Leviticus · chapter 25 · verse 18
Leviticus 25:18 in Kannada
ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
Heege neevu nanna niyama nirnayagalannu kaikondu avugalannu maadabeku; aaga neevu deshadalli surakshitaraagi vaasisuviri.
Leviticus 25:18 in English
- King James Version (KJV)
- Wherefore ye shall do my statutes, and keep my judgments, and do them; and ye shall dwell in the land in safety.
- World English Bible (WEB)
- “‘Therefore you shall do my statutes, and keep my ordinances and do them; and you shall dwell in the land in safety.
- American Standard Version (ASV)
- Wherefore ye shall do my statutes, and keep mine ordinances and do them; and ye shall dwell in the land in safety.
- Bible in Basic English (BBE)
- So keep my rules and my decisions and do them, and you will be safe in your land.
- Darby Translation (DBY)
- And ye shall do my statutes, and observe mine ordinances and do them: thus shall ye dwell in your land securely.
- Webster's Bible (WBS)
- Wherefore ye shall do my statutes, and keep my judgments, and do them; and ye shall dwell in the land in safety.
- Young's Literal Translation (YLT)
- 'And ye have done My statutes, and My judgments ye keep, and have done them, and ye have dwelt on the land confidently,
Read in context
- 16ವರುಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನು ಹೆಚ್ಚಿಸಬೇಕು; ವರುಷಗಳು ಕಡಿಮೆಯಿರುವಂತೆಯೇ ಫಲದ ಬೆಲೆ ಯನ್ನು ಕಡಿಮೆಮಾಡಬೇಕು. ಫಲದ ವರುಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟ ಮಾಡಬೇಕು.
- 17ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
- 18ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
- 19ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
- 20ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
Cross references
- Deuteronomy 12:10 ಧರ್ಮೋಪದೇಶಕಾಂಡ 12:10ಆದರೆ ನೀವು ಯೊರ್ದನನ್ನು ದಾಟಿದ ಮೇಲೆ ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ ಆತನು ಸುತ್ತಲಿ ರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ ನಿಮಗೆ ವಿಶ್ರಾಂತಿ ಕೊಟ್ಟ ಮೇಲೆ
- Proverbs 1:33 ಜ್ಞಾನೋಕ್ತಿಗಳು 1:33ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು.
- Jeremiah 23:6 ಯೆರೆಮೀಯ 23:6ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ.
- Leviticus 26:3–12 ಯಾಜಕಕಾಂಡ 26:3–12ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳಂತೆ ಮಾಡಿದರೆ ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು. ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ. ನಾನು ದೇಶದಲ್ಲಿ ಸಮಾಧಾನವನ್ನು ಕೊಡುವೆನು. ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ; ದೇಶದಲ್ಲಿ ದುಷ್ಟ ಮೃಗಗಳು ಇಲ್ಲದಂತೆ ಮಾಡುವೆನು. ಇಲ್ಲವೆ ಕತ್ತಿ ನಿಮ್ಮ ದೇಶದಲ್ಲಿ ಹಾದುಹೋಗುವದಿಲ್ಲ. ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು. ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ನಿಮ್ಮ ಮುಂದೆ ಕತ್ತಿಯಿಂದ ಬೀಳುವರು. ನಾನು ನಿಮ್ಮನ್ನು ಲಕ್ಷಿಸಿ ಅಭಿವೃದ್ಧಿಮಾಡಿ ಹೆಚ್ಚಿಸಿ ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ. ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು. ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ.
- Psalm 4:8 ಕೀರ್ತನೆಗಳು 4:8ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ.
- Ezekiel 34:25–28 ಯೆಹೆಜ್ಕೇಲನು 34:25–28ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು. ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು; ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು; ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
- Deuteronomy 28:1–14 ಧರ್ಮೋಪದೇಶಕಾಂಡ 28:1–14ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು. ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳಿದರೆ ಈ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ. ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು. ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು. ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು. ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು; ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು. ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ. ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ. ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು.
- Ezekiel 33:24–26 ಯೆಹೆಜ್ಕೇಲನು 33:24–26ಮನುಷ್ಯಪುತ್ರನೇ, ಇಸ್ರಾಯೇಲಿನ ದೇಶದ ಹಾಳು ಪ್ರದೇಶಗಳಲ್ಲಿ ವಾಸಿಸುವರು-- ಅಬ್ರಹಾಮನೇ ಒಬ್ಬನಾಗಿದ್ದು ದೇಶವನ್ನು ಸ್ವತಂತ್ರಿಸಿ ಕೊಂಡನು, ಆದರೆ ನಾವು ಬಹಳ ಜನರಾಗಿದ್ದು ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳುತ್ತಾರೆ. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುವರ ಲ್ಲವೇ? ನಿಮ್ಮ ಕಣ್ಣುಗಳು ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವ ನೀವು ದೇಶವನ್ನು ಸ್ವಾಧೀನಪಡಿಸಿ ಕೊಳ್ಳುವಿರೋ? ನೀವು ನಿಮ್ಮ ಕತ್ತಿಯ ಮೇಲೆ ನಿಂತು ಅಸಹ್ಯವಾದ ಕೆಲಸಗಳನ್ನು ಮಾಡುವಿರಿ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ನೆರೆಯವನ ಹೆಂಡತಿಯನ್ನು ಕೆಡಿಸುತ್ತಾನೆ; ಹೀಗಾದರೆ ನೀವು ದೇಶವನ್ನು ಸ್ವತಂತ್ರಿಸಿ ಕೊಳ್ಳಬಹುದೋ?
- Leviticus 19:37 ಯಾಜಕಕಾಂಡ 19:37ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.
- Jeremiah 7:3–7 ಯೆರೆಮೀಯ 7:3–7ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಿಮ್ಮ ಮಾರ್ಗಗಳನ್ನೂ ನಿಮ್ಮ ಕ್ರಿಯೆಗಳನ್ನೂ ನೆಟ್ಟಗೆ ಮಾಡಿರಿ; ಆಗ ನಿಮ್ಮನ್ನು ಈ ಸ್ಥಳದಲ್ಲಿ ವಾಸಿಸುವಂತೆ ಮಾಡುವೆನು. ಇವುಗಳೇ ಕರ್ತನ ಆಲಯ, ಕರ್ತನ ಆಲಯ, ಕರ್ತನ ಆಲಯ ಎಂದು ಹೇಳುವ ಸುಳ್ಳು ಮಾತುಗಳಲ್ಲಿ ನಂಬಿಕೆ ಇಡಬೇಡಿರಿ. ನೀವು ನಿಮ್ಮ ಮಾರ್ಗಗಳನ್ನೂ ನಿಮ್ಮ ಕ್ರಿಯೆಗಳನ್ನೂ ಪೂರ್ಣವಾಗಿ ನೆಟ್ಟಗೆ ಮಾಡಿ ಮನುಷ್ಯನಿಗೂ ಅವನ ನೆರೆಯವನಿಗೂ ಪೂರ್ಣವಾಗಿ ನ್ಯಾಯನಡಿಸಿ ಪರದೇಶಿಯನ್ನೂ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಸಂಕಟಪಡಿಸದೆ ಈ ಸ್ಥಳದಲ್ಲಿ ಅಪರಾಧ ವಿಲ್ಲದ ರಕ್ತವನ್ನು ಚೆಲ್ಲದಿದ್ದರೆ ಇಲ್ಲವೆ ನಿಮ್ಮ ಕೇಡಿಗಾಗಿ ಬೇರೆ ದೇವರುಗಳನ್ನು ಹಿಂಬಾಲಿಸದಿದ್ದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ಅಂದರೆ ನಾನು ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಂತೆ ಮಾಡುವೆನು.
- Jeremiah 33:16 ಯೆರೆಮೀಯ 33:16ಆ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡುವದು; ಯೆರೂಸಲೇಮು ಭದ್ರವಾಗಿ ವಾಸಿಸುವದು; ಆಕೆಯು (ಯೆರೂಸ ಲೇಮು) ಕರೆಯಲ್ಪಡುವ ಹೆಸರು ಇದೇ--ನಮ್ಮ ನೀತಿ ಯಾಗಿರುವ ಕರ್ತನು.
- Ezekiel 36:24–28 ಯೆಹೆಜ್ಕೇಲನು 36:24–28ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು. ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ. ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿ ಸುವಿರಿ; ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು.