Psalms · chapter 148 · verse 9
Psalm 148:9 in Kannada
ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
Bettagale, ellaa guddagale, hannina maragale, ellaa devadaarugale,
Psalm 148:9 in English
- King James Version (KJV)
- Mountains, and all hills; fruitful trees, and all cedars:
- World English Bible (WEB)
- mountains and all hills, fruit trees and all cedars,
- American Standard Version (ASV)
- Mountains and all hills; Fruitful trees and all cedars;
- Bible in Basic English (BBE)
- Mountains and all hills; fruit-trees and all trees of the mountains:
- Darby Translation (DBY)
- Mountains and all hills, fruit-trees and all cedars;
- Webster's Bible (WBS)
- Mountains, and all hills; fruitful trees, and all cedars:
- Young's Literal Translation (YLT)
- The mountains and all heights, Fruit tree, and all cedars,
Read in context
- 7ಭೂಮಿಯಿಂದ ಕರ್ತನನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,
- 8ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ,
- 9ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
- 10ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ,
- 11ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ,
Cross references
- Isaiah 44:23 ಯೆಶಾಯ 44:23ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
- Isaiah 49:13 ಯೆಶಾಯ 49:13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- Isaiah 55:12–13 ಯೆಶಾಯ 55:12–13ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು. ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
- Psalm 98:7–9 ಕೀರ್ತನೆಗಳು 98:7–9ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ. ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು. ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- Psalm 97:4–5 ಕೀರ್ತನೆಗಳು 97:4–5ಆತನ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ನೋಡಿ, ನಡುಗುತ್ತದೆ. ಕರ್ತನ ಸನ್ನಿಧಿಯಲ್ಲಿ ಸಮಸ್ತ ಭೂಮಿಯು ಕರ್ತನ ಮುಂದೆ ಬೆಟ್ಟಗಳು ಮೇಣದ ಹಾಗೆ ಕರಗುತ್ತವೆ.
- Ezekiel 36:1–15 ಯೆಹೆಜ್ಕೇಲನು 36:1–15ಅಲ್ಲದೆ ಮನುಷ್ಯಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು ಮತ್ತು ಹೇಳು--ಇಸ್ರಾಯೇಲ್ ಪರ್ವತಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾಕಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ ಆಹಾ, ಪೂರ್ವದ ಉತ್ತಮ ಸ್ಥಳಗಳು ನಮಗೆ ಸ್ವಾಸ್ತ್ಯವಾದವು ಎಂದು ಹೇಳುವರು; ಆದದ ರಿಂದ ಪ್ರವಾದಿಸು ಮತ್ತು ಹೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅವರು ನಿನ್ನನ್ನು ಹಾಳುಮಾಡಿ; ಎಲ್ಲಾ ಕಡೆಗಳಿಂದಲೂ ನುಂಗಿಬಿಟ್ಟರು. ಅದು ನೀವು ಅನ್ಯಜನಾಂಗಗಳ ಉಳಿಯುವಿಕೆಗೆ ಸ್ವಾಸ್ತ್ಯವಾಗ ಬೇಕೆಂದು ನೀವು ಮಾತನಾಡುವವರ ತುಟಿಗಳಲ್ಲಿಯೂ ಜನರ ನಿಂದೆಯಲ್ಲಿಯೂ ಮೇಲೆತ್ತಲ್ಪಟ್ಟಿದ್ದೀರಿ; ಆದ ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ದೇವ ರಾದ ಕರ್ತನ ವಾಕ್ಯವನ್ನು ಕೇಳಿರಿ--ಹೀಗೆ ಪರ್ವತ ಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಅನ್ಯಜನಾಂಗ ಗಳಲ್ಲಿ ಉಳಿದವರು ಕೊಳ್ಳೆಹೊಡೆದು ತೊರೆದು ಬಿಡುವ ಹಾಳು ಪಟ್ಟಣಗಳಿಗೂ ದೇವರಾದ ಕರ್ತನು ಹೇಳು ತ್ತಾನೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಶ್ಚಯವಾಗಿ ನನ್ನ ರೋಷದ ಬೆಂಕಿ ಯಿಂದ ಅನ್ಯಜನಾಂಗಗಳಲ್ಲಿ ಉಳಿದವರಿಗೂ ಎಲ್ಲಾ ಎದೋಮಿಗೆ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶ ವನ್ನು ಕೊಳ್ಳೆಯಾಗಿ ಹೊರಗೆ ಹಾಕುವ ಹಾಗೆ ತಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದಾರೆ. ಆದದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು; ಪರ್ವತ ಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾ ದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ಅನ್ಯಜನಾಂಗಗಳ ಅವಮಾನವನ್ನು ನೀನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರ ದಿಂದಲೂ ಮಾತನಾಡಿದ್ದೇನೆ. ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನನ್ನ ಕೈಯನ್ನು ಮೇಲೆತ್ತಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿ ರುವ ಅನ್ಯಜನಾಂಗಗಳು ತಾವಾಗಿಯೇ ತಮ್ಮ ನಿಂದೆಯನ್ನು ಹೊರುವರು. ಆದರೆ ಓ ಇಸ್ರಾಯೇಲ್ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹೊರಡಿಸಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಫಲಕೊಡುವಿರಿ; ಅವರ ಬರುವಿಕೆಯು ಸವಿಾಪವಾಗಿದೆ. ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ. ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದ ವರನ್ನೂ ಅಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿ ಮಾಡುತ್ತೇನೆ, ಪಟ್ಟಣಗಳು ಜನಭರಿತವಾಗುವವು, ಹಾಳಾದ ಪ್ರದೇಶಗಳು ಕಟ್ಟಲ್ಪಡುವವು; ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡು ವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ. ಹೌದು, ಮನುಷ್ಯರು ನಿಮ್ಮ ಮೇಲೆ ನಡೆಯುವಂತೆ ನಾನು ಮಾಡುವೆನು, ಅದು ನನ್ನ ಜನರಾದ ಇಸ್ರಾಯೇಲ್ಯರ ಮೇಲೆಯೇ; ಅವರು ನಿನ್ನನ್ನು ಸ್ವಾಧೀನಮಾಡಿಕೊಳ್ಳುವರು, ನೀನು ಅವರಿಗೆ ಸ್ವಾಸ್ಥ್ಯವಾಗುವಿ ಮತ್ತು ನೀನು ಇನ್ನು ಮೇಲೆ ಅವರನ್ನು ಮಕ್ಕಳಿಲ್ಲದ ಮನುಷ್ಯರನ್ನಾಗಿ ಮಾಡುವದಿಲ್ಲ. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ, ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲ ದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವಿ ಎಂದು ಅವರು ನಿನಗೆ ಹೇಳುವರು; ಆದದರಿಂದ ಇನ್ನು ಮುಂದೆ ನೀನು ಮನುಷ್ಯರನ್ನು ನುಂಗುವದಿಲ್ಲ; ಇನ್ನು ಮೇಲೆ ನಿನ್ನ ಜನಾಂಗದವರನ್ನು ಮಕ್ಕಳಿಲ್ಲದವ ರನ್ನಾಗಿ ಮಾಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ. ಅಲ್ಲದೆ ಇನ್ನು ಮೇಲೆ ನೀನು ಅನ್ಯ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗದವರಿಂದ ತಿರಸ್ಕರಿಸಲ್ಪಡುವದಿಲ್ಲ; ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 42:11 ಯೆಶಾಯ 42:11ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ,
- Psalm 114:3–7 ಕೀರ್ತನೆಗಳು 114:3–7ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ಹಿಂತಿರುಗಿತು. ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು. ಸಮುದ್ರವೇ, ನಿನಗೆ ಏನಾಯಿತು? ಯಾಕೆ ಓಡಿ ಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ? ಬೆಟ್ಟಗಳೇ, ಟಗರುಗಳ ಹಾಗೆಯೂ ಚಿಕ್ಕ ಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವದು ಯಾಕೆ? ಬಂಡೆಯನ್ನು ನೀರಿನ ಕೆರೆಗೂ ಬೆಣಚು ಕಲ್ಲನ್ನು ನೀರಿನ ಬುಗ್ಗೆಗೂ ಮಾರ್ಪಡಿಸುವಕರ್ತನ ಸನ್ನಿಧಿ ಯಲ್ಲಿಯೂ ಯಾಕೋಬನ ದೇವರ ಮುಂದೆಯೂ ಭೂಮಿಯೇ, ನಡುಗು.
- Isaiah 64:1 ಯೆಶಾಯ 64:1ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,
- Psalm 65:12–13 ಕೀರ್ತನೆಗಳು 65:12–13ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ. ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.
- Psalm 96:11–13 ಕೀರ್ತನೆಗಳು 96:11–13ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ. ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು. ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.