1 Samuel · chapter 17 · verse 32
1 Samuel 17:32 in Kannada
ಆಗ ದಾವೀದನು ಸೌಲನಿಗೆ--ಅವನ ನಿಮಿತ್ತ ವಾಗಿ ಯಾವನ ಹೃದಯವು ಕುಗ್ಗಬಾರದು; ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧ ಮಾಡುವನು ಅಂದನು.
Aaga daaveedanu saulanige--avana nimitta vaagi yaavana hrudayavu kuggabaaradu; ninna sevakanu hogi ee philishtiyana sangada yuddha maaduvanu andanu.
1 Samuel 17:32 in English
- King James Version (KJV)
- And David said to Saul, Let no man’s heart fail because of him; thy servant will go and fight with this Philistine.
- World English Bible (WEB)
- David said to Saul, “Let no man’s heart fail because of him. Your servant will go and fight with this Philistine.”
- American Standard Version (ASV)
- And David said to Saul, Let no man’s heart fail because of him; thy servant will go and fight with this Philistine.
- Bible in Basic English (BBE)
- And David said to Saul, Let no man's heart become feeble because of him; I, your servant, will go out and have a fight with this Philistine.
- Darby Translation (DBY)
- And David said to Saul, Let no man's heart fail because of him: thy servant will go and fight with this Philistine.
- Webster's Bible (WBS)
- And David said to Saul, Let no man's heart fail because of him; thy servant will go and fight with this Philistine.
- Young's Literal Translation (YLT)
- and David saith unto Saul, 'Let no man's heart fall because of him, thy servant doth go, and hath fought with this Philistine.'
Read in context
- 30ಅವನನ್ನು ಬಿಟ್ಟು ಬೇರೊಬ್ಬನ ಕಡೆಗೆ ತಿರಿಗಿಕೊಂಡು ಹಾಗೆಯೇ ಕೇಳಿದನು. ಆಗ ಜನರು ಮೊದಲು ಹೇಳಿದ ಹಾಗೆಯೇ ಅವನಿಗೆ ಪ್ರತ್ಯುತ್ತರಕೊಟ್ಟರು.
- 31ದಾವೀದನು ಹೇಳಿದ ಮಾತುಗಳನ್ನು ಕೇಳಿದವರು ಸೌಲನಿಗೆ ತಿಳಿಸಿದರು. ಅವನು ಅವನನ್ನು ಕರೇ ಕಳುಹಿಸಿದನು.
- 32ಆಗ ದಾವೀದನು ಸೌಲನಿಗೆ--ಅವನ ನಿಮಿತ್ತ ವಾಗಿ ಯಾವನ ಹೃದಯವು ಕುಗ್ಗಬಾರದು; ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧ ಮಾಡುವನು ಅಂದನು.
- 33ಆಗ ಸೌಲನು ದಾವೀದ ನಿಗೆ--ಈ ಫಿಲಿಷ್ಟಿಯನ ಮೇಲೆ ಯುದ್ಧಮಾಡಲು ನಿನ್ನಿಂದಾಗದು; ಯಾಕಂದರೆ ನೀನು ಹುಡುಗನಾಗಿದ್ದೀ; ಅವನು ಚಿಕ್ಕಂದಿನಿಂದ ಯುದ್ಧದ ಮನುಷ್ಯನಾಗಿದ್ದಾನೆ ಅಂದನು.
- 34ದಾವೀದನು ಸೌಲನಿಗೆ--ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿ ಇರುವ ಕುರಿಮರಿಯನ್ನು ಹಿಡಿದವು.
Cross references
- 1 Samuel 16:18 1 ಸಮುವೇಲನು 16:18ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.
- Deuteronomy 20:1–3 ಧರ್ಮೋಪದೇಶಕಾಂಡ 20:1–3ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ. ನೀವು ಯುದ್ಧಕ್ಕೆ ಸವಿಾಪ ಬಂದಾಗ ಯಾಜಕನು ಹತ್ತಿರ ಬಂದು ಜನರ ಸಂಗಡ ಮಾತನಾಡಿ ಅವ ರಿಗೆ-- ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ;
- Psalm 3:6 ಕೀರ್ತನೆಗಳು 3:6ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು.
- Isaiah 35:4 ಯೆಶಾಯ 35:4ಭಯಭ್ರಾಂತ ಹೃದಯವುಳ್ಳವರಿಗೆ--ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ಪ್ರತಿಫಲವನ್ನು ಕೊಡುವದಕ್ಕೂ ಆತನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಅವರಿಗೆ ಹೇಳಿರಿ.
- Psalm 27:1–3 ಕೀರ್ತನೆಗಳು 27:1–3ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- Numbers 14:9 ಅರಣ್ಯಕಾಂಡ 14:9ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು.
- 1 Samuel 14:6 1 ಸಮುವೇಲನು 14:6ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
- Hebrews 12:12 ಇಬ್ರಿಯರಿಗೆ 12:12ಹೀಗಿರುವದ ರಿಂದ ಜೋಲು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ.
- Numbers 13:30 ಅರಣ್ಯಕಾಂಡ 13:30ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.
- Joshua 14:12 ಯೆಹೋಶುವ 14:12ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು.