1 Chronicles · chapter 19 · verse 4
1 Chronicles 19:4 in Kannada
ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು.
Aadadarinda haanoo nanu daaveedana sevakarannu hididu avarannu bolisi avara angigalannu madhyadalli sontada kelagina varegoo kattarisi avarannu kaluhisibittanu.
1 Chronicles 19:4 in English
- King James Version (KJV)
- Wherefore Hanun took David’s servants, and shaved them, and cut off their garments in the midst hard by their buttocks, and sent them away.
- World English Bible (WEB)
- So Hanun took David’s servants, shaved them, and cut off their garments in the middle at their buttocks, and sent them away.
- American Standard Version (ASV)
- So Hanun took David’s servants, and shaved them, and cut off their garments in the middle, even to their buttocks, and sent them away.
- Bible in Basic English (BBE)
- So Hanun took David's servants, and cutting off their hair and the skirts of their robes up to the middle, sent them away.
- Darby Translation (DBY)
- And Hanun took David's servants, and had them shaved, and their raiment cut off in the midst, as far as the hip, and sent them away.
- Webster's Bible (WBS)
- Wherefore Hanun took David's servants, and shaved them, and cut off their garments in the midst hard by their buttocks, and sent them away.
- Young's Literal Translation (YLT)
- And Hanun taketh the servants of David, and shaveth them, and cutteth their long robes in the midst, unto the buttocks, and sendeth them away.
Read in context
- 2ಆಗ ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ಕೃಪೆ ತೋರಿಸಿದ್ದರಿಂದ ಅವನ ಮಗನಾದ ಹಾನೂನನಿಗೆ ನಾನು ಕೃಪೆ ತೋರಿಸುವೆನು ಅಂದನು. ದಾವೀದನು ಅವನ ತಂದೆಯನ್ನು ಕುರಿತು ಅವನಿಗೆ ಆದರಣೆ ಕೊಡಲು ಸೇವಕರನ್ನು ಕಳುಹಿ ಸಿದನು. ಹೀಗೆಯೇ ದಾವೀದನ ಸೇವಕರು ಅವನಿಗೆ ಆದರಣೆ ಕೊಡಲು ಅಮ್ಮೋನನ ಮಕ್ಕಳ ದೇಶಕ್ಕೆ ಹಾನೂನನ ಬಳಿಗೆ ಬಂದರು.
- 3ಆದರೆ ಅಮ್ಮೋನಿಯರ ಪ್ರಧಾನರು ಹಾನೂನನಿಗೆ--ದಾವೀದನು ನಿನ್ನ ಬಳಿಗೆ ಆದರಣೆ ಕೊಡುವವರನ್ನು ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ನೀನು ನೆನಸು ತ್ತಿಯೋ? ಅವನ ಸೇವಕರು ಶೋಧಿಸಲೂ ಕೆಡವಿ ಹಾಕಲೂ ದೇಶವನ್ನು ಪಾಳತಿ ನೋಡಲೂ ನಿನ್ನ ಬಳಿಗೆ ಬರಲಿಲ್ಲವೋ ಅಂದರು.
- 4ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು.
- 5ಆಗ ಕೆಲವರು ಹೋಗಿ ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದರು. ಆ ಮನುಷ್ಯರು ಬಹಳವಾಗಿ ನಾಚಿಕೆಪಟ್ಟದ್ದರಿಂದ ಅವರನ್ನು ಎದುರುಗೊಳ್ಳಲು ಸೇವ ಕರನ್ನು ಕಳುಹಿಸಿ ಅರಸನು ಅವರಿಗೆ--ನಿಮ್ಮ ಗಡ್ಡಗಳು ಬೆಳೆಯುವ ವರೆಗೂ ಯೆರಿಕೋವಿನಲ್ಲಿ ಇರ್ರಿ; ಆಮೇಲೆ ತಿರಿಗಿ ಬನ್ನಿರಿ ಎಂದು ಹೇಳಿದನು.
- 6ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು.
Cross references
- 2 Samuel 10:4–5 2 ಸಮುವೇಲನು 10:4–5ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು ಅವರ ಅರ್ಧ ಗಡ್ಡವನ್ನು ಬೋಳಿಸಿ ಅವರ ವಸ್ತ್ರಗಳನ್ನು ಮಧ್ಯದಲ್ಲಿ ಕುಂಡಿಯ ವರೆಗೆ ಕತ್ತರಿಸಿ ಅವರನ್ನು ಕಳುಹಿಸಿದನು. ಅವರು ಅದನ್ನು ದಾವೀದ ನಿಗೆ ತಿಳಿಸಿದಾಗ ಆ ಜನರು ಬಹಳ ನಾಚಿಕೆಪಟ್ಟದ್ದ ರಿಂದ ದಾವೀದನು ಕೆಲವರನ್ನು ಅವರಿಗೆದುರಾಗಿ ಕಳು ಹಿಸಿ--ನಿಮ್ಮ ಗಡ್ಡಗಳು ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿ ಕಾದಿದ್ದು ತರುವಾಯ ಬನ್ನಿರಿ ಎಂದು ಹೇಳಿದನು.
