Genesis · chapter 48 · verse 9
Genesis 48:9 in Kannada
ಅದಕ್ಕೆ ಯೋಸೇಫನು ತನ್ನ ತಂದೆಗೆ--ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಕುಮಾರರು ಅಂದನು. ಆಗ ಅವನು ಅವರನ್ನು ನನ್ನ ಬಳಿಗೆ ಕರಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ ಅಂದನು.
Adakke yosephanu tanna tandege--devaru ee sthaladalli nanage kotta nanna kumaararu andanu. Aaga avanu avarannu nanna balige karakondu baa. Naanu avarannu aasheervadisuttene andanu.
Genesis 48:9 in English
- King James Version (KJV)
- And Joseph said unto his father, They [are] my sons, whom God hath given me in this [place]. And he said, Bring them, I pray thee, unto me, and I will bless them.
- World English Bible (WEB)
- Joseph said to his father, “They are my sons, whom God has given me here.” He said, “Please bring them to me, and I will bless them.”
- American Standard Version (ASV)
- And Joseph said unto his father, They are my sons, whom God hath given me here. And he said, Bring them, I pray thee, unto me, and I will bless them.
- Bible in Basic English (BBE)
- And Joseph said to his father, They are my sons, whom God has given me in this land. And he said, Let them come near me, and I will give them a blessing.
- Darby Translation (DBY)
- And Joseph said to his father, They are my sons, whom God has given me here. And he said, Bring them, I pray thee, to me, that I may bless them.
- Webster's Bible (WBS)
- And Joseph said to his father, They [are] my sons, whom God hath given me in this [place]. And he said, Bring them, I pray thee, to me, and I will bless them.
- Young's Literal Translation (YLT)
- and Joseph saith unto his father, 'They [are] my sons, whom God hath given to me in this [place];' and he saith, 'Bring them, I pray thee, unto me, and I bless them.'
Read in context
- 7ನಾನು ಪದ್ದನ್ ಅರಾಮಿನಿಂದ ಬಂದಾಗ ಕಾನಾನ್ದೇಶದಲ್ಲಿ ಎಫ್ರಾ ತಿಗೆ ಸ್ವಲ್ಪ ದೂರದಲ್ಲಿರುವಾಗ ರಾಹೇಲಳು ನನ್ನ ಬಳಿಯಲ್ಲಿ ಸತ್ತಳು. ಅಲ್ಲಿ ಅಂದರೆ ಬೇತ್ಲೆಹೇಮೆಂಬ ಎಫ್ರಾತಿನ ಮಾರ್ಗದಲ್ಲಿ ಆಕೆಯನ್ನು ಹೂಣಿಟ್ಟೆನು ಅಂದನು.
- 8ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ--ಇವರು ಯಾರು ಅಂದನು.
- 9ಅದಕ್ಕೆ ಯೋಸೇಫನು ತನ್ನ ತಂದೆಗೆ--ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಕುಮಾರರು ಅಂದನು. ಆಗ ಅವನು ಅವರನ್ನು ನನ್ನ ಬಳಿಗೆ ಕರಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ ಅಂದನು.
- 10ಆದರೆ ಇಸ್ರಾಯೇಲನು ಮುದುಕನಾಗಿದ್ದದರಿಂದ ಅವನ ಕಣ್ಣುಗಳು ಕಾಣದಷ್ಟು ಮೊಬ್ಬಾಗಿದ್ದವು. ಆಗ ಅವನು ಅವರನ್ನು ಯಾಕೋಬನ ಸವಿಾಪಕ್ಕೆ ತಂದಾಗ ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
- 11ಇಸ್ರಾಯೇಲನು ಯೋಸೇಫನಿಗೆ--ನಿನ್ನ ಮುಖ ವನ್ನು ನೋಡುವೆನೆಂದು ನಾನು ನೆನಸಲಿಲ್ಲ. ಆದರೆ ಇಗೋ, ನಿನ್ನ ಸಂತಾನವನ್ನು ಸಹ ದೇವರು ನನಗೆ ನೋಡಮಾಡಿದ್ದಾನೆ ಅಂದನು.
Cross references
- Genesis 27:4 ಆದಿಕಾಂಡ 27:4ನಾನು ಪ್ರೀತಿಮಾಡುವ ರುಚಿಯಾದ ಊಟವನ್ನೂ ಸಿದ್ಧ ಮಾಡಿ ತಕ್ಕೊಂಡು ಬಾ. ಆಗ ನಾನು ಸಾಯುವದಕ್ಕಿಂತ ಮುಂಚೆ ನನ್ನ ಪ್ರಾಣವು ನಿನ್ನನ್ನು ಆಶೀರ್ವದಿಸುವ ಹಾಗೆ ಅದನ್ನು ಊಟಮಾಡುವೆನು ಅಂದನು.
- Genesis 33:5 ಆದಿಕಾಂಡ 33:5ಆಗ ಏಸಾವನು ತನ್ನ ಕಣ್ಣುಗಳನ್ನೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ನೋಡಿ--ನಿನ್ನ ಜೊತೆ ಯಲ್ಲಿರುವ ಇವರು ಯಾರು ಎಂದು ಕೇಳಿದನು. ಅದಕ್ಕವನು--ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು ಅಂದನು.
- Hebrews 11:21 ಇಬ್ರಿಯರಿಗೆ 11:21ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
- Ruth 4:11–14 ರೂತಳು 4:11–14ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು. ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು. ಬೋವಜನು ರೂತಳನ್ನು ತೆಗೆದುಕೊಂಡನು; ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳನ್ನು ಕೂಡಿದಾಗ ಕರ್ತನು ಅವಳಿಗೆ ಗರ್ಭ ತೆರೆದದ್ದರಿಂದ ಅವಳು ಮಗನನ್ನು ಹೆತ್ತಳು. ಆಗ ಸ್ತ್ರೀಯರು ನೊವೊಮಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನಲ್ಲಿ ಹೆಸರುಗೊಳ್ಳುವ ಸಂಬಂಧಿಕನು ನಿನಗೆ ಒಬ್ಬನಿಲ್ಲದ ಹಾಗೆ ಮಾಡದೆ ಇರುವ ಕರ್ತನು ಆಶೀರ್ವದಿಸಲ್ಪಡಲಿ.
- 1 Samuel 2:20–21 1 ಸಮುವೇಲನು 2:20–21ಆಗ ಏಲಿಯು ಎಲ್ಕಾನನನ್ನೂ ಅವನ ಹೆಂಡತಿ ಯನ್ನೂ ಆಶೀರ್ವದಿಸಿ--ಕರ್ತನಿಗೆ ಸಲ್ಲಿಸಿದ್ದಕ್ಕೋಸ್ಕರ ಕರ್ತನು ಈ ಸ್ತ್ರೀಯಿಂದ ನಿನಗೆ ಸಂತಾನವನ್ನು ದಯ ಪಾಲಿಸಲಿ ಅಂದನು. ಅವರು ತಿರಿಗಿ ತಮ್ಮ ಮನೆಗೆ ಹೋದರು. ಹಾಗೆಯೇ ಕರ್ತನು ಹನ್ನಳನ್ನು ದರ್ಶಿಸಿ ದ್ದರಿಂದ ಅವಳು ಗರ್ಭಧರಿಸಿ ಮೂವರು ಕುಮಾರ ರನ್ನೂ ಇಬ್ಬರು ಕುಮಾರ್ತೆಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುವೇಲನು ಕರ್ತನ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು.
- Genesis 49:28 ಆದಿಕಾಂಡ 49:28ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
- 1 Samuel 1:27 1 ಸಮುವೇಲನು 1:27ನಾನು ಕರ್ತನಿಗೆ ಮಾಡಿದ ವಿಜ್ಞಾಪನೆಯಂತೆ ಆತನು ನನಗೆ ಕೊಟ್ಟನು.ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.
- Genesis 30:2 ಆದಿಕಾಂಡ 30:2ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿ ಕೊಂಡು--ನಿನಗೆ ಗರ್ಭ ಫಲವನ್ನು ಕೊಡದ ದೇವರ ಸ್ಥಾನದಲ್ಲಿ ನಾನಿದ್ದೇನೋ ಅಂದನು.
- Isaiah 56:3–5 ಯೆಶಾಯ 56:3–5ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ. ಕರ್ತನು ತನ್ನ ಸಬ್ಬತ್ತನ್ನು ಕೈಕೊಂಡು ತನಗೆ ಮೆಚ್ಚಿಕೆಯಾದದ್ದನ್ನು ಆದುಕೊಂಡು ತನ್ನ ಒಡಂಬಡಿಕೆಯನ್ನು ಹಿಡಿದು ಕೊಂಡಿರುವ ನಪುಂಸಕರಿಗೆ-- ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.
- Psalm 127:3 ಕೀರ್ತನೆಗಳು 127:3ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
- 1 Chronicles 26:4–5 1 ಪೂರ್ವಕಾಲವೃತ್ತಾಂತ 26:4–5ಇದಲ್ಲದೆ ಒಬೇದೆದೋಮನ ಕುಮಾರರು-- ಚೊಚ್ಚಲ ಮಗನು ಶೆಮಾಯನು, ಎರಡನೆಯವನು ಯೆಹೋಜಾಬಾದನು, ಮೂರನೆಯವನು ಯೋವಾ ಹನು, ನಾಲ್ಕನೆಯವನು ಸಾಕಾರನು, ಐದನೆಯವನು ನೆತನೇಲನು ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು.
- Genesis 27:34–40 ಆದಿಕಾಂಡ 27:34–40ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ ಅವನು ಅತಿ ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ--ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು ಅಂದನು. ಅವನು --ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತಕ್ಕೊಂಡಿದ್ದಾನೆ ಅಂದನು. ಅದಕ್ಕೆ ಅವನು--ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ. ಈ ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ; ಅವನು ನನ್ನ ಚೊಚ್ಚಲತನ ವನ್ನು ತಕ್ಕೊಂಡಿದ್ದಾನೆ; ಇಗೋ, ಈಗ ನನ್ನ ಆಶೀರ್ವಾದವನ್ನೂ ತಕ್ಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸ ಲಿಲ್ಲವೋ ಅಂದನು. ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು. ಏಸಾವನು ತನ್ನ ತಂದೆಗೆ--ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಹೌದು, ನನ್ನನ್ನೂ ಆಶೀರ್ವದಿಸು ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು. ಆಗ ಅವನ ತಂದೆಯಾದ ಇಸಾಕನು ಪ್ರತ್ಯುತ್ತರವಾಗಿ ಅವನಿಗೆ--ಇಗೋ, ನಿನ್ನ ನಿವಾಸವು ಭೂಮಿಯಸಾರ ದಿಂದಲೂ ಆಕಾಶದ ಮಂಜಿನಿಂದಲೂ ಇರುವದು. ನಿನ್ನ ಕತ್ತಿಯಿಂದಲೇ ನೀನು ಬದುಕುವಿ, ನಿನ್ನ ಸಹೋದರನನ್ನು ಸೇವಿಸುವಿ; ಆದರೆ ನಿನಗೆ ಪ್ರಭುತ್ವವು ಬಂದಾಗ ಆಗುವದೇನಂದರೆ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದು ಹಾಕುವಿ.