Luke · chapter 24 · verse 50
Luke 24:50 in Kannada
ಆತನು ಅವರನ್ನು ಬೇಥಾನ್ಯದವರೆಗೆ ನಡಿಸಿ ಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು.
Aatanu avarannu bethaanyadavarege nadisi kondu hogi tanna kaigalannu etti avarannu aasheervadisidanu.
Luke 24:50 in English
- King James Version (KJV)
- And he led them out as far as to Bethany, and he lifted up his hands, and blessed them.
- World English Bible (WEB)
- He led them out as far as Bethany, and he lifted up his hands and blessed them.
- American Standard Version (ASV)
- And he led them out until [they were] over against Bethany: and he lifted up his hands, and blessed them.
- Bible in Basic English (BBE)
- And he took them out till they were near Bethany, and lifting up his hands, he gave them a blessing.
- Darby Translation (DBY)
- And he led them out as far as Bethany, and having lifted up his hands, he blessed them.
- Webster's Bible (WBS)
- And he led them out as far as to Bethany: and he lifted up his hands, and blessed them.
- Young's Literal Translation (YLT)
- And he led them forth without — unto Bethany, and having lifted up his hands he did bless them,
Read in context
- 48ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾ ಗಿದ್ದೀರಿ.
- 49ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮ್ಮ ಮೇಲೆ ಕಳುಹಿಸುವೆನು; ಆದರೆ ನೀವು ಮೇಲಣ ಶಕ್ತಿಯನ್ನು ಹೊಂದುವ ವರೆಗೆ ಯೆರೂಸಲೇಮ್ ಪಟ್ಟಣದಲ್ಲಿಯೇ ಕಾದುಕೊಂಡಿರ್ರಿ ಅಂದನು.
- 50ಆತನು ಅವರನ್ನು ಬೇಥಾನ್ಯದವರೆಗೆ ನಡಿಸಿ ಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು.
- 51ಇದಾದ ಮೇಲೆ ಆತನು ಅವರನ್ನು ಆಶೀರ್ವದಿಸುತ್ತಿರುವಾಗ ಆತನು ಅವರಿಂದ ಪ್ರತ್ಯೇಕಿಸಲ್ಪಟ್ಟು ಮೇಲಕ್ಕೆ ಪರಲೋಕದೊಳಗೆ ಒಯ್ಯ ಲ್ಪಟ್ಟನು.
- 52ಆಗ ಅವರು ಆತನನ್ನು ಆರಾಧಿಸಿ ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿದರು.ಅವರು ಯಾವಾಗಲೂ ದೇವಾಲಯದಲ್ಲಿ ದೇವ ರನ್ನು ಸ್ತುತಿಸುತ್ತಾ ಕೊಂಡಾಡುತ್ತಾ ಇದ್ದರು. ಆಮೆನ್.
Cross references
- Acts 1:12 ಅಪೊಸ್ತಲರ ಕೃತ್ಯಗಳು 1:12ತರುವಾಯ ಅವರು ಯೆರೂಸಲೇಮಿ ನಿಂದ ಸಬ್ಬತ್ ದಿನದ ಪ್ರಯಾಣದಷ್ಟು ದೂರವಿದ್ದ ಎಣ್ಣೇಮರಗಳ ತೋಪು ಎಂದು ಕರೆಯಲ್ಪಟ್ಟ ಗುಡ್ಡ ದಿಂದ ಯೆರೂಸಲೇಮಿಗೆ ಹಿಂದಿರುಗಿದರು.
- Genesis 49:28 ಆದಿಕಾಂಡ 49:28ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
- Numbers 6:23–27 ಅರಣ್ಯಕಾಂಡ 6:23–27ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು. ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು. ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
- Mark 11:1 ಮಾರ್ಕನು 11:1ಅವರು ಯೆರೂಸಲೇಮಿಗೆ ಸವಿಾಪವಾಗಿ ಎಣ್ಣೀಮರಗಳ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--
- Matthew 21:17 ಮತ್ತಾಯನು 21:17ಆತನು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ ಅಲ್ಲಿ ಇಳುಕೊಂಡನು.
- Mark 10:16 ಮಾರ್ಕನು 10:16ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
- Genesis 48:9 ಆದಿಕಾಂಡ 48:9ಅದಕ್ಕೆ ಯೋಸೇಫನು ತನ್ನ ತಂದೆಗೆ--ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಕುಮಾರರು ಅಂದನು. ಆಗ ಅವನು ಅವರನ್ನು ನನ್ನ ಬಳಿಗೆ ಕರಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ ಅಂದನು.
- Genesis 14:18–20 ಆದಿಕಾಂಡ 14:18–20ಸಾಲೇಮಿನ ಅರಸನಾದ ಮೆಲ್ಕೀಚೆದೇಕನು ರೊಟ್ಟಿಯನ್ನೂ ದ್ರಾಕ್ಷಾ ರಸವನ್ನೂ ತಂದನು. ಇವನು ಮಹೋನ್ನತನಾದ ದೇವರ ಯಾಜಕನು. ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ. ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
- Hebrews 7:5–7 ಇಬ್ರಿಯರಿಗೆ 7:5–7ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು. ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು. ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
- Genesis 27:4 ಆದಿಕಾಂಡ 27:4ನಾನು ಪ್ರೀತಿಮಾಡುವ ರುಚಿಯಾದ ಊಟವನ್ನೂ ಸಿದ್ಧ ಮಾಡಿ ತಕ್ಕೊಂಡು ಬಾ. ಆಗ ನಾನು ಸಾಯುವದಕ್ಕಿಂತ ಮುಂಚೆ ನನ್ನ ಪ್ರಾಣವು ನಿನ್ನನ್ನು ಆಶೀರ್ವದಿಸುವ ಹಾಗೆ ಅದನ್ನು ಊಟಮಾಡುವೆನು ಅಂದನು.