- Luke 20:10–11 ಲೂಕನು 20:10–11ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು. ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.
- Isaiah 20:4 ಯೆಶಾಯ 20:4ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
- Leviticus 19:27 ಯಾಜಕಕಾಂಡ 19:27ನಿಮ್ಮ ತಲೆಯ ಮೂಲೆಗಳನ್ನು ದುಂಡಗೆ ಕತ್ತರಿಸಬಾರದು; ಇದಲ್ಲದೆ ನಿಮ್ಮ ಗಡ್ಡದ ಮೂಲೆಯನ್ನು ವಿಕಾರಗೊಳಿಸಬಾರದು.
- 2 Chronicles 36:16 2 ಪೂರ್ವಕಾಲವೃತ್ತಾಂತ 36:16ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- Psalm 109:4–5 ಕೀರ್ತನೆಗಳು 109:4–5ನನ್ನ ಪ್ರೀತಿಗೆ ಬದಲಾಗಿ ನನ್ನನ್ನು ಎದುರಿಸುತ್ತಾರೆ; ಆದರೆ ನಾನು ಪ್ರಾರ್ಥನೆಯಲ್ಲಿಯೇ ಇದ್ದೇನೆ. ನನ್ನ ಮೇಲಿಗೆ ಬದಲಾಗಿ ಕೇಡನ್ನೂ ಪ್ರೀತಿಗೆ ಬದಲಾಗಿ ಹಗೆಯನ್ನೂ ನನಗೆ ವಿರೋಧ ವಾಗಿ ಮಾಡಿದ್ದಾರೆ.
- Jeremiah 48:37 ಯೆರೆಮೀಯ 48:37ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು.
- Isaiah 15:2 ಯೆಶಾಯ 15:2ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
- Isaiah 47:2–3 ಯೆಶಾಯ 47:2–3ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ ನದಿಗಳನ್ನು ಹಾದುಹೋಗು. ನಿನ್ನ ಬೆತ್ತಲೆತನವು ಮುಚ್ಚಲ್ಪಡದೇ ಇದ್ದದರಿಂದ ನೀನು ನಾಚಿಕೆಗೆ ಈಡಾಗುವಿ, ನಾನು ನಿನ್ನನ್ನು ಮನುಷ್ಯನಂತೆ ಸಂದಿಸದೆ ನಿನಗೆ ಮುಯ್ಯಿ ತೀರಿಸುವೆನು.
- Jeremiah 41:5 ಯೆರೆಮೀಯ 41:5ಶೆಕೆಮ್ನಿಂದಲೂ ಶಿಲೋವಿನಿಂದಲೂ ಸಮಾರ್ಯ ದಿಂದಲೂ ಎಂಭತ್ತು ಮಂದಿ ಮನುಷ್ಯರು ಗಡ್ಡವನ್ನು ಕ್ಷೌರಮಾಡಿದವರಾಗಿಯೂ ವಸ್ತ್ರಗಳನ್ನು ಹರಕೊಂಡವ ರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಕರ್ತನ ಆಲಯಕ್ಕೆ ತರುವದಕ್ಕೋಸ್ಕರ ಕಾಣಿಕೆಯನ್ನೂ ಧೂಪವನ್ನೂ ಕೈಯಲ್ಲಿ ತಕ್ಕೊಂಡು ಬಂದರು.
- Mark 12:4 ಮಾರ್ಕನು 12:4ತಿರಿಗಿ ಅವನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ಮೇಲೆ ಕಲ್ಲುಗಳನ್ನು ಎಸೆದು ತಲೆಯನ್ನು ಗಾಯಪಡಿಸಿ ಅವಮಾನದಿಂದ ವರ್ತಿಸಿ ಅವನನ್ನು ಕಳುಹಿಸಿಬಿಟ್ಟರು.
- Psalm 35:12 ಕೀರ್ತನೆಗಳು 35:12ನನ್ನ ಪ್ರಾಣವನ್ನು ಕೆಡಿಸುವದಕ್ಕೆ ಮೇಲಿಗೆ ಬದಲಾಗಿ ಕೇಡನ್ನು ನನಗೆ ಮಾಡಿದರು.