Song of Solomon · chapter 8 · verse 13
Song of Solomon 8:13 in Kannada
ತೋಟಗಳಲ್ಲಿ ವಾಸವಾಗಿರುವವನೇ, ಜತೆ ಗಾರರು ನಿನ್ನ ಶಬ್ದವನ್ನು ಆಲೈಸುತ್ತಾರೆ. ನಾನು ಕೇಳುವಂತೆ ಮಾಡು.ನನ್ನ ಪ್ರಿಯನೇ, ತ್ವರೆಮಾಡು, ಜಿಂಕೆಯ ಹಾಗೆ ಇಲ್ಲವೆ ಸುಗಂಧವುಳ್ಳ ಪರ್ವತಗಳ ಮೇಲಿರುವ ದುಪ್ಪಿ ಮರಿಯ ಹಾಗೆಯೆ ಇರು.
Totagalalli vaasavaagiruvavane, jate gaararu ninna shabdavannu aalaisuttaare. Naanu keluvante maadu.nanna priyane, tvaremaadu, jinkeya haage illave sugandhavulla parvatagala meliruva duppi mariya haageye iru.
Song of Solomon 8:13 in English
- King James Version (KJV)
- Thou that dwellest in the gardens, the companions hearken to thy voice: cause me to hear [it].
- World English Bible (WEB)
- You who dwell in the gardens, with friends in attendance, let me hear your voice!
- American Standard Version (ASV)
- Thou that dwellest in the gardens, The companions hearken for thy voice: Cause me to hear it.
- Bible in Basic English (BBE)
- You who have your resting-place in the gardens, the friends give ear to your voice; make me give ear to it.
- Darby Translation (DBY)
- Thou that dwellest in the gardens, The companions hearken to thy voice: Let me hear [it].
- Webster's Bible (WBS)
- Thou that dwellest in the gardens, the companions hearken to thy voice: cause me to hear [it] .
- Young's Literal Translation (YLT)
- The companions are attending to thy voice, Cause me to hear. Flee, my beloved, and be like to a roe,
Read in context
- 11ಆಗ, ನಾನು ಅವನ ದೃಷ್ಟಿಯಲ್ಲಿ ದಯ ಹೊಂದಿದವಳ ಹಾಗಿದ್ದೆನು. ಬಾಲ್ಹಾಮೋನಿನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷೇ ತೋಟ ಇತ್ತು. ಅವನು ಆ ದ್ರಾಕ್ಷೇ ತೋಟವನ್ನು ಒಕ್ಕಲಿಗರಿಗೆ ಗುತ್ತಿ ಗೆಗೆ ಕೊಟ್ಟನು. ಒಬ್ಬೊಬ್ಬನು ಅದರ ಫಲಕ್ಕೋಸ್ಕರ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.
- 12ನನ್ನದಾದ ನನ್ನ ದ್ರಾಕ್ಷೇ ತೋಟವು ನನ್ನ ಮುಂದೆ ಅದೆ. ಓ ಸೊಲೊಮೋನನೇ, ನಿನಗೆ ಒಂದು ಸಾವಿರ ಇರತಕ್ಕದ್ದು. ಅದರ ಫಲವನ್ನು ಕಾಪಾಡುವವರಿಗೆ ಇನ್ನೂರು ಆಗಲಿ.
- 13ತೋಟಗಳಲ್ಲಿ ವಾಸವಾಗಿರುವವನೇ, ಜತೆ ಗಾರರು ನಿನ್ನ ಶಬ್ದವನ್ನು ಆಲೈಸುತ್ತಾರೆ. ನಾನು ಕೇಳುವಂತೆ ಮಾಡು.ನನ್ನ ಪ್ರಿಯನೇ, ತ್ವರೆಮಾಡು, ಜಿಂಕೆಯ ಹಾಗೆ ಇಲ್ಲವೆ ಸುಗಂಧವುಳ್ಳ ಪರ್ವತಗಳ ಮೇಲಿರುವ ದುಪ್ಪಿ ಮರಿಯ ಹಾಗೆಯೆ ಇರು.
- 14ನನ್ನ ಪ್ರಿಯನೇ, ತ್ವರೆಮಾಡು, ಜಿಂಕೆಯ ಹಾಗೆ ಇಲ್ಲವೆ ಸುಗಂಧವುಳ್ಳ ಪರ್ವತಗಳ ಮೇಲಿರುವ ದುಪ್ಪಿ ಮರಿಯ ಹಾಗೆಯೆ ಇರು.
Cross references
- Song of Solomon 4:16 ಪರಮಗೀತೆ 4:16ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.
- Song of Solomon 1:7 ಪರಮಗೀತೆ 1:7ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸಿ ಮಧ್ಯಾಹ್ನದಲ್ಲಿ ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ ಎಂದು ನನಗೆ ತಿಳಿಸು. ನಾನು ನಿನ್ನ ಜೊತೆಗಾ ರರ ಮಂದೆಗಳ ಬಳಿಯಲ್ಲಿ ಪರಕೀಯಳ ಹಾಗೆ ಇರುವದೇಕೆ?
- Song of Solomon 5:9–16 ಪರಮಗೀತೆ 5:9–16ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? ನನ್ನ ಪ್ರಿಯನು ಬಿಳುಪೂ ಕೆಂಪೂ ಉಳ್ಳವನು; ಹತ್ತು ಸಾವಿರ ಜನರಲ್ಲಿ ಮೇಲಾದವನು. ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ. ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ. ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ. ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ. ಅವನ ಕಾಲುಗಳು ಶುದ್ಧ ಬಂಗಾರದ ಗದ್ದಿಗೆಯ ಮೇಲೆ ಇರಿಸಿದ ಬಿಳೀ ಕಲ್ಲಿನ ಸ್ತಂಭಗಳ ಹಾಗೆ ಅವೆ. ಅವನ ಮುಖವು ಲೆಬನೋನಿನ ಹಾಗೆ ದೇವದಾರುಗಳ ಹಾಗೆ ಶ್ರೇಷ್ಠವಾಗಿದೆ.ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು. ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
- Song of Solomon 7:11–12 ಪರಮಗೀತೆ 7:11–12ನನ್ನ ಪ್ರಿಯನೇ, ನಾವು ಹೊಲಕ್ಕೆ ಹೋಗಿ ಗ್ರಾಮಗಳಲ್ಲಿ ವಸತಿಯಾಗಿರುವ ಬಾ. ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
- Song of Solomon 6:2 ಪರಮಗೀತೆ 6:2ನನ್ನ ಪ್ರಿಯನು ತೋಟಗಳಲ್ಲಿ ಮೇಯಿಸುವದಕ್ಕೂ ತಾವರೆಗಳನ್ನು ಕೂಡಿಸುವದಕ್ಕೂ ತನ್ನ ತೋಟಕ್ಕೆ ಸುಗಂಧಗಳ ಮಡಿಗೆ ಹೋಗಿದ್ದಾನೆ.
- John 14:13–14 ಯೋಹಾನನು 14:13–14ನನ್ನ ಹೆಸರಿನಲ್ಲಿ ನೀವು ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ಮಗನಲ್ಲಿ ತಂದೆಯು ಮಹಿಮೆ ಹೊಂದುವನು. ನೀವು ನನ್ನ ಹೆಸರಿನಲ್ಲಿ ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.
- Song of Solomon 6:11 ಪರಮಗೀತೆ 6:11ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.
- Matthew 18:20 ಮತ್ತಾಯನು 18:20ಯಾಕಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬರುತ್ತಾರೋ ಅವರ ಮಧ್ಯ ದಲ್ಲಿ ನಾನು ಇದ್ದೇನೆ ಅಂದನು.
- Judges 14:11 ನ್ಯಾಯಸ್ಥಾಪಕರು 14:11ತರು ವಾಯ ಅವರು ಅವನನ್ನು ನೋಡಲಾಗಿ ಅವನ ಸಂಗಡ ಇರುವದಕ್ಕೆ ಮೂವತ್ತು ಮಂದಿ ಸಂಗಡಿಗರನ್ನು ಕೊಟ್ಟರು.
- Judges 11:38 ನ್ಯಾಯಸ್ಥಾಪಕರು 11:38ಆಗ ಅವನು--ಎರಡು ತಿಂಗಳು ಹೋಗಿ ಬಾ ಎಂದು ಹೇಳಿ ಅವಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿ ಯರ ಸಂಗಡ ಹೋಗಿ ತನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಅತ್ತು,
- Psalm 50:15 ಕೀರ್ತನೆಗಳು 50:15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- Song of Solomon 3:7–11 ಪರಮಗೀತೆ 3:7–11ಸೊಲೊಮೋನನ ಹಾಸಿಗೆಯನ್ನು ನೋಡು; ಇಸ್ರಾ ಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಪರಾಕ್ರಮಶಾಲಿಗಳು ಅದನ್ನು ಸುತ್ತಿಕೊಂಡಿದ್ದಾರೆ. ಅವರೆಲ್ಲರು ಕತ್ತಿಹಿಡಿದವರು, ಯುದ್ಧನಿಪುಣರು. ರಾತ್ರಿಯ ಭಯದ ನಿಮಿತ್ತ ಪ್ರತಿ ಮನುಷ್ಯನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾನೆ. ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡನು. ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಕೆಳಗಿನ ಭಾಗವನ್ನು ಬಂಗಾರದಿಂದಲೂ ಹೊದಿಕೆ ಯನ್ನು ಧೂಮ್ರ ವರ್ಣದ ವಸ್ತ್ರದಿಂದಲೂ ಮಾಡಿ ಸಿದನು. ಯೆರೂಸಲೇಮಿನ ಕುಮಾರ್ತೆಯರ ನಿಮಿತ್ತ ಅದರ ಮಧ್ಯದಲ್ಲಿದ್ದದ್ದು ಪ್ರೀತಿಯಿಂದ ಹಾಸಲ್ಪಟ್ಟಿತು.ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ. ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.