Skip to content
ThuthiThuthiThuthi
Bible verses by topic

Prayer Bible Verses in Kannada

ಪ್ರಾರ್ಥನೆ ವಚನಗಳು

Verses that teach and encourage prayer.

  1. ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು.

    Call unto me, and I will answer thee, and shew thee great and mighty things, which thou knowest not.

    Jeremiah 33:3 (ಯೆರೆಮೀಯ 33:3)
  2. ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.

    Ask, and it shall be given you; seek, and ye shall find; knock, and it shall be opened unto you: For every one that asketh receiveth; and he that seeketh findeth; and to him that knocketh it shall be opened.

    Matthew 7:7–8 (ಮತ್ತಾಯನು 7:7–8)
  3. ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.

    Be careful for nothing; but in every thing by prayer and supplication with thanksgiving let your requests be made known unto God.

    Philippians 4:6 (ಫಿಲಿಪ್ಪಿಯವರಿಗೆ 4:6)
  4. ಯಾವಾಗಲೂ ಸಂತೋಷಿಸಿರಿ; ಎಡೆಬಿಡದೆ ಪ್ರಾರ್ಥನೆ ಮಾಡಿರಿ. ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.

    Rejoice evermore. Pray without ceasing. In every thing give thanks: for this is the will of God in Christ Jesus concerning you.

    1 Thessalonians 5:16–18 (1 ಥೆಸಲೊನೀಕದವರಿಗೆ 5:16–18)
  5. ಆದ ಕಾರಣ ನಾನು ನಿಮಗೆ ಹೇಳುವದೇನಂದರೆ--ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸು ತ್ತೀರೋ ಅವು ನಿಮಗೆ ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ.

    Therefore I say unto you, What things soever ye desire, when ye pray, believe that ye receive [them], and ye shall have [them].

    Mark 11:24 (ಮಾರ್ಕನು 11:24)
  6. ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.

    Confess [your] faults one to another, and pray one for another, that ye may be healed. The effectual fervent prayer of a righteous man availeth much.

    James 5:16 (ಯಾಕೋಬನು 5:16)
  7. ಆದರೆ ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.

    But thou, when thou prayest, enter into thy closet, and when thou hast shut thy door, pray to thy Father which is in secret; and thy Father which seeth in secret shall reward thee openly.

    Matthew 6:6 (ಮತ್ತಾಯನು 6:6)
  8. ನಾವು ಆತನ ಚಿತ್ತಾನುಸಾರ ವಾಗಿ ಏನಾದರೂ ಬೇಡಿಕೊಂಡರೆ ಆತನು ಕೇಳು ತ್ತಾನೆಂಬ ಭರವಸವು ಆತನಲ್ಲಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಆಶಿಸಿದವುಗಳು ಆತನಿಂದ ನಮಗೆ ದೊರೆತವೆಂಬದು ನಮಗೆ ತಿಳಿದದೆ.

    And this is the confidence that we have in him, that, if we ask any thing according to his will, he heareth us: And if we know that he hear us, whatsoever we ask, we know that we have the petitions that we desired of him.

    1 John 5:14–15 (1 ಯೋಹಾನನು 5:14–15)
  9. ಕರ್ತನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

    The LORD [is] nigh unto all them that call upon him, to all that call upon him in truth.

    Psalm 145:18 (ಕೀರ್ತನೆಗಳು 145:18)
  10. ನಾನು ನಿಮಗೆ ತಿರಿಗಿ ಹೇಳುವದೇನಂದರೆ --ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವ ವಿಷಯಕ್ಕಾದರೂ ಭೂಮಿಯ ಮೇಲೆ ಸಮ್ಮತಿಸಿದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದು. ಯಾಕಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬರುತ್ತಾರೋ ಅವರ ಮಧ್ಯ ದಲ್ಲಿ ನಾನು ಇದ್ದೇನೆ ಅಂದನು.

    Again I say unto you, That if two of you shall agree on earth as touching any thing that they shall ask, it shall be done for them of my Father which is in heaven. For where two or three are gathered together in my name, there am I in the midst of them.

    Matthew 18:19–20 (ಮತ್ತಾಯನು 18:19–20)
  11. ಹಾಗೆಯೇ ಆತ್ಮನು ಸಹ ನಮ್ಮ ಬಲಹೀನತೆ ಗಳಿಗೆ ಸಹಾಯಮಾಡುತ್ತಾನೆ; ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲವಾದ್ದರಿಂದ ಆತ್ಮನು ತಾನೇ ಉಚ್ಚರಿಸಲಾಗ ದಂಥ ನರಳಾಟದಿಂದ ನಮಗೋಸ್ಕರ ವಿಜ್ಞಾಪನೆ ಮಾಡುತ್ತಾನೆ.

    Likewise the Spirit also helpeth our infirmities: for we know not what we should pray for as we ought: but the Spirit itself maketh intercession for us with groanings which cannot be uttered.

    Romans 8:26 (ರೋಮಾಪುರದವರಿಗೆ 8:26)
  12. ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.

    If my people, which are called by my name, shall humble themselves, and pray, and seek my face, and turn from their wicked ways; then will I hear from heaven, and will forgive their sin, and will heal their land.

    2 Chronicles 7:14 (2 ಪೂರ್ವಕಾಲವೃತ್ತಾಂತ 7:14)

More Bible verses in Kannada

Kannada Bible: Kannada Old Version, public domain.

King James Version: public domain.