2 Chronicles · chapter 20 · verse 32
2 Chronicles 20:32 in Kannada
ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು.
Avanu tanna tandeyaada aasana maarga dalli nadedu adannu bittubidade kartana sammukha dalli sariyaadaddannu maadidanu.
2 Chronicles 20:32 in English
- King James Version (KJV)
- And he walked in the way of Asa his father, and departed not from it, doing [that which was] right in the sight of the LORD.
- World English Bible (WEB)
- He walked in the way of Asa his father, and didn’t turn away from it, doing that which was right in the LORD’s eyes.
- American Standard Version (ASV)
- And he walked in the way of Asa his father, and turned not aside from it, doing that which was right in the eyes of Jehovah.
- Bible in Basic English (BBE)
- He went in the ways of his father Asa, not turning away, but doing right in the eyes of the Lord.
- Darby Translation (DBY)
- And he walked in the way of Asa his father, and turned not aside from it, doing what was right in the sight of Jehovah.
- Webster's Bible (WBS)
- And he walked in the way of Asa his father, and departed not from it, doing [that which was] right in the sight of the LORD.
- Young's Literal Translation (YLT)
- And he walketh in the way of his father Asa, and hath not turned aside from it, to do that which is right in the eyes of Jehovah.
Read in context
- 30ಆದದರಿಂದ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು; ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿ ಕೊಟ್ಟನು.
- 31ಹೀಗೆ ಯೆಹೋಷಾಫಾಟನು ಯೆಹೂದದ ಮೇಲೆ ಆಳಿದನು. ಅವನು ಆಳಲು ಆರಂಭಿಸಿದಾಗ ಮೂವತ್ತೈದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಆಕೆಯು ಶಿಲ್ಹಿಯ ಮಗಳಾ ಗಿದ್ದಳು.
- 32ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು.
- 33ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;
- 34ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
Cross references
- Psalm 18:21 ಕೀರ್ತನೆಗಳು 18:21ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
- 2 Chronicles 16:7–12 2 ಪೂರ್ವಕಾಲವೃತ್ತಾಂತ 16:7–12ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು. ಕೂಷಿಯರೂ ಲೂಬ್ಯರೂ ಮಹಾಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ ರಾಹುತರೂ ಇದ್ದರಲ್ಲವೇ? ಆಗ ನೀನು ಕರ್ತನ ಮೇಲೆ ಆತುಕೊಂಡದ್ದರಿಂದ ಆತನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದನು. ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು. ಆಗ ಆಸನು ಪ್ರವಾದಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಮಾತು ಗಳ ನಿಮಿತ್ತ ಅವನ ಮೆಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವ ರನ್ನು ಬಾಧಿಸಿದನು. ಇಗೋ, ಆಸನ ಕಾರ್ಯಗಳು ಮೊದಲನೆಯವುಗಳೂ ಕಡೆಯವುಗಳೂ ಯೆಹೂ ದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿವೆ. ಆಸನು ತನ್ನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ತನ್ನ ಕಾಲುಗಳಲ್ಲಿ ರೋಗವುಳ್ಳವನಾ ಗಿದ್ದನು. ಅವನ ರೋಗವು ಅತಿಘೋರವಾಯಿತು. ಅವನು ತನ್ನ ರೋಗದಲ್ಲಿ ಕರ್ತನನ್ನು ಹುಡುಕದೆ ವೈದ್ಯರನ್ನು ಹುಡುಕಿದನು.
- 2 Chronicles 14:11–13 2 ಪೂರ್ವಕಾಲವೃತ್ತಾಂತ 14:11–13ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು. ಆಗ ಕರ್ತನು ಕೂಷಿಯರನ್ನು ಆಸನ ಮುಂದೆಯೂ ಯೆಹೂ ದದವರ ಮುಂದೆಯೂ ಹೊಡೆದನು. ಆದದರಿಂದ ಕೂಷಿಯರು ಓಡಿಹೋದರು. ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು.
- 2 Chronicles 14:2–5 2 ಪೂರ್ವಕಾಲವೃತ್ತಾಂತ 14:2–5ಆಸನು ತನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡಿದನು. ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ, ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು. ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು.
- 1 Kings 15:11 1 ಅರಸುಗಳು 15:11ಆಸನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನ ಸಮ್ಮುಖದಲ್ಲಿ ಮೆಚ್ಚಿಗೆಯಾದದ್ದನ್ನು ಮಾಡಿದನು.
- 2 Chronicles 17:3–6 2 ಪೂರ್ವಕಾಲವೃತ್ತಾಂತ 17:3–6ಯೆಹೋಷಾಫಾಟನು ಬಾಳೀಮ್ ನನ್ನು ಹುಡುಕದೆ ತನ್ನ ತಂದೆಯಾದ ದಾವೀದನ ಮೊದಲಿನ ಮಾರ್ಗಗಳಲ್ಲಿ ನಡೆದದ್ದರಿಂದ ಕರ್ತನು ಅವನ ಸಂಗಡ ಇದ್ದನು. ತನ್ನ ತಂದೆಯ ದೇವರನ್ನು ಹುಡುಕಿ ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ ಆತನ ಆಜ್ಞೆಗಳಲ್ಲಿ ನಡೆದನು. ಆದದರಿಂದ ಕರ್ತನು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದನು. ಯೆಹೂದ ವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟ ದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ಅಧಿಕ ವಾಗಿ ದೊರಕಿತು. ಅವನ ಹೃದಯವು ಕರ್ತನ ಮಾರ್ಗಗಳಲ್ಲಿ ಎತ್ತಲ್ಪಟ್ಟಿತು. ಇದಲ್ಲದೆ ಅವನು ಯೆಹೂ ದದಲ್ಲಿದ್ದ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ತೆಗೆದು ಹಾಕಿದನು.
- Psalm 36:3 ಕೀರ್ತನೆಗಳು 36:3ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.