Psalms · chapter 148 · verse 11
Psalm 148:11 in Kannada
ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ,
Bhooraajare, ellaa praje gale, pradhaanare, bhoomiya ellaa nyaayaadhi patigale,
Psalm 148:11 in English
- King James Version (KJV)
- Kings of the earth, and all people; princes, and all judges of the earth:
- World English Bible (WEB)
- kings of the earth and all peoples, princes and all judges of the earth,
- American Standard Version (ASV)
- Kings of the earth and all peoples; Princes and all judges of the earth;
- Bible in Basic English (BBE)
- Kings of the earth, and all peoples; rulers and all judges of the earth:
- Darby Translation (DBY)
- Kings of the earth and all peoples, princes and all judges of the earth;
- Webster's Bible (WBS)
- Kings of the earth, and all people; princes, and all judges of the earth:
- Young's Literal Translation (YLT)
- Kings of earth, and all peoples, Chiefs, and all judges of earth,
Read in context
- 9ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
- 10ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ,
- 11ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ,
- 12ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ಮುದುಕರೇ,
- 13ಕರ್ತನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳ ಮೇಲೆ ಅದೆ.ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
Cross references
- Isaiah 60:3 ಯೆಶಾಯ 60:3ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.
- Psalm 102:15 ಕೀರ್ತನೆಗಳು 102:15ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು.
- Revelation 21:24 ಪ್ರಕಟನೆ 21:24ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು.
- Psalm 68:31–32 ಕೀರ್ತನೆಗಳು 68:31–32ಐಗುಪ್ತದಿಂದ ಪ್ರಧಾನರು ಬರುವರು; ಕೂಷ್ ತನ್ನ ಕೈಗಳನ್ನು ದೇವರ ಕಡೆಗೆ ಬೇಗ ಚಾಚುವದು. ಭೂಮಿಯ ರಾಜ್ಯಗಳೇ, ನೀವು ದೇವರಿಗೆ ಹಾಡಿರಿ; ಕರ್ತನಿಗೆ ಸ್ತುತಿಗಳನ್ನು ಹಾಡಿರಿ. ಸೆಲಾ.
- Psalm 138:4–5 ಕೀರ್ತನೆಗಳು 138:4–5ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು. ಹೌದು, ಅವರು ಕರ್ತನ ಮಾರ್ಗಗಳಲ್ಲಿ ಕರ್ತನ ಘನವು ದೊಡ್ಡದೆಂದು ಹಾಡುವರು.
- Psalm 66:1–4 ಕೀರ್ತನೆಗಳು 66:1–4ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ; ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ. ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು; ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
- Psalm 86:9 ಕೀರ್ತನೆಗಳು 86:9ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
- Psalm 2:10–12 ಕೀರ್ತನೆಗಳು 2:10–12ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ. ಭಯದಿಂದ ಕರ್ತನನ್ನು ಸೇವಿಸಿರಿ, ನಡು ಗುತ್ತಾ ಉಲ್ಲಾಸಪಡಿರಿ.ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು. ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.
- Psalm 72:10–11 ಕೀರ್ತನೆಗಳು 72:10–11ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು. ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
- Isaiah 49:23 ಯೆಶಾಯ 49:23ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
- Proverbs 8:15–16 ಜ್ಞಾನೋಕ್ತಿಗಳು 8:15–16ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು. ನನ್ನಿಂದ ಅಧಿಪತಿಗಳೂ ಕೀರ್ತಿವಂತರೂ ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೂ ಆಳುವರು.
- Psalm 22:27–29 ಕೀರ್ತನೆಗಳು 22:27–29ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು. ರಾಜ್ಯವು ಕರ್ತನದೇ; ಜನಾಂಗಗಳಲ್ಲಿ ಆಳುವಾತನು ಆತನೇ. ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು.