Psalms · chapter 36 · verse 6
Psalm 36:6 in Kannada
ನಿನ್ನ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿನ್ನ ನ್ಯಾಯತೀರ್ಪುಗಳು ಮಹಾ ಅಗಾಧವೇ. ಓ ಕರ್ತನೇ, ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
Ninna neetiyu dodda parvatagala haagide; ninna nyaayateerpugalu mahaa agaadhave. O kartane, manushyarannoo mrugagalannoo sanrakshisuttee.
Psalm 36:6 in English
- King James Version (KJV)
- Thy righteousness [is] like the great mountains; thy judgments [are] a great deep: O LORD, thou preservest man and beast.
- World English Bible (WEB)
- Your righteousness is like the mountains of God. Your judgments are like a great deep. LORD, you preserve man and animal.
- American Standard Version (ASV)
- Thy righteousness is like the mountains of God; Thy judgments are a great deep: O Jehovah, thou preservest man and beast.
- Bible in Basic English (BBE)
- Your righteousness is like the mountains of God; your judging is like the great deep; O Lord, you give life to man and beast.
- Darby Translation (DBY)
- Thy righteousness is like the high mountains; thy judgments are a great deep: thou, Jehovah, preservest man and beast.
- Webster's Bible (WBS)
- Thy righteousness [is] like the great mountains; thy judgments [are] a great deep: O LORD, thou preservest man and beast.
- Young's Literal Translation (YLT)
- Thy righteousness [is] as mountains of God, Thy judgments [are] a great deep. Man and beast Thou savest, O Jehovah.
Read in context
- 4ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
- 5ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.
- 6ನಿನ್ನ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿನ್ನ ನ್ಯಾಯತೀರ್ಪುಗಳು ಮಹಾ ಅಗಾಧವೇ. ಓ ಕರ್ತನೇ, ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
- 7ಓ ದೇವರೇ, ನಿನ್ನ ಪ್ರೀತಿ ಕರುಣೆಯು ಎಷ್ಟೋ ಶ್ರೇಷ್ಠ ವಾದದ್ದು! ಮನುಷ್ಯನ ಮಕ್ಕಳು ನಿನ್ನ ರೆಕ್ಕೆಗಳ ನೆರಳಿನಲ್ಲಿ ಭರವಸೆ ಇಡುತ್ತಾರೆ.
- 8ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
Cross references
- Romans 11:33 ರೋಮಾಪುರದವರಿಗೆ 11:33ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
- Isaiah 40:28 ಯೆಶಾಯ 40:28ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
- Psalm 77:19 ಕೀರ್ತನೆಗಳು 77:19ನಿನ್ನ ಮಾರ್ಗವು ಸಮುದ್ರದಲ್ಲಿ ಅದೆ; ನಿನ್ನ ಹಾದಿಯು ಬಹಳ ನೀರುಗಳಲ್ಲಿ ಅವೆ; ನಿನ್ನ ಹೆಜ್ಜೆಗಳು ತಿಳಿಯ ಲ್ಪಡಲಿಲ್ಲ.ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Job 37:23 ಯೋಬನು 37:23ಸರ್ವ ಶಕ್ತನನ್ನು ನಾವು ಕಂಡುಕೊಳ್ಳುವದಿಲ್ಲ; ಆತನು ಶಕ್ತಿಯಲ್ಲಿಯೂ ನ್ಯಾಯತೀರ್ಪಿನಲ್ಲಿಯೂ ಬಹುನೀತಿಯಲ್ಲಿಯೂ ಉನ್ನ ತನಾಗಿದ್ದಾನೆ; ಆತನು ಶ್ರಮೆಪಡಿಸುವದಿಲ್ಲ.ಆದ ದರಿಂದ ಮನುಷ್ಯರು ಆತನಿಗೆ ಭಯಪಡುತ್ತಾರೆ; ಹೃದಯದಲ್ಲಿ ಜ್ಞಾನಿಗಳಾದವರೆಲ್ಲರನ್ನು ಆತನು ಲಕ್ಷಿಸುವದಿಲ್ಲ.
- Psalm 71:19 ಕೀರ್ತನೆಗಳು 71:19ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- Nehemiah 9:6 ನೆಹೆಮೀಯ 9:6ನೀನು ಒಬ್ಬನೇ ಕರ್ತನಾಗಿದ್ದೀ. ನೀನು ಆಕಾಶವನ್ನೂ ಆಕಾಶಗಳ ಆಕಾಶವನ್ನೂ ಅವು ಗಳ ಸಮಸ್ತ ಸೈನ್ಯವನ್ನೂ ಭೂಮಿಯನ್ನೂ ಅದರ ಲ್ಲಿರುವವುಗಳನ್ನೂ ಸಮುದ್ರಗಳನ್ನೂ ಅವುಗಳೊಳ ಗಿರುವ ಸಮಸ್ತವನ್ನೂ ಉಂಟು ಮಾಡಿದ್ದಲ್ಲದೆ ಅವು ಗಳನ್ನೆಲ್ಲಾ ಕಾಪಾಡುತ್ತೀ. ಇದಲ್ಲದೆ ಆಕಾಶಗಳ ಸೈನ್ಯವು ನಿನ್ನನ್ನು ಆರಾಧಿಸುತ್ತದೆ.
- 1 Timothy 4:10 1 ತಿಮೊಥೆಯನಿಗೆ 4:10ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
- Matthew 11:25–26 ಮತ್ತಾಯನು 11:25–26ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
- Psalm 104:14–35 ಕೀರ್ತನೆಗಳು 104:14–35ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ. ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ. ಆತನು ನೆಟ್ಟ ಕರ್ತನ ಮರಗಳಾದ ಲೆಬನೋನಿನ ದೇವದಾರುಗಳು ತೃಪ್ತಿ ಯಾಗುತ್ತವೆ. ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ಬಕದ ಮನೆಯು ತುರಾಯಿ ಗಿಡಗಳಲ್ಲಿ ಅದೆ. ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ. ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ. ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ. ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ. ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ. ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ. ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ. ದೊಡ್ಡದೂ ವಿಶಾಲವಾದದ್ದೂ ಆದ ಸಮುದ್ರವದೆ; ಅದರಲ್ಲಿ ಲೆಕ್ಕವಿಲ್ಲದ ಜೀವಜಂತುಗಳೂ ಸಣ್ಣ ದೊಡ್ಡ ಮೃಗಗಳೂ ಅವೆ. ಅದರಲ್ಲಿ ಹಡಗುಗಳು ಹೋಗು ತ್ತವೆ; ಅದರಲ್ಲಿ ಆಡುವದಕ್ಕೆ ನೀನು ರೂಪಿಸಿದ ಲೆವಿ ಯಾತಾನವು ಅದೆ. ನೀನು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವಹಾಗೆ ಅವುಗಳೆಲ್ಲಾ ನಿನ್ನನ್ನು ಕಾದುಕೊಳ್ಳುತ್ತವೆ. ನೀನು ಅವುಗಳಿಗೆ ಕೊಡಲು ಅವು ಕೂಡಿಸುತ್ತವೆ; ನೀನು ನಿನ್ನ ಕೈ ತೆರೆಯಲು ಒಳ್ಳೇ ದರಿಂದ ತೃಪ್ತಿಯಾಗುತ್ತವೆ. ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ. ನೀನು ನಿನ್ನ ಶ್ವಾಸ ವನ್ನು ಕಳುಹಿಸಲು ಅವು ನಿರ್ಮಿಸಲ್ಪಡುತ್ತವೆ; ನೀನು ಭೂಮಿಯ ಮುಖವನ್ನು ಹೊಸದಾಗಿ ಮಾಡುತ್ತೀ. ಕರ್ತನ ಮಹಿಮೆಯು ಯುಗಯುಗಕ್ಕೂ ಇರಲಿ; ಕರ್ತನು ತನ್ನ ಕೆಲಸಗಳಲ್ಲಿ ಸಂತೋಷಪಡಲಿ. ಆತನು ಭೂಮಿಯನ್ನು ದೃಷ್ಟಿಸಲು ಅದು ನಡು ಗುತ್ತದೆ; ಬೆಟ್ಟಗಳನ್ನು ಮುಟ್ಟಲು ಅವು ಹೊಗೆ ಹಾಯುತ್ತವೆ. ನಾನು ಜೀವಿತಕಾಲವೆಲ್ಲಾ ಕರ್ತನಿಗೆ ಹಾಡು ವೆನು ನಾನು ಇರುವ ವರೆಗೆ ದೇವರನ್ನು ಕೀರ್ತಿಸುವೆನು. ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ. ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.
- Psalm 92:5 ಕೀರ್ತನೆಗಳು 92:5ಕರ್ತನೇ, ನಿನ್ನ ಕೆಲಸಗಳು ಎಷ್ಟೋ ದೊಡ್ಡವು! ನಿನ್ನ ಯೋಚನೆಗಳು ಬಹಳ ಆಳವಾಗಿವೆ.
- Isaiah 45:19 ಯೆಶಾಯ 45:19ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ; ವ್ಯರ್ಥವಾಗಿ ನನ್ನನ್ನು ಹುಡುಕಿರಿ ಎಂದು ಯಾಕೋಬನ ವಂಶ ದವರಿಗೆ ನಾನು ಹೇಳಲಿಲ್ಲ, ಕರ್ತನಾದ ನಾನೇ ನೀತಿ ಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.