1 Chronicles · chapter 19 · verse 8
1 Chronicles 19:8 in Kannada
ದಾವೀದನು ಇದನ್ನು ಕೇಳಿದಾಗ ಅವನು ಯೋವಾ ಬನನ್ನೂ ಸಮಸ್ತ ಪರಾಕ್ರಮಶಾಲಿಗಳ ಸೈನ್ಯವನ್ನೂ ಕಳುಹಿಸಿದನು.
Daaveedanu idannu kelidaaga avanu yovaa banannoo samasta paraakramashaaligala sainyavannoo kaluhisidanu.
1 Chronicles 19:8 in English
- King James Version (KJV)
- And when David heard [of it], he sent Joab, and all the host of the mighty men.
- World English Bible (WEB)
- When David heard of it, he sent Joab with all the army of the mighty men.
- American Standard Version (ASV)
- And when David heard of it, he sent Joab, and all the host of the mighty men.
- Bible in Basic English (BBE)
- And David, hearing of it, sent Joab with all the army of fighting-men.
- Darby Translation (DBY)
- And David heard [of it], and he sent Joab, and all the host, the mighty men.
- Webster's Bible (WBS)
- And when David heard [of it] , he sent Joab, and all the host of the mighty men.
- Young's Literal Translation (YLT)
- And David heareth, and sendeth Joab, and all the host of the mighty men,
Read in context
- 6ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು.
- 7ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ ಮಾಕದ ಅರಸನನ್ನೂ ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋ ನಿಯರು ತಮ್ಮ ಪಟ್ಟಣಗಳಿಂದ ಕೂಡಿಕೊಂಡು ಯುದ್ಥಕ್ಕೆ ಬಂದರು.
- 8ದಾವೀದನು ಇದನ್ನು ಕೇಳಿದಾಗ ಅವನು ಯೋವಾ ಬನನ್ನೂ ಸಮಸ್ತ ಪರಾಕ್ರಮಶಾಲಿಗಳ ಸೈನ್ಯವನ್ನೂ ಕಳುಹಿಸಿದನು.
- 9ಆಗ ಅಮ್ಮೋನಿಯರು ಹೊರಟು ಪಟ್ಟಣದ ಬಾಗಿಲ ದ್ವಾರದ ಹತ್ತಿರ ವ್ಯೂಹಕಟ್ಟಿದರು. ಆದರೆ ಬಂದ ಅರಸುಗಳು ಬೇರೆಯಾಗಿ ಹೊಲದಲ್ಲಿ ನಿಂತಿದ್ದರು.
- 10ಯುದ್ಧವು ತನಗೆ ವಿರೋಧವಾಗಿ ಹಿಂದೆಯೂ ಮುಂದೆಯೂ ಇರುವದನ್ನು ಯೋವಾ ಬನು ಕಂಡಾಗ ಅವನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಸಮಸ್ತರೊಳಗೆ ಜನರನ್ನು ಆದುಕೊಂಡು ಅವರನ್ನು ಅರಾಮ್ಯರಿಗೆದುರಾಗಿ ವ್ಯೂಹ ಕಟ್ಟಿದನು.
