಲ್ಪವಾಗದ ಹಾಗೆ ಅವರಿಗೆ ಘನವನ್ನು ಕೊಡುವೆನು. ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.
- Psalm 144:12 ಕೀರ್ತನೆಗಳು 144:12ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
- Psalm 125:2 ಕೀರ್ತನೆಗಳು 125:2ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ ಕರ್ತನು ಈಗಿನಿಂದ ಯುಗಯುಗಕ್ಕೂ ತನ್ನ ಜನರ ಸುತ್ತಲೂ ಇದ್ದಾನೆ.
- Nehemiah 12:30 ನೆಹೆಮೀಯ 12:30ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧ ಮಾಡಿಕೊಂಡು ಜನರನ್ನೂ ಬಾಗಲುಗಳನ್ನೂ ಗೋಡೆ ಯನ್ನೂ ಶುದ್ಧಮಾಡಿದರು.
- Lamentations 2:8–9 ಪ್ರಲಾಪಗಳು 2:8–9ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ. ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
- Nehemiah 3:1–16 ನೆಹೆಮೀಯ 3:1–16ಆಗ ಪ್ರಧಾನ ಯಾಜಕನಾದ ಎಲ್ಯಾಷೀಬನೂ ಅವನ ಸಹೋದರರಾದ ಯಾಜಕರೂ ಎದ್ದು ಕುರಿ ಬಾಗಲನ್ನು ಕಟ್ಟಿದರು. ಇವರು ಅದನ್ನು ಪರಿಶುದ್ಧ ಮಾಡಿ ಅದರ ಬಾಗಲುಗಳನ್ನು ನಿಲ್ಲಿಸಿದರು. ಹಮ್ಮೆಯದ ಗೋಪುರದ ಮಟ್ಟಿಗೂ ಹನನೇಲನ ಗೋಪುರದ ವರೆಗೂ ಅದನ್ನು ಪರಿಶುದ್ಧ ಮಾಡಿದರು. ಇವರ ತರುವಾಯ ಯೆರಿಕೋವಿನ ಮನುಷ್ಯರು ಕಟ್ಟಿದರು. ಇವರ ತರುವಾಯ ಇಮ್ರಿಯ ಮಗನಾದ ಜಕ್ಕೂರನು ಕಟ್ಟಿದನು. ಆದರೆ ವಿಾನಿನ ಬಾಗಲನ್ನು ಹಸ್ಸೆನಾಹನ ಮಕ್ಕಳು ಕಟ್ಟಿದರು; ಇವರು ಅದರ ತೊಲೆಗಳನ್ನು ಹೊಂದಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿದರು. ಇವರ ತರುವಾಯ ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಹಳೇದನ್ನು ಭದ್ರಪಡಿಸಿದನು. ಇವರ ತರುವಾಯ ಮೆಷೇಜಬೇಲನ ಮಗನಾದ ಬೆರೆಕ್ಯನ ಮಗನಾದ ಮೆಷುಲ್ಲಾಮನು ಹಳೇದನ್ನು ಭದ್ರಪಡಿಸಿದನು; ಇವರ ತರುವಾಯ ಬಾಣನ ಮಗನಾದ ಚಾದೋಕನು ಭದ್ರ ಪಡಿಸಿದನು. ಇವನ ತರುವಾಯ ತೆಕೋವಿಯರು ಭದ್ರಪಡಿಸಿದರು. ಆದರೆ ಇವರ ಶ್ರೇಷ್ಠರು ಕರ್ತನ ಕೆಲಸಕ್ಕೆ ತಮ್ಮ ಕುತ್ತಿಗೆಗಳನ್ನು ಬೊಗ್ಗಿಸಲಿಲ್ಲ. ಇದಲ್ಲದೆ ಪಾಸೇಹನ ಮಗನಾದ ಯೋಯಾ ದನೂ ಬೆಸೋದ್ಯನ ಮಗನಾದ ಮೆಷುಲ್ಲಾಮನೂ ಹಳೇ ಬಾಗಲನ್ನು ಭದ್ರಪಡಿಸಿದರು; ಅವರು ಅದರ ತೊಲೆಗಳನ್ನು ಹೊಂದಿಸಿ ಕದಗಳನ್ನೂ ಜೋಡಣೆ ಗಳನ್ನೂ ಅದರ ಅಗುಳಿಗಳನ್ನೂ ನಿಲ್ಲಿಸಿದರು. ಇವರ ತರುವಾಯ ಗಿಬ್ಯೋನು ಮಿಚ್ಛೆ ಎಂಬ ಊರುಗಳ ಮನುಷ್ಯರಾದ ಗಿಬ್ಯೋನಿಯನಾದ ಮೆಲೆಟ್ಯನೂ ಮೇರೋನೋತಿನವನಾದ ಯಾದೋನನೂ ನದಿಯ ಈಚೆಯಲ್ಲಿರುವ ಅಧಿಪತಿಯ ಪೀಠದ ವರೆಗೂ ಭದ್ರ ಪಡಿಸಿದರು. ಇವರ ತರುವಾಯ ಅಕ್ಕಸಾಲೆಯರಲ್ಲಿ ಒಬ್ಬನಾದಂಥ ಹರ್ಹಯನ ಮಗನಾದ ಉಜ್ಜಿಯೇಲನು ಭದ್ರಪಡಿಸಿದನು. ಇವನ ತರುವಾಯ ತೈಲಗಾರರಲ್ಲಿ ಒಬ್ಬನ ಮಗನಾದ ಹನನ್ಯನು ಭದ್ರಪಡಿಸಿದನು. ಇವರು ಅಗಲವಾದ ಗೋಡೆಯ ತನಕ ಯೆರೂಸಲೇ ಮನ್ನು ಬಲಪಡಿಸಿದರು. ಇವರ ತರುವಾಯ ಯೆರೂ ಸಲೇಮಿನ ಅರ್ಧಕ್ಕೆ ಅಧಿಪತಿಯಾದ ಹೂರನ ಮಗ ನಾದ ರೆಫಾಯನು ಭದ್ರಪಡಿಸಿದನು. ಇವನ ತರು ವಾಯ ಹರುಮಫನ ಮಗನಾದ ಯೆದಾಯನು ತನ್ನ ಮನೆಗೆ ಎದುರಾಗಿದ್ದದ್ದನ್ನು ಭದ್ರಪಡಿಸಿದನು. ಇವನ ತರುವಾಯ ಹಷಬ್ನೆಯನ ಮಗನಾದ ಹಟ್ಟೂಷನು ಭದ್ರಪಡಿಸಿದನು. ಹಾರೀಮನ ಮಗನಾದ ಮಲ್ಕೀ ಯನೂ ಪಹತ್ಮೋವಾಬನ ಮಗನಾದ ಹಷ್ಷೂ ಬನೂ ಇನ್ನೊಂದು ಭಾಗವನ್ನೂ ಒಲೆ ಬುರುಜನ್ನೂ ದುರಸ್ತು ಮಾಡಿದರು. ಇವರ ತರುವಾಯ ಯೆರೂಸ ಲೇಮಿನ ಅರ್ಧಕ್ಕೆ ಅಧಿಪತಿಯಾದ ಹಲ್ಲೊಹೇಷನ ಮಗನಾದ ಶಲ್ಲೂಮನೂ ಅವನ ಕುಮಾರ್ತೆಯರೂ ಭದ್ರಪಡಿಸಿದರು. ತಗ್ಗಿನ ಬಾಗಲನ್ನು ಹಾನೂನನೂ ಜಾನೋಹನ ನಿವಾಸಿಗಳೂ ಭದ್ರಪಡಿಸಿದರು. ಇವರು ಅದನ್ನು ಕಟ್ಟಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿ ಗಳನ್ನೂ ನಿಲ್ಲಿಸಿ ತಿಪ್ಪೆ ಬಾಗಿಲ ವರೆಗೆ ಸಾವಿರ ಮೊಳ ಗೋಡೆಯನ್ನು ಕಟ್ಟಿದರು. ಆದರೆ ಬೆತ್ಹಕ್ಕೆರೆಮಿನ ಅರ್ಧಪಾಲಿಗೆ ಅಧಿಪತಿ ಯಾಗಿರುವ ರೆಕಾಬನ ಮಗನಾದ ಮಲ್ಕೀಯನು ತಿಪ್ಪೆ ಬಾಗಲನ್ನು ಭದ್ರಪಡಿಸಿದನು; ಇವನು ಅದನ್ನು ಕಟ್ಟಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿದನು. ಆದರೆ ಮಿಚ್ಚದ ಅರ್ಧಪಾಲಿಗೆ ಅಧಿಪತಿಯಾದ ಕೊಲ್ಹೋಜೆಯ ಮಗನಾದ ಶಲ್ಲೂನನು ಬುಗ್ಗೆಯ ಬಾಗಲನ್ನು ಭದ್ರಪಡಿಸಿ ಮಾಳಿಗೆಯನ್ನು ಹಾಕಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಎಂಬ ಕೊಳದ ಗೋಡೆಯನ್ನು ದಾವೀದನ ಪಟ್ಟಣದಿಂದ ಇಳಿಯುವ ಮೆಟ್ಟಲುಗಳ ಮಟ್ಟಿಗೂ ಕಟ್ಟಿಸಿದನು. ಇವನ ತರುವಾಯ ಬೇತ್ಚೂರಿನ ಅರ್ಧಪಾಲಿಗೆ ಅಧಿಪತಿಯಾದ ಅಜ್ಬೂಕನ ಮಗನಾದ ನೆಹೆವಿಾ ಯನು ದಾವೀದನ ಸಮಾಧಿಗಳಿಗೆ ಎದುರಾಗಿರುವ ಸ್ಥಳದ ಮಟ್ಟಿಗೂ ಅಗೆಯಲ್ಪಟ್ಟ ಕುಂಟೆಯ ಮಟ್ಟಿಗೂ ಪರಾಕ್ರಮಿಗಳ ಮನೆಯ ಮಟ್ಟಿಗೂ ಇರುವದನ್ನು ಭದ್ರಪಡಿಸಿದನು.
- Psalm 48:11–14 ಕೀರ್ತನೆಗಳು 48:11–14ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ. ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ. ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು. ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.
- Zechariah 8:3–5 ಜೆಕರ್ಯ 8:3–5ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು. ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು.
- Lamentations 4:12 ಪ್ರಲಾಪಗಳು 4:12ಭೂ ರಾಜರೂ ವಿರೋಧಿಯೂ ಶತ್ರುವೂ ಯೆರೂಸಲೇ ಮಿನಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.