Psalms · chapter 69 · verse 12
Psalm 69:12 in Kannada
ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.
Baagalalli kootu kolluvavaru nanage virodhavaagi maatanaadu ttaare; naanu madyapaanigalige sangeetavaadenu.
Psalm 69:12 in English
- King James Version (KJV)
- They that sit in the gate speak against me; and I [was] the song of the drunkards.
- World English Bible (WEB)
- Those who sit in the gate talk about me. I am the song of the drunkards.
- American Standard Version (ASV)
- They that sit in the gate talk of me; And [I am] the song of the drunkards.
- Bible in Basic English (BBE)
- I am a cause of wonder to those in authority; a song to those who are given to strong drink.
- Darby Translation (DBY)
- They that sit in the gate talk of me, and [I am] the song of the drunkards.
- Webster's Bible (WBS)
- They that sit in the gate speak against me; and I [was] the song of the drunkards.
- Young's Literal Translation (YLT)
- Those sitting at the gate meditate concerning me, And those drinking strong drink, Play on instruments.
Read in context
- 10ನನ್ನ ಪ್ರಾಣವು ಉಪವಾಸದಲ್ಲಿ ಶಿಕ್ಷಿಸಲ್ಪಟ್ಟು ಅತ್ತಾಗ ಅದು ನನಗೆ ನಿಂದೆ ಆಯಿತು.
- 11ಗೋಣಿತಟ್ಟನ್ನು ಸಹ ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ; ಹೀಗೆ ನಾನು ಅವರಿಗೆ ಗಾದೆ ಆದೆನು.
- 12ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.
- 13ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು.
- 14ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ
Cross references
- Psalm 35:15–16 ಕೀರ್ತನೆಗಳು 35:15–16ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು. ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
- Acts 4:26–27 ಅಪೊಸ್ತಲರ ಕೃತ್ಯಗಳು 4:26–27ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ. ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತ ಒಂದಾಗಿ ಕೂಡಿಕೊಂಡು
- Matthew 27:41–42 ಮತ್ತಾಯನು 27:41–42ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ-- ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.ಇವನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವು ಅವನನ್ನು ನಂಬುವೆವು;
- Matthew 27:20 ಮತ್ತಾಯನು 27:20ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸು ವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹ ವನ್ನು ಒಡಂಬಡಿಸಿದರು.
- Daniel 5:23 ದಾನಿಯೇಲನು 5:23ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- Luke 23:2 ಲೂಕನು 23:2ಅವರು ಆತನ ಮೇಲೆ ದೂರು ಹೇಳಲಾರಂಭಿಸಿ--ಈ ಮನುಷ್ಯನು ಜನಾಂಗವನ್ನು ತಪ್ಪು ದಾರಿಗೆ ನಡಿಸುವನಾಗಿ ತಾನೇ ಕ್ರಿಸ್ತನೆಂಬ ಅರಸನಾಗಿದ್ದನೆಂದೂ ಹೇಳಿ ಕೈಸರನಿಗೆ ಕಂದಾಯ ಕೊಡದಂತೆ ಇವನು ಅಡ್ಡಿ ಮಾಡುತ್ತಿರುವದನ್ನು ನಾವು ನೋಡಿದ್ದೇವೆಅಂದರು.
- Mark 15:17–19 ಮಾರ್ಕನು 15:17–19ಅವರು ಆತನಿಗೆ ಊದಾ ಬಣ್ಣದ ವಸ್ತ್ರವನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟು ಆತನನ್ನು ವಂದಿಸುವದಕ್ಕೆ ಆರಂಭಿಸಿ--ಯೆಹೂ ದ್ಯರ ಅರಸನೇ, ನಿನಗೆ ವಂದನೆ ಅಂದರು. ಅವರು ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ತಮ್ಮ ಮೊಣಕಾಲೂರಿ ಆತನಿಗೆ ನಮಸ್ಕರಿಸಿದರು.
- Matthew 27:12–13 ಮತ್ತಾಯನು 27:12–13ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ. ಆಗ ಪಿಲಾತನು ಆತನಿಗೆ--ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುವದನ್ನು ನೀನು ಕೇಳುವದಿಲ್ಲವೋ ಅಂದನು.
- Genesis 19:1 ಆದಿಕಾಂಡ 19:1ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮ್ಗೆ ಬಂದಾಗ ಲೋಟನು ಸೊದೋ ಮ್ನ ಬಾಗಲಲ್ಲಿ ಕೂತಿದ್ದನು. ಲೋಟನು ಅವರನ್ನು ಎದುರುಗೊಳ್ಳುವದಕ್ಕೆ ಎದ್ದು ನೆಲದ ಮಟ್ಟಿಗೆ ಬೊಗ್ಗಿ
- Job 30:8–9 ಯೋಬನು 30:8–9ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು. ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು.
- Deuteronomy 16:18 ಧರ್ಮೋಪದೇಶಕಾಂಡ 16:18ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
- Daniel 5:2–4 ದಾನಿಯೇಲನು 5:2–4ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು. ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.