Cross references
- 2 Samuel 23:8–39 2 ಸಮುವೇಲನು 23:8–39ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು. ಇವನ ತರುವಾಯ ಅಹೋಹ್ಯನಾ ಗಿರುವ ದೋದೋನ ಮಗನಾಗಿರುವ ಎಲ್ಲಾಜಾರನು. ಇವನು ಇಸ್ರಾಯೇಲ್ ಜನರು ಓಡಿಹೋದ ತರುವಾಯ ಯುದ್ಧಕ್ಕೆ ಕೂಡಿ ಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. ಇವನು ಎದ್ದು ತನ್ನ ಕೈ ದಣಿದು ಕತ್ತಿಗೆ ಹತ್ತಿಕೊಳ್ಳುವ ವರೆಗೂ ಫಿಲಿಷ್ಟಿಯರನ್ನು ಹೊಡೆದುಬಿಟ್ಟನು. ಆ ದಿನ ಕರ್ತನು ದೊಡ್ಡ ರಕ್ಷಣೆಯನ್ನುಂಟು ಮಾಡಿದನು. ಜನರು ಸುಲು ಕೊಳ್ಳುವದಕ್ಕೆ ಮಾತ್ರ ಅವನ ಹಿಂದೆ ಹಿಂತಿರುಗಿದರು. ಇವನ ತರುವಾಯ ಹರಾರ್ಯನಾಗಿರುವ ಆಗೇಯನ ಮಗನಾದ ಶಮ್ಮ. ಅಲಸಂದಿಯಿಂದ ತುಂಬಿದ ಹೊಲ ದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿ ಬಂದಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು. ಆದರೆ ಅವನು ಆ ಹೊಲದಲ್ಲಿ ನಿಂತುಕೊಂಡು ಅದನ್ನು ಕಾಪಾಡಿ ಫಿಲಿಷ್ಟಿಯರನ್ನು ಕೊಂದುಬಿಟ್ಟನು. ಹೀಗೆ ಕರ್ತನು ದೊಡ್ಡರಕ್ಷಣೆಯನ್ನುಂಟು ಮಾಡಿದನು. ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು. ದಾವೀದನು ಗಡಿ ಸ್ಥಳದಲ್ಲಿರುವಾಗ ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವ ವನಾರೆಂದು ಬಹು ಆಶೆಯಿಂದ ಹೇಳಿದನು. ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು. ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು. ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು. ಈ ಮೂರು ಮಂದಿ ಯಲ್ಲಿ ಅವನು ಬಹು ಘನವುಳ್ಳವನಾಗಿದ್ದದ್ದು ಇದ ರಿಂದಲೇ. ಆದದರಿಂದ ಅವನು ಅವರಲ್ಲಿ ಪ್ರಧಾನ ನಾದನು. ಹೇಗಿದ್ದರೂ ಆ ಮೊದಲಿನ ಮೂರು ಜನಕ್ಕೆ ಅವನು ಸಮಾನನಾಗಿರಲಿಲ್ಲ. ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು. ಅವನು ರೂಪವುಳ್ಳ ಒಬ್ಬ ಐಗುಪ್ತದ ಮನುಷ್ಯನನ್ನು ಕೊಂದು ಬಿಟ್ಟನು. ಆ ಐಗುಪ್ತನ ಕೈಯಲ್ಲಿ ಒಂದು ಈಟಿಯು ಇತ್ತು. ಇವನು ಒಂದು ಕೋಲನ್ನು ತಕ್ಕೊಂಡು ಅವನ ಬಳಿಗೆ ಹೋಗಿ ಆ ಈಟಿಯನ್ನು ಐಗುಪ್ತನ ಕೈಯಿಂದ ಕಸಕೊಂಡು ಅವನನ್ನು ಅವನ ಈಟಿಯಿಂದಲೇ ಕೊಂದುಹಾಕಿದನು. ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು. ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು. ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು; ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್, ತೆಕೋವಿಯನಾದ ಇಕ್ಕೇಷನ ಮಗನಾದ ಈರಾ. ಅಣತೋತಿನವನಾದ ಅಬೀ ಯೆಜರ್, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್, ನೆಟೋಫದ ವನಾದ ಮಹರೈ, ನೆಟೋಫದವನಾದ ಬಾಣನ ಮಗ ಹೆಲೇಬ್, ಬೆನ್ಯಾವಿಾನನ ಮಕ್ಕಳ ಗಿಬೆ ಊರಿನವನಾದ ರೀಬೈ ಮಗನಾದ ಇತೈ, ಪಿತೋನ್ಯ ನಾದ ಬೆನಾಯನು, ನಹಲೇ ಗಾಷ್ ಊರಿನವನಾದ ಹಿದೈ ಅರಾಬಾದ ಅಬೀಅಲ್ಬೋನ್, ಬರ್ಹುಮ್ಯನಾದ ಅಜ್ಮಾವೇತನು, ಶಾಲ್ಬೋನ್ಯನಾದ ಎಲೆಯಖ್ಬಾ ಯಾಷೇನನ ಕುಮಾರರಲ್ಲಿ ಒಬ್ಬನಾದ ಯೋನಾತಾ ನನು, ಹರಾರ್ಯನಾದ ಶಮ್ಮನು, ಅರಾರ್ಯನಾದ ಶಾರಾರನ ಮಗನಾದ ಅಹೀಯಾಮ್, ಮಾಕಾತ್ಯರಲ್ಲಿ ಒಬ್ಬನ ಮಗನಾಗಿರುವ ಅಹಸ್ಬೈ ಮಗನಾದ ಎಲೀಫೆ ಲೆಟನು, ಗಿಲೋವಿಯನಾಗಿರುವ ಅಹೀತೋಫೆಲನ ಮಗನಾದ ಎಲೀಯಾಮನು, ಕರ್ಮೇಲ್ಯನಾದ ಹೆಚ್ರೊ, ಅರ್ಬಿಯನಾದ ಪಾರೈ, ಚೋಬದವನಾದ ನಾತಾನ್ ಮಗನಾಗಿರುವ ಇಗಾಲ್, ಗಾದ್ಯನಾದ ಬಾನಿ, ಅಮ್ಮೋನ್ಯನಾದ ಚೇಲೆಕ್, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹಿಡಿಯುವ ಬೇರೋತ್ಯನಾದ ನಹರೈ, ಇತ್ರಿಯರಾದ ಈರಾ ಗಾರೇಬನು,ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು. ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು.
- 1 Chronicles 11:6 1 ಪೂರ್ವಕಾಲವೃತ್ತಾಂತ 11:6ಯಾವನಾದರೂ ಮೊದಲು ಯೆಬೂಸಿಯರನ್ನು ಹೊಡೆದರೆ ಅವನೇ ಮುಖ್ಯಸ್ಥ ನಾಗಿಯೂ ಪ್ರಧಾನನಾಗಿಯೂ ಇರುವನೆಂದು ದಾವೀ ದನು ಹೇಳಿದ್ದನು. ಹಾಗೆಯೇ ಚೆರೂಯಳ ಮಗನಾದ ಯೋವಾಬನು ಮೊದಲು ಹೋಗಿ ಮುಖ್ಯಸ್ಥನಾದನು.
- 1 Chronicles 11:10–47 1 ಪೂರ್ವಕಾಲವೃತ್ತಾಂತ 11:10–47ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು. ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು. ಅವನ ತರುವಾಯ ಅಹೋಹ್ಯನಾ ದಂಥ ದೋದೋನ ಮಗನಾದಂಥ ಎಲ್ಲಾಜಾರನು ಮೂರು ಮಂದಿ ಪರಾಕ್ರಮಾಶಾಲಿಗಳಲ್ಲಿ ಒಬ್ಬನಾ ಗಿದ್ದನು. ಇವನು ದಾವೀದನ ಸಂಗಡ ಪಸ್ದವ್ಮೆಾಮಿನ ಬಳಿಯಲ್ಲಿದ್ದನು. ಅಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕೆ ಕೂಡಿಸಲ್ಪಟ್ಟಿರುವಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು. ಆಗ ಇವರು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು ಅದನ್ನು ತಪ್ಪಿಸಿ ಫಿಲಿಷ್ಟಿಯರನ್ನು ಕೊಂದುಹಾಕಿದರು; ಕರ್ತನು ಮಹಾ ಬಿಡುಗಡೆಯಿಂದ ರಕ್ಷಿಸಿದನು. ಇದಲ್ಲದೆ ಮೂವತ್ತು ಮಂದಿ ಅಧಿಪತಿಗಳ ಲ್ಲಿರುವ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿ ಗುಡ್ಡಕ್ಕೆ ಹೋದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಇಳಿದಿತ್ತು. ಆಗ ದಾವೀದನು ಗಡಿಸ್ಥಳದಲ್ಲಿ ಇದ್ದನು; ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು. ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು. ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು. ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು; ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು. ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು. ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು. ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು. ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು, ಹರೋರಿಯನಾದ ಶಮ್ಮೋತನು, ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು, ಹುಷಾತ್ಯನಾದ ಸಿಬ್ಕೈನು, ಅಹೋಹಿತನಾದ ಈಲೈನು, ನೆಟೋಫದ ವನಾದ ಮಹರೈನು, ನೆಟೋಫದವನಾದ ಬಾಣನ ಮಗನಾದ ಹೆಲೇದನು, ಬೆನ್ಯಾವಿಾನನ ಮಕ್ಕಳಿಗೆ ಉಂಟಾದ ಗಿಬ್ಯದ ರೀಬೈನ ಮಗನಾದ ಈತೈಯು, ಪಿರತೋನ್ಯನಾದ ಬೆನಾಯನು, ಗಾಷಿನ ಹಳ್ಳಗಳ ಬಳಿಯಲ್ಲಿರುವ ಹೂರೈನು, ಅರಾಬಾತಗ್ಗಿನವನಾದ ಅಬೀಯೇಲನು, ಬಹರೂಮ್ಯನಾದ ಅಜ್ಮಾವೆತನು, ಶಾಲ್ಬೋನ್ಯನಾದ ಎಲೆಯಖ್ಬ, ಗಿಜೋನ್ಯನಾದ ಹಾಷೇಮನ ಕುಮಾರರು, ಹರಾರಿಯನಾದ ಶಾಗೇಯ ಮಗನಾದ ಯೋನಾತಾನನು, ಹರಾರಿಯನಾದ ಶಾಕಾರನ ಮಗನಾದ ಅಹೀಯಾಮನು, ಊರನ ಮಗನಾದ ಎಲೀಫಲನು, ಮೆಕೆರಾತ್ಯನಾದ ಹೇಫೆ ರನು, ಫೆಲೋನ್ಯನಾದ ಅಹೀಯನು, ಕರ್ಮೆಲ್ಯ ನಾದ ಹೆಚ್ರೋನು, ಎಜ್ಬೈಯನ ಮಗನಾದ ನಾರೈಯು, ನಾತಾನನ ಸಹೋದರನಾದ ಯೋವೇಲನು ಹಗ್ರಿ ಯನ ಮಗನಾದ ಮಿಬ್ಹಾರನು, ಅಮ್ಮೋನ್ಯನಾದ ಚೆಲೆಕನು, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹೊತ್ತುಕೊಂಡು ಹೋಗುವವನಾಗಿ ರುವ ಬೆರೋತ್ಯನಾದ ನಹರೈಯು, ಇತ್ರೀಯನಾದ ಈರನು ಗಾರೇಬನು, ಹಿತ್ತೀಯನಾದ ಊರೀಯನು, ಅಹ್ಲೈಯ ಮಗನಾದ ಜಾಬಾದನು, ರೂಬೇನ್ಯ ನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು. ಮಾಕನ ಮಗ ನಾದ ಹಾನಾನನು, ಮೆತೆನನಾದ ಯೋಷಾಫಾಟನು, ಅಷ್ಟೆರಾತ್ಯನಾದ ಉಜ್ಜೀಯನು ಅರೋಯೇರಿವ ನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಗೀಯೇಲನೂ; ಶಿಮ್ರಿಯ ಮಗನಾದ ಎದೀಗ ಯೇಲನು, ಅವನ ಸಹೋದರನಾದಂಥ ತೀಚೀಯ ನಾದಂಥ ಯೋಹನು. ಮಹವೀಯನಾದ ಎಲೀ ಯೇಲನು, ಎಲ್ನಾಮನ ಮಕ್ಕಳಾದ ಯೇರಿಬೈಯನೂ ಯೋಷವ್ಯನೂ;ಮೋವಾಬ್ಯನಾದ ಇತ್ಮನು, ಎಲೀ ಯೇಲನು, ಓಬೆದನು, ಮೆಚಬಾಯದವ ನಾದ ಯಾಸಿಯೇಲನು. ಮೋವಾಬ್ಯನಾದ ಇತ್ಮನು, ಎಲೀ ಯೇಲನು, ಓಬೆದನು, ಮೆಚಬಾಯದವ ನಾದ ಯಾಸಿಯೇಲನು.