Fear and worry Bible Verses in Kannada
ಭಯ, ಚಿಂತೆ ವಚನಗಳು
"Fear not" verses for anxious and fearful days.
ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
Fear thou not; for I [am] with thee: be not dismayed; for I [am] thy God: I will strengthen thee; yea, I will help thee; yea, I will uphold thee with the right hand of my righteousness.
Isaiah 41:10 (ಯೆಶಾಯ 41:10) ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?
[A Psalm] of David. The LORD [is] my light and my salvation; whom shall I fear? the LORD [is] the strength of my life; of whom shall I be afraid?
Psalm 27:1 (ಕೀರ್ತನೆಗಳು 27:1) ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ.
For God hath not given us the spirit of fear; but of power, and of love, and of a sound mind.
2 Timothy 1:7 (2 ತಿಮೊಥೆಯನಿಗೆ 1:7) ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
Take therefore no thought for the morrow: for the morrow shall take thought for the things of itself. Sufficient unto the day [is] the evil thereof.
Matthew 6:34 (ಮತ್ತಾಯನು 6:34) ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.
Casting all your care upon him; for he careth for you.
1 Peter 5:7 (1 ಪೇತ್ರನು 5:7) ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.
What time I am afraid, I will trust in thee.
Psalm 56:3 (ಕೀರ್ತನೆಗಳು 56:3) ನಿನಗೆ ಆಜ್ಞಾ ಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗು ವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು.
Have not I commanded thee? Be strong and of a good courage; be not afraid, neither be thou dismayed: for the LORD thy God [is] with thee whithersoever thou goest.
Joshua 1:9 (ಯೆಹೋಶುವ 1:9) ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ. ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
But now thus saith the LORD that created thee, O Jacob, and he that formed thee, O Israel, Fear not: for I have redeemed thee, I have called [thee] by thy name; thou [art] mine. When thou passest through the waters, I [will be] with thee; and through the rivers, they shall not overflow thee: when thou walkest through the fire, thou shalt not be burned; neither shall the flame kindle upon thee.
Isaiah 43:1–2 (ಯೆಶಾಯ 43:1–2) ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.
Thou shalt not be afraid for the terror by night; [nor] for the arrow [that] flieth by day; [Nor] for the pestilence [that] walketh in darkness; [nor] for the destruction [that] wasteth at noonday.
Psalm 91:5–6 (ಕೀರ್ತನೆಗಳು 91:5–6) ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.
Peace I leave with you, my peace I give unto you: not as the world giveth, give I unto you. Let not your heart be troubled, neither let it be afraid.
John 14:27 (ಯೋಹಾನನು 14:27) ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.
Be strong and of a good courage, fear not, nor be afraid of them: for the LORD thy God, he [it is] that doth go with thee; he will not fail thee, nor forsake thee.
Deuteronomy 31:6 (ಧರ್ಮೋಪದೇಶಕಾಂಡ 31:6) ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
The LORD [is] on my side; I will not fear: what can man do unto me?
Psalm 118:6 (ಕೀರ್ತನೆಗಳು 118:6)
More Bible verses in Kannada
- Blessing ಆಶೀರ್ವಾದ
- Comfort ಆದರಣೆ
- Strength ಬಲ
- Motivation and success ಜಯ
- Love ಪ್ರೀತಿ
- Peace ಸಮಾಧಾನ
- Faith ನಂಬಿಕೆ
- Healing ಸ್ವಸ್ಥತೆ
- Prayer ಪ್ರಾರ್ಥನೆ
- Thanksgiving ಕೃತಜ್ಞತೆ
- Birthday ಹುಟ್ಟುಹಬ್ಬ
- Wedding and marriage ಮದುವೆ
- New Year ಹೊಸ ವರ್ಷ
- Children ಮಕ್ಕಳು
- Forgiveness ಕ್ಷಮೆ
- Salvation ರಕ್ಷಣೆ
- Holy Spirit ಪವಿತ್ರಾತ್ಮ
- Christmas ಕ್ರಿಸ್ಮಸ್
- Good Friday and Easter ಶುಭ ಶುಕ್ರವಾರ, ಈಸ್ಟರ್