Luke · chapter 18 · verse 8
Luke 18:8 in Kannada
ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.
Aatanu begane avarige nyaaya teerisuvanendu naanu nimage heluttene. Aadaagyoo manushyakumaaranu bandaaga bhoomiya mele nambikeyannu kaanuvano andanu.
Luke 18:8 in English
- King James Version (KJV)
- I tell you that he will avenge them speedily. Nevertheless when the Son of man cometh, shall he find faith on the earth?
- World English Bible (WEB)
- I tell you that he will avenge them quickly. Nevertheless, when the Son of Man comes, will he find faith on the earth?”
- American Standard Version (ASV)
- I say unto you, that he will avenge them speedily. Nevertheless, when the Son of man cometh, shall he find faith on the earth?
- Bible in Basic English (BBE)
- I say to you that he will quickly do right in their cause. But when the Son of man comes, will there be any faith on earth?
- Darby Translation (DBY)
- I say unto you that he will avenge them speedily. But when the Son of man comes, shall he indeed find faith on the earth?
- Webster's Bible (WBS)
- I tell you that he will avenge them speedily. Nevertheless, when the Son of man cometh, will he find faith on the earth?
- Young's Literal Translation (YLT)
- I say to you, that He will execute the justice to them quickly; but the Son of Man having come, shall he find the faith upon the earth?'
Read in context
- 6ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ.
- 7ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?
- 8ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.
- 9ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.
- 10ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು.
Cross references
- Hebrews 10:23–26 ಇಬ್ರಿಯರಿಗೆ 10:23–26ನಮ್ಮ ನಂಬಿಕೆಯಿಂದಾದ ಅರಿಕೆಯನ್ನು ನಿಶ್ಚಂಚಲ ದಿಂದ ಬಲವಾಗಿ ಹಿಡಿಯೋಣ. (ಯಾಕಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು). ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವದ ಕ್ಕಾಗಿಯೂ ಸತ್ಕಾರ್ಯ ಮಾಡುವದಕ್ಕಾಗಿಯೂ ಒಬ್ಬರ ನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿ ಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿ ಸೋಣ. ಆ ದಿನವು ಸವಿಾಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ.
- 2 Peter 3:8–9 2 ಪೇತ್ರನು 3:8–9ಆದರೆ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ತಿಳಿಯದವರಾಗಿರಬೇಡಿರಿ. ಕರ್ತನು ತನ್ನ ವಾಗ್ದಾನದ ವಿಷಯವಾಗಿ ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ ಆತನು ತಡಮಾಡುವಾತನಲ್ಲ. ಆದರೆ ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಮ್ಮ ಕಡೆಗೆ ದೀರ್ಘಶಾಂತಿ ಯುಳ್ಳವ
- Matthew 24:9–13 ಮತ್ತಾಯನು 24:9–13ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು. ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು. ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು. ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು. ಆದರೆ ಕಡೇವರೆಗೆ ತಾಳುವವನೇ ರಕ್ಷಿಸಲ್ಪಡುವನು.
- Psalm 46:5 ಕೀರ್ತನೆಗಳು 46:5ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು.
- Luke 17:26–30 ಲೂಕನು 17:26–30ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು. ಮನುಷ್ಯಕುಮಾರನು ಪ್ರತ್ಯಕ್ಷನಾಗುವ ದಿನದಲ್ಲಿ ಹೀಗೆಯೇ ಇರುವದು.
- 2 Peter 2:3 2 ಪೇತ್ರನು 2:3ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
- Psalm 143:7–9 ಕೀರ್ತನೆಗಳು 143:7–9ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ. ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ.
- 1 Thessalonians 5:1–3 1 ಥೆಸಲೊನೀಕದವರಿಗೆ 5:1–3ಸಹೋದರರೇ, ಈ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯು ವದು ಅವಶ್ಯವಿಲ್ಲ. ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- Matthew 24:24 ಮತ್ತಾಯನು 24:24ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು.
- James 5:1–8 ಯಾಕೋಬನು 5:1–8ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ ನಿಮ್ಮ ಐಶ್ವರ್ಯವು ನಾಶವಾಗಿದೆ, ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದವೆ; ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದು ಬಿಡುವದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿ ದ್ದೀರಿ. ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ. ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ. ನೀತಿವಂತನಿಗೆ ದಂಡನೆಯನ್ನು ವಿಧಿಸಿ ಕೊಂದು ಹಾಕಿ ದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ. ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರ್ರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಯಾಕಂದರೆ ಕರ್ತನ ಪ್ರತ್ಯ ಕ್ಷತೆಯು ಹತ್ತಿರವಾಯಿತು.