Psalms · chapter 148 · verse 8
Psalm 148:8 in Kannada
ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ,
Benkiye, kalmaleye, himave, habeye, aatana vaakyavannu kaikolluva biru gaaliye,
Psalm 148:8 in English
- King James Version (KJV)
- Fire, and hail; snow, and vapour; stormy wind fulfilling his word:
- World English Bible (WEB)
- lightning and hail, snow and clouds, stormy wind, fulfilling his word,
- American Standard Version (ASV)
- Fire and hail, snow and vapor; Stormy wind, fulfilling his word;
- Bible in Basic English (BBE)
- Fire and rain of ice, snow and mists; storm-wind, doing his word:
- Darby Translation (DBY)
- Fire and hail, snow and vapour, stormy wind fulfilling his word;
- Webster's Bible (WBS)
- Fire, and hail; snow, and vapors; stormy wind fulfilling his word:
- Young's Literal Translation (YLT)
- Fire and hail, snow and vapour, Whirlwind doing His word;
Read in context
- 6ಆತನು ಅವುಗಳನ್ನು ಯುಗಯುಗಗಳಿಗೂ ಸ್ಥಾಪಿಸಿದ್ದಾನೆ; ಆಜ್ಞೆಯನ್ನು ಕೊಟ್ಟಿ ದ್ದಾನೆ, ಅದು ವಿಾರಿ ಹೋಗುವದಿಲ್ಲ.
- 7ಭೂಮಿಯಿಂದ ಕರ್ತನನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,
- 8ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ,
- 9ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
- 10ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ,
Cross references
- Psalm 147:15–18 ಕೀರ್ತನೆಗಳು 147:15–18ಆತನು ತನ್ನ ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾನೆ; ಅತಿ ತೀವ್ರವಾಗಿ ಆತನ ವಾಕ್ಯವು ಓಡುತ್ತದೆ; ಆತನು ಹಿಮವನ್ನು ಉಣ್ಣೆಯ ಹಾಗೆ ಕೊಡುತ್ತಾನೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ. ತನ್ನ ನೀರುಗಡ್ಡೆ ಯನ್ನು ತುಂಡುಗಳ ಹಾಗೆ ಹಾಕುತ್ತಾನೆ; ಆತನ ಚಳಿಯ ಮುಂದೆ ಯಾರು ನಿಲ್ಲುವರು? ಆತನು ತನ್ನ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾನೆ; ತನ್ನ ಗಾಳಿಯನ್ನು ಬೀಸಮಾಡುತ್ತಾನೆ; ನೀರು ಹರಿಯುತ್ತದೆ.
- Revelation 16:21 ಪ್ರಕಟನೆ 16:21ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಅನೇ ಕಲ್ಲುಗಳು ಸುರಿದವು; ಒಂದೊಂದು ಕಲ್ಲು ಹೆಚ್ಚು ಕಡಿಮೆ ನಾಲ್ಕು ಮಣ ತೂಕವಾಗಿತ್ತು; ಆ ಆನೆಕಲ್ಲುಗಳ ಉಪದ್ರವವು ಬಹಳ ಅತಿದೊಡ್ಡದಾಗಿ ದ್ದದರಿಂದ ಮನುಷ್ಯರು ದೇವರನ್ನು ದೂಷಿಸಿದರು.
- Revelation 16:8–9 ಪ್ರಕಟನೆ 16:8–9ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು.
- Numbers 16:35 ಅರಣ್ಯಕಾಂಡ 16:35ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- Psalm 103:20 ಕೀರ್ತನೆಗಳು 103:20ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,
- Job 38:22–37 ಯೋಬನು 38:22–37ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು. ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ? ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ? ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ? ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ? ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ? ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ;
- Psalm 107:25–29 ಕೀರ್ತನೆಗಳು 107:25–29ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ. ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ. ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು.
- Psalm 18:12 ಕೀರ್ತನೆಗಳು 18:12ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು.
- Matthew 8:24–27 ಮತ್ತಾಯನು 8:24–27ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು. ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು. ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು. ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
- Jonah 1:4 ಯೋನ 1:4ಆದರೆ ಕರ್ತನು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದನು; ಸಮುದ್ರದಲ್ಲಿ ಮಹಾಬಿರುಗಾಳಿ ಉಂಟಾಗಿ ಹಡಗು ಒಡೆಯುವ ದಕ್ಕಿತ್ತು.
- Amos 7:4 ಆಮೋಸ 7:4ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
- Exodus 10:19 ವಿಮೋಚನಕಾಂಡ 10:19ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.