Psalms · chapter 119 · verse 26
Psalm 119:26 in Kannada
ನಾನು ನಿನ್ನ ಮಾರ್ಗಗಳನ್ನು ಸಾರಲು, ನನಗೆ ಉತ್ತರಕೊಟ್ಟೆ; ನಿನ್ನ ನಿಯಮಗಳನ್ನು ನನಗೆ ಕಲಿಸು.
Naanu ninna maargagalannu saaralu, nanage uttarakotte; ninna niyamagalannu nanage kalisu.
Psalm 119:26 in English
- King James Version (KJV)
- I have declared my ways, and thou heardest me: teach me thy statutes.
- World English Bible (WEB)
- I declared my ways, and you answered me. Teach me your statutes.
- American Standard Version (ASV)
- I declared my ways, and thou answeredst me: Teach me thy statutes.
- Bible in Basic English (BBE)
- I put the record of my ways before you, and you gave me an answer: O give me knowledge of your rules.
- Darby Translation (DBY)
- I have declared my ways, and thou hast answered me: teach me thy statutes.
- Webster's Bible (WBS)
- I have declared my ways, and thou heardest me: teach me thy statutes.
- Young's Literal Translation (YLT)
- My ways I have recounted, And Thou answerest me, teach me Thy statutes,
Read in context
- 24ನಿನ್ನ ಸಾಕ್ಷಿಗಳೇ ನನ್ನ ಆನಂದವೂ ಆಲೋಚನಾ ಕರ್ತರೂ ಆಗಿವೆ.
- 25ನನ್ನ ಪ್ರಾಣವು ಧೂಳಿಗೆ ಹತ್ತಿ ಕೊಳ್ಳುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀ ವಿಸು.
- 26ನಾನು ನಿನ್ನ ಮಾರ್ಗಗಳನ್ನು ಸಾರಲು, ನನಗೆ ಉತ್ತರಕೊಟ್ಟೆ; ನಿನ್ನ ನಿಯಮಗಳನ್ನು ನನಗೆ ಕಲಿಸು.
- 27ನಿನ್ನ ಕಟ್ಟಳೆಗಳ ಮಾರ್ಗವನ್ನು ನಾನು ಗ್ರಹಿಸಮಾಡು; ಆಗ ನಿನ್ನ ಅದ್ಭುತಗಳ ವಿಷಯವಾಗಿ ಮಾತನಾಡುವೆನು.
- 28ನನ್ನ ಪ್ರಾಣವು ಭಾರದಿಂದ ಕರಗಿಹೋಗುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಸ್ಥಿರಮಾಡು;
Cross references
- Psalm 86:11 ಕೀರ್ತನೆಗಳು 86:11ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
- Psalm 25:4 ಕೀರ್ತನೆಗಳು 25:4ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.
- Psalm 27:11 ಕೀರ್ತನೆಗಳು 27:11ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
- Psalm 32:5 ಕೀರ್ತನೆಗಳು 32:5ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ.
- Proverbs 28:13 ಜ್ಞಾನೋಕ್ತಿಗಳು 28:13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
- Psalm 25:8–9 ಕೀರ್ತನೆಗಳು 25:8–9ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು. ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
- Psalm 38:18 ಕೀರ್ತನೆಗಳು 38:18ನನ್ನ ಅಕ್ರಮವನ್ನು ತಿಳಿಸುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.
- Psalm 143:8–10 ಕೀರ್ತನೆಗಳು 143:8–10ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ. ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- Psalm 119:12 ಕೀರ್ತನೆಗಳು 119:12ಓ ಕರ್ತನೇ, ನೀನು ಸ್ತುತಿಸಲ್ಪಡು ವಾತನು; ನಿನ್ನ ನಿಯಮಗಳನ್ನು ನನಗೆ ಕಲಿಸು.
- 1 Kings 8:36 1 ಅರಸುಗಳು 8:36ಆಗ ನೀನು ಪರಲೋಕದಿಂದ ಕೇಳಿ ನಿನ್ನ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ ಅವರು ನಡಿಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸುವ ಹಾಗೆ ನಿನ್ನ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡು.
- Psalm 119:106 ಕೀರ್ತನೆಗಳು 119:106ನಿನ್ನ ನೀತಿ ವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣ ಮಾಡಿದ್ದೇನೆ; ಅದನ್ನು ಈಡೇರಿಸುವೆನು.
- Psalm 51:1–19 ಕೀರ್ತನೆಗಳು 51:1–19ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು. ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು. ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ. ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು. ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು. ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು. ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು. ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು. ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು. ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ. ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು. ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು. ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು. ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು. ಯಜ್ಞ ವನ್ನು ನೀನು ಇಷ್ಟಪಡುದಿಲ್ಲ. ಇಲ್ಲವಾದರೆ ನಾನು ಅದನ್ನು ಕೊಡುತ್ತಿದ್ದೆನು. ದಹನಬಲಿಯಲ್ಲಿ ನೀನು ಸಂತೋಷಪಡುವದಿಲ್ಲ. ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ. ನಿನ್ನ ದಿವ್ಯ ಚಿತ್ತದ ಪ್ರಕಾರ ಚೀಯೋನಿಗೆ ಒಳ್ಳೇದು ಮಾಡು; ಯೆರೂಸಲೇಮಿನ ಗೋಡೆಗಳನ್ನು ಕಟ್ಟು.ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು. ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.