Psalms · chapter 78 · verse 12
Psalm 78:12 in Kannada
ಅವರ ತಂದೆಗಳ ಮುಂದೆ ಐಗುಪ್ತ ದೇಶ ದಲ್ಲಿ, ಸೋನ್ ಬೈಲಿನಲ್ಲಿ ಆತನು ಅದ್ಭುತಗಳನ್ನು ಮಾಡಿದನು.
Avara tandegala munde aigupta desha dalli, son bailinalli aatanu adbhutagalannu maadidanu.
Psalm 78:12 in English
- King James Version (KJV)
- Marvellous things did he in the sight of their fathers, in the land of Egypt, [in] the field of Zoan.
- World English Bible (WEB)
- He did marvelous things in the sight of their fathers, in the land of Egypt, in the field of Zoan.
- American Standard Version (ASV)
- Marvellous things did he in the sight of their fathers, In the land of Egypt, in the field of Zoan.
- Bible in Basic English (BBE)
- He did great works before the eyes of their fathers, in the land of Egypt, in the fields of Zoan.
- Darby Translation (DBY)
- In the sight of their fathers had he done wonders, in the land of Egypt, the field of Zoan.
- Webster's Bible (WBS)
- Marvelous things did he in the sight of their fathers, in the land of Egypt, [in] the field of Zoan.
- Young's Literal Translation (YLT)
- Before their fathers He hath done wonders, In the land of Egypt — the field of Zoan.
Read in context
- 10ಅವರು ದೇವರ ಒಡಂಬಡಿಕೆ ಯನ್ನು ಕೈಕೊಳ್ಳದೆ ಆತನ ನ್ಯಾಯಪ್ರಮಾಣದಲ್ಲಿ ನಡೆಯಲೊಲ್ಲದೆ ಇದ್ದರು.
- 11ಆತನು ಅವರಿಗೆ ತೋರಿ ಸಿದ ಆತನ ಕೃತ್ಯಗಳನ್ನೂ ಆದ್ಭುತಗಳನ್ನೂ ಮರೆತು ಬಿಟ್ಟರು.
- 12ಅವರ ತಂದೆಗಳ ಮುಂದೆ ಐಗುಪ್ತ ದೇಶ ದಲ್ಲಿ, ಸೋನ್ ಬೈಲಿನಲ್ಲಿ ಆತನು ಅದ್ಭುತಗಳನ್ನು ಮಾಡಿದನು.
- 13ಆತನು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದನು; ನೀರನ್ನು ಕುಪ್ಪೆಯಾಗಿ ನಿಲ್ಲಿಸಿ ದನು.
- 14ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು.
Cross references
- Numbers 13:22 ಅರಣ್ಯಕಾಂಡ 13:22ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.
- Ezekiel 30:14 ಯೆಹೆಜ್ಕೇಲನು 30:14ನಾನು ಪತ್ರೋಸನ್ನು ಹಾಳು ಮಾಡುವೆನು; ಚೋವನಿನಲ್ಲಿ ಬೆಂಕಿಯಿಡುವೆನು, ನೋಪುರದಲ್ಲಿ ನ್ಯಾಯಗಳನ್ನು ತೀರಿಸುವೆನು.
- Isaiah 19:11 ಯೆಶಾಯ 19:11ಚೋಯನಿನ ಪ್ರಧಾನರು ನಿಜ ವಾಗಿ ಮೂರ್ಖರು, ಫರೋಹನ ಜ್ಞಾನವುಳ್ಳ ಸಲಹೆ ಗಾರರ ಆಲೋಚನೆಯು ಬುದ್ಧಿಹೀನವೇ. ನಾನು ಜ್ಞಾನಿಗಳ ಮಗನೆಂದು ಪುರಾತನ ರಾಜವಂಶಿಯನು ಎಂದು ನೀವು ಫರೋಹನಿಗೆ ಹೇಳುವದು ಹೇಗೆ?
- Deuteronomy 6:22 ಧರ್ಮೋಪದೇಶಕಾಂಡ 6:22ಕರ್ತನು ನಮ್ಮ ಕಣ್ಣುಗಳ ಮುಂದೆ ಐಗುಪ್ತದಲ್ಲಿ ಫರೋಹನ ಮೇಲೆಯೂ ಅವನ ಎಲ್ಲಾ ಮನೆಯವರ ಮೇಲೆಯೂ ಬಹು ಕಠಿಣವಾದ ಬಾಧೆಗಳಿಂದ ಅದ್ಭುತ ಗಳನ್ನೂ ಸೂಚನೆಗಳನ್ನೂ ತೋರಿಸಿದನು.
- Isaiah 19:13 ಯೆಶಾಯ 19:13ಚೋಯನಿನ ಶ್ರೇಷ್ಠರು (ಪ್ರಧಾನರು) ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಐಗುಪ್ತದ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿ ತಪ್ಪುದಾರಿಗೆಳೆದಿದ್ದಾರೆ.
- Psalm 135:9 ಕೀರ್ತನೆಗಳು 135:9ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
- Exodus 7:1–51 ವಿಮೋಚನಕಾಂಡ 7:1–51ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ. ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಮಾತನಾಡಬೇಕು; ಇಸ್ರಾಯೇಲ್ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು. ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ ನನ್ನ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಐಗುಪ್ತದೇಶದಲ್ಲಿ ಹೆಚ್ಚಿಸುವೆನು. ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು. ನಾನು ಐಗುಪ್ತದ ಮೇಲೆ ನನ್ನ ಕೈಯನ್ನಿಟ್ಟು ಅವರೊಳ ಗಿಂದ ಇಸ್ರಾಯೇಲ್ ಮಕ್ಕಳನ್ನು ಹೊರಗೆ ಬರಮಾಡಿ ದಾಗ ನಾನೇ ಕರ್ತನೆಂದು ಐಗುಪ್ತ್ಯರಿಗೆ ತಿಳಿದು ಬರುವದು ಎಂದು ಹೇಳಿದನು. ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು. ಅವರು ಫರೋಹನ ಮುಂದೆ ಮಾತನಾಡು ವಾಗ ಮೋಶೆಯು ಎಂಭತ್ತು ವರುಷದವನಾಗಿದ್ದನು, ಆರೋನನು ಎಂಭತ್ತುಮೂರು ವರುಷದವನಾಗಿದ್ದನು. ಆಗ ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ-- ಫರೋಹನು ನಿಮಗೆ--ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರೆಂದು ಹೇಳುವಾಗ ಮೋಶೆ ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಫರೋಹನ ಮುಂದೆ ಬಿಸಾಡು ಎಂದು ಹೇಳಬೇಕು; ಆಗ ಅದು ಸರ್ಪವಾಗುವದು ಎಂದು ಹೇಳಿದನು. ಮೋಶೆ ಆರೋನರೂ ಫರೋಹನ ಬಳಿಗೆ ಹೋಗಿ ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮುಂದೆಯೂ ಅವನ ಸೇವಕರ ಮುಂದೆಯೂ ಬಿಸಾಡಿ ದಾಗ ಅದು ಸರ್ಪವಾಯಿತು. ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು. ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ. ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು. ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು ಅವನಿಗೆ ನೀನು--ಇಬ್ರಿಯರ ದೇವರಾದ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು ಎಂದು ಹೇಳಿದ್ದಾನೆ. ಆದರೆ ಇಗೋ, ಇಂದಿನ ವರೆಗೂ ನೀನು ಕೇಳಲಿಲ್ಲ. ಕರ್ತನು ಹೀಗೆ ಹೇಳುತ್ತಾನೆ--ನಾನೇ ಕರ್ತನೆಂದು ಇದರಿಂದ ತಿಳುಕೊಳ್ಳುವಿ. ಇಗೋ, ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನದಿಯ ನೀರನ್ನು ಹೊಡೆ ಯುವೆನು, ಆಗ ಅದು ರಕ್ತವಾಗುವದು. ನದಿಯ ಲ್ಲಿರುವ ವಿಾನುಗಳು ಸಾಯುವವು; ನದಿಯು ನಾರು ವದು. ಐಗುಪ್ತ್ಯರು ನದಿಯ ನೀರನ್ನು ಕುಡಿಯುವದಕ್ಕೆ ಅಸಹ್ಯಪಡುವರು ಎಂದು ಹೇಳು ಅಂದನು. ಕರ್ತನು ಮೋಶೆಗೆ--ನೀನು ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಐಗುಪ್ತದಲ್ಲಿರುವ ನೀರುಗಳ ಮೇಲೆಯೂ ನದಿ ಪ್ರವಾಹ ಕೆರೆ ಕೊಳ ಕುಂಟೆಗಳ ಮೇಲೆಯೂ ಕೈಚಾಚು ಎಂದು ಹೇಳು. ಆಗ ಅವು ರಕ್ತವಾಗುವವು; ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆ ಗಳಲ್ಲಾಗಲಿ ಕಲ್ಲಿನ ಪಾತ್ರೆಗಳಲ್ಲಾಗಲಿ ರಕ್ತವಿರುವದು ಎಂದು ಹೇಳಿದನು. ಮೋಶೆ ಆರೋನರು ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಫರೋಹನ ಕಣ್ಣುಗಳ ಮುಂದೆಯೂ ಅವನ ಸೇವಕರ ಕಣ್ಣುಗಳ ಮುಂದೆಯೂ ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು. ನದಿಯಲ್ಲಿದ್ದ ವಿಾನುಗಳು ಸತ್ತವು; ನದಿಯು ದುರ್ವಾಸನೆಗೊಂಡಿತು. ಐಗುಪ್ತ್ಯರು ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಐಗುಪ್ತದೇಶದಲ್ಲೆಲ್ಲಾ ರಕ್ತವೇ ಆಗಿತ್ತು. ಐಗುಪ್ತದ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಕರ್ತನು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ. ಫರೋಹನು ತಿರುಗಿ ಕೊಂಡು ತನ್ನ ಮನೆಗೆ ಹೋದನು. ಅವನು ಇದಕ್ಕಾ ದರೂ ತನ್ನ ಮನಸ್ಸುಕೊಡಲಿಲ್ಲ. ಆದರೆ ಐಗುಪ್ತ್ಯ ರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಇದ್ದದರಿಂದ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಅಗೆದರು.ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು. ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು.
- Psalm 105:27–38 ಕೀರ್ತನೆಗಳು 105:27–38ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು. ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ. ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು. ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು. ಆತನು ಹೇಳಲು ನೊಣದ ಗುಂಪುಗಳೂ ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು. ಅವರ ಮಳೆಗಾಗಿ ಕಲ್ಮಳೆಯನ್ನೂ ಅಗ್ನಿಜ್ವಾಲೆಗಳನ್ನೂ ದೇಶದಲ್ಲಿ ಬರಮಾಡಿದನು. ಅವರ ದ್ರಾಕ್ಷೇ ಬಳ್ಳಿಯನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಮೇರೆಗಳ ಮರ ಗಳನ್ನು ಮುರಿದನು. ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು, ಅವು ಅವರ ದೇಶದಲ್ಲಿ ಎಲ್ಲಾ ಪಲ್ಯಗಳನ್ನು ನುಂಗಿಬಿಟ್ಟು; ಭೂಮಿಯ ಫಲಗಳನ್ನು ತಿಂದುಬಿಟ್ಟವು. ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲುಗಳನ್ನೂ ಬಲವುಳ್ಳ ಎಲ್ಲಾ ಪ್ರಮುಖರನ್ನೂ ಹೊಡೆದನು. ಆತನು ಬೆಳ್ಳಿ ಬಂಗಾರಗಳ ಸಂಗಡ ಅವರನ್ನು ಹೊರಗೆ ಬರಮಾಡಿ ದನು; ಅವರ ಗೋತ್ರಗಳಲ್ಲಿ ಬಲಹೀನನು ಒಬ್ಬನೂ ಇರಲಿಲ್ಲ. ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆ ಯುಳ್ಳವರಾದ್ದರಿಂದ ಅವರು ಹೊರಟು ಹೋದದಕ್ಕೆ ಸಂತೋಷಿಸಿದರು.
- Nehemiah 9:10 ನೆಹೆಮೀಯ 9:10ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
- Psalm 106:22 ಕೀರ್ತನೆಗಳು 106:22ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
- Genesis 32:3 ಆದಿಕಾಂಡ 32:3ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
- Deuteronomy 4:34 ಧರ್ಮೋಪದೇಶಕಾಂಡ 4:34